ಸಂವಿಧಾನ ಮತ್ತು ಅಂಬೇಡ್ಕರ್‌ರನ್ನು ರಕ್ಷಾ ಕವಚವಾಗಿ ಬಳಸಿಕೊಳ್ಳಲು ಪಿಎಫ್ಐ ಉಗ್ರರು ಸಂಚು : ಬಿಜೆಪಿ

ಸಂವಿಧಾನ(Constitution), ಅಂಬೇಡ್ಕರ್(Dr BR Ambedkar) ಹಾಗೂ ರಾಷ್ಟ್ರ ಧ್ವಜವನ್ನು ತಮ್ಮ ಹಿಡನ್ ಅಜೆಂಡಾಕ್ಕೆ ರಕ್ಷಾ ಕವಚವಾಗಿ ಬಳಸಿಕೊಳ್ಳಲು ಪಿಎಫ್ಐ(PFI) ಉಗ್ರರು ಸಂಚು ನಡೆಸಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳನ್ನು ಬಳಸಿಕೊಂಡು ಸಮಾಜಘಾತುಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ.

ಇವರಿಗೆ `ಸಹಾಯ ಹಸ್ತ’ ಯಾರದ್ದು? ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವುದಕ್ಕಾಗಿ ಪಿಎಫ್ಐ ಉಗ್ರರು ಮೂರು ಹಂತದ ಯೋಜನೆ ರೂಪಿಸಿರುವುದು ಈಗ ಬಯಲಾಗಿದೆ.

ಗುಪ್ತ ಸಶಸ್ತ್ರ ಪಡೆ ರಚಿಸಿ ವಿರೋಧಿಗಳ ನಿರ್ನಾಮ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದು ಯಾರಿಗೆ? ಎಂದು ಬಿಜೆಪಿ(BJP) ಪ್ರಶ್ನಿಸಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ದೇಶವನ್ನು ಛಿದ್ರಗೊಳಿಸಲು ಬಾಹ್ಯ ಶಕ್ತಿಗಳ ಆಹ್ವಾನಿಸುವುದಕ್ಕೂ ಪಿಎಫ್ಐ ದುಷ್ಟರು ಹೇಸುತ್ತಿಲ್ಲ.

https://vijayatimes.com/jds-party-janatha-mithra/

ಪಿಎಫ್ಐ ಉಗ್ರರ ರಹಸ್ಯ ಕಾರ್ಯಸೂಚಿಯಲ್ಲಿ ಏನಿದೆಯೋ, ಅದೇ ನೆಲೆಯಲ್ಲಿ ಕಾಂಗ್ರೆಸ್(Congress) ಮಾತನಾಡುತ್ತಿದೆ. ಕಾಂಗ್ರೆಸ್ ಹಾಗೂ ಪಿಎಫ್ಐ ಆಳ-ಅಗಲದ ಬಗ್ಗೆ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆಶಿ(DKS) ಬಳಗಕ್ಕೆ ಸ್ಪಷ್ಟ ಮಾಹಿತಿ ಇರಬಹುದೇ? ಎಂದು ಪ್ರಶ್ನಿಸಿದೆ.


ಇದೇ ವೇಳೆ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಲೇವಡಿ ಮಾಡಿರುವ ಬಿಜೆಪಿ, ವಿರೋಧ ಪಕ್ಷದ ನಾಯಕರೇ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ.

ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು? ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮನಃಸ್ಥಿತಿಗೆ ಈ ಮಹಿಳೆ ಕಪಾಳಮೋಕ್ಷ ಮಾಡಿರುವುದು ಸಿದ್ದರಾಮಯ್ಯ ಅವರ ತುಷ್ಠೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ. 

ಹಣ ನೀಡಿ ಧರ್ಮ ಸಂಘರ್ಷ ಸೃಷ್ಟಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ವಿಫಲವಾಗಿದೆ. ಸಿದ್ದರಾಮಯ್ಯ ಅವರ ಅತಿ ತುಷ್ಠೀಕರಣ ನಡೆ ಮಹಿಳೆಗೂ ಬೇಸರ ತರಿಸಿದೆ. ಹಣ ನೀಡುವ ಮೂಲಕ ಸಮಾಧಾನ ಮಾಡಲು ಯತ್ನಿಸಿದ ಮಾಜಿ ಮುಖ್ಯಮಂತ್ರಿಗಳಿಗೆ “ನ್ಯಾಯ ಕೊಡಿಸಿ, ನಿಮ್ಮ ಹಣ ಬೇಡ” ಎಂದು ಮಹಿಳೆ ತಿರಸ್ಕರಿಸಿದ್ದಾರೆ. ಇದನ್ನು ನೋಡಿದಾಗ ಈ ತಿರಸ್ಕಾರದ ಭಾವನೆ ರಾಜ್ಯದ ಎಲ್ಲಾ ಜನರಲ್ಲಿ ಮೂಡಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಿದ್ದರಾಮೋತ್ಸವದ ಹೆಸರಿನಲ್ಲಿ ಎತ್ತಿದ ಚಂದಾ ಹಣವನ್ನು ಸಿದ್ದರಾಮಯ್ಯ ದರ್ಪ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು, ಸಿದ್ದರಾಮಯ್ಯನವರ ಜಾತ್ರೆ ಎಂದು ಲೇವಡಿ ಮಾಡಿದೆ.

Latest News

ದೇಶ-ವಿದೇಶ

“ನಮ್ಮ ಮೆಸ್ ಊಟವನ್ನು ಪ್ರಾಣಿಗಳೂ ಸಹ ತಿನ್ನಲು ಸಾಧ್ಯವಿಲ್ಲ”; ಕಣ್ಣೀರಿಟ್ಟ ಪೇದೆ, ವೀಡಿಯೋ ವೈರಲ್

ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದಾರಿಹೋಕರ ಬಳಿ ಮನೋಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.