ದಾನಮ್ಮಳ ಹತ್ಯೆ(Murder) ಮಾಡಿದವರು ಮೇಲ್ಜಾತಿಯವರು ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddarmaiah), ಯೋಗೇಶ್ ಗೌಡ ಹತ್ಯೆ ಮಾಡಿದವರು ಯಾರು ಎಂದು ಏಕೆ ಹೇಳಲಿಲ್ಲ? ಕೊಲೆ ಆರೋಪಿ ಅವರದೇ ಪಕ್ಷದ ವಿನಯ್ ಕುಲಕರ್ಣಿ ಎಂಬುದು ಎಲ್ಲರಿಗೂ ತಿಳಿದಿದೆ. ಸಿದ್ದರಾಮಯ್ಯನವರೇ, ಹತ್ಯೆಯಲ್ಲೂ ಜಾತಿ ಹುಡುಕುವ ಅಲ್ಪ ಮಾನಸಿಕತೆ ಏಕೆ? ಎಂದು ಬಿಜೆಪಿ(BJP) ಪ್ರಶ್ನಿಸಿದೆ.
“ಸುಳ್ಸಿದ್ರಾಮಯ್ಯ” ಎಂಬ ಹ್ಯಾಷ್ಟ್ಯಾಗ್(Hashtag) ಬಳಸಿ ಸರಣಿ ಟ್ವೀಟ್(Tweet) ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಪ್ರಕಟಿಸಿರುವ ಪುಸ್ತಕದಲ್ಲಿ ಹತ್ಯೆಗೆ ಕಾರಣ ನಮೂದಿಸದೆ.

ಹತ್ಯೆ ಮಾಡಿದವರು ಯಾರು ಎಂಬುದು ನಮೂದಿಸಲಾಗಿದೆ. ತಮ್ಮದೇ ಪಕ್ಷದ ನಾಯಕ ವಿನಯ್ ಕುಲಕರ್ಣಿ ಹೆಸರನ್ನು ಮುಚ್ಚಿಡಲು ಸಿದ್ದರಾಮಯ್ಯ ಈ ತಂತ್ರ ಹೆಣೆದಿದ್ದಾರೆ. ಅಲ್ಲದೆ, ಹತ್ಯೆ ಮಾಡಿದವರ ಧರ್ಮದ ವಿವರ ನೀಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದೆ. ಸಿದ್ದರಾಮಯ್ಯ ಪ್ರಕಟಿಸಿದ ಪುಸ್ತಕದಲ್ಲಿ ಹತ್ಯೆಗೆ ಕಾರಣ ಎಂದು ನಮೂದಿಸಿ ಹತ್ಯೆಯ ವಿವರ ಪ್ರಕಟಿಸಿದ್ದಾರೆ. ಆದರೆ ಯೋಗೇಶ್ ಗೌಡ ಹತ್ಯೆಗೆ ಮಾತ್ರ ಜಮೀನು ವ್ಯಾಜ್ಯದಿಂದ ಮೃತಪಟ್ಟರು ಎಂದು ಬರೆದಿದ್ದಾರೆ, ಎಂತಹಾ ಸುಳ್ಳು.
ಅಂದ ಹಾಗೆ ಆ ಕೊಲೆ ಆರೋಪಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಎಂದು ಏಕೆ ನಮೂದಿಸಿಲ್ಲ? ನನ್ನ ವಿರುದ್ಧ ಅಪಪ್ರಚಾರ ನಡೆಸಿದರು ಎಂದು ಸಹಾನುಭೂತಿಗಿಟ್ಟಿಸಲು ಯತ್ನಿಸುವ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗ ಧರ್ಮ ಹಾಗೂ ಜಾತಿ ವಿಭಜನೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದರು. ಒಂದೆಡೆ ವೀರಶೈವ-ಲಿಂಗಾಯಿತ ಧರ್ಮ ವಿಭಜನೆಗೆ ಕೈ ಹಾಕಿ ಇನ್ನೊಂದೆಡೆ ಹಿಂದೂಗಳ ಕೊಲೆಗೆ ಕತ್ತಿಕೊಟ್ಟಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಟೀಕಿಸಿದೆ.