ನಕಲಿ ಗಾಂಧಿ ಕುಟುಂಬದ ಗುಲಾಮಗಿರಿತನ ಪ್ರದರ್ಶನ ಮಾಡಿಕೊಂಡು ಸಮಯ ಕಳೆಯುವ ಕಾಂಗ್ರೆಸ್(Congress) ನಾಯಕರಿಂದ ಈಗ ಅದೇ ನಕಲಿ ಗಾಂಧಿ ಕುಟುಂಬದವರಿಗಾಗಿ ಮೌನ ಪ್ರತಿಭಟನೆಯಂತೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ(Amritha Mahotsava) ಈ ಹೊತ್ತಿನಲ್ಲೂ, ದೇಶದ ಶ್ರೇಷ್ಠತೆಯ ಬಗ್ಗೆ ಸಾರುವ ಬದಲು ನಕಲಿ ಗಾಂಧಿಗಳಿಗಾಗಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.

ಸೋನಿಯಾ ಗಾಂಧಿ(Sonia Gandhi) ಅವರ ಇಡಿ ವಿಚಾರಣೆ(ED Enquiry) ಖಂಡಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಮೌನ ಪ್ರತಿಭಟನೆಯನ್ನು ಲೇವಡಿ ಮಾಡಿರುವ ಬಿಜೆಪಿ(BJP), ಕಾಂಗ್ರೆಸ್ ಪಕ್ಷದ ವಿರುದ್ಧ, ನಾಯಕರ ವಿರುದ್ಧ ಮಾತನಾಡಿದ ಕೆಲವು ನಾಯಕರಿಗೆ ನೋಟಿಸ್ ಕೂಡಾ ನೀಡಲಿಲ್ಲ, ಪ್ರಶ್ನಿಸಲಿಲ್ಲ. ಮಹಿಳಾ ನಾಯಕಿಯೊಬ್ಬರು ಪಕ್ಷದ ನಿಲುವು ಪ್ರಶ್ನಿಸಿದಾಗ ನೋಟಿಸ್ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ಮೌನ, ಕಾಗೆ ಬಂಗಾರ. ನೀರು ಕೇಳಿದ ರೈತರಿಗೆ ಅಂದು ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿತ್ತು. ಪೊಲೀಸರ ನಡೆಯ ಬಗ್ಗೆ ಮೀರ್ಸಾದಿಕ್ ಅಸೆಂಬ್ಲಿಯಲ್ಲಿ ಮೊಸಳೆ ಕಣ್ಣೀರು ಹಾಕಿದ್ದರು.
ಒಂದು ಕಡೆ ಚಿವುಟಿ, ಮತ್ತೊಂದೆಡೆ ತಲೆ ಸವರುವುದು, ಒಂದು ಕಡೆ ಆರ್ಭಟಿಸಿ, ಮತ್ತೊಂದೆಡೆ ಮೌನಕ್ಕೆ ಜಾರುವುದು ಹೊಸತೇನಲ್ಲ ಎಂದು ವ್ಯಂಗ್ಯವಾಡಿದೆ. ವ್ಯಾಪಾರಿಯೊಬ್ಬನ ಕಲ್ಲಂಗಡಿ ಹಣ್ಣು ಕೊಚ್ಚಿ ಹಾಕಿದಾಗ ಆರ್ಭಟಿಸಿ ಬೊಬ್ಬಿರಿದ ಕಾಂಗ್ರೆಸ್ ನಾಯಕರು, ರಾಜಸ್ಥಾನದ ಕನ್ನಯ್ಯ ಲಾಲ್ ಅವರನ್ನು ಕೊಚ್ಚಿಹಾಕಿದ್ದಾಗ, ಚಾಮರಾಜಪೇಟೆಯ(Chamrajpete) ಚಂದುವನ್ನು ಹತ್ಯೆಗೈದಾಗ(Murder) ಮೌನ ಪ್ರತಿಭಟನೆ ಮಾಡಿದರು. ಹಿಂದೂ ದ್ವೇಷಿ ಕಾಂಗ್ರೆಸ್ಸಿಗರು, ಅವರಿಗೆ ಬೇಕಾದಾಗ ಮಾತ್ರ ಮೌನ ಸತ್ಯಾಗ್ರಹ ಮಾಡುತ್ತಾರೆ.

ದಲಿತ ನಾಯಕ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ(Akhanda Sreenivas Murthy) ಮನೆ ಮೇಲೆ ಮತಾಂಧರು ದಾಳಿ ನಡೆಸಿದಾಗ, ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮೌನವಾಗಿತ್ತು. ದಲಿತ ನಾಯಕನ ವಿಚಾರದಲ್ಲೂ ಕಾಂಗ್ರೆಸ್ ಮೌನವಾಗಿದ್ದೇಕೆ? ಎಂದು ಪ್ರಶ್ನಿಸಿದೆ.