ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ : ಬಿಜೆಪಿ ಲೇವಡಿ

ಸ್ಪರ್ಧಿಸಿ ಗೆಲ್ಲಲು ಸೂಕ್ತ ಕ್ಷೇತ್ರವಿಲ್ಲದ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗುವ(Chiefminister) ಕನಸು ಕಾಣುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಅವರನ್ನು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.


`ಬುರಡೆ ರಾಮಯ್ಯʼ ಎಂಬ ಹ್ಯಾಷ್‌ಟ್ಯಾಗ್‌(Hashtag) ಬಳಸಿ ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ನನಗೆ ಕೊಂಕು ನುಡಿಯನ್ನು ಕೇಳಿ ಸಾಕಾಗಿದೆ ಎಂದು ಡಿಕೆಶಿ(DKS) ಆಪ್ತ ಮಾಜಿ ಶಾಸಕನ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ವಿಭಜಿಸಿಯೇ ವಲಸೆರಾಮಯ್ಯ ವಿರಮಿಸುವುದು ನಿಶ್ಚಿತ. ಇದೇ ನನ್ನ ಕೊನೆಯ ಚುನಾವಣೆ(Election) ಎಂದು ಸಿಎಂ ಕುರ್ಚಿ ಮೇಲೆ ಟವೆಲ್ ಎಸೆದಿರುವ ಸಿದ್ದರಾಮಯ್ಯ ಒಂದು ಕಡೆಯಾದರೆ, ಸಿಎಂ ಆಗಲು ಕಾಲ ಕೂಡಿ ಬಂದಿದೆ ಎನ್ನುವ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivkumar) ಇನ್ನೊಂದು ಕಡೆ.

ಈ ನಡುವೆ ಸತೀಶ್ ಜಾರಕಿಹೊಳಿ(Sathish Jarakiholi) ಕೂಡಾ ಸಿಎಂ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್‌ ಈಗ ಒಡೆದ ಮನೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಅಮೃತ ಮಹೋತ್ಸವ ಆಚರಣೆ‌ಗೆ ಹೊಸ ರೇಷ್ಮೆ ಪಂಚೆ ಖರೀದಿಸಿರುವ ಸಿದ್ದರಾಮಯ್ಯ ತುರ್ತಾಗಿ ಒಂದು ದಶಮಾನೋತ್ಸವ ಆಚರಣೆ ಮಾಡಬೇಕು. ಏಕೆಂದರೆ, ಇದೇ ನನ್ನ ಕೊನೆ ಚುನಾವಣೆ ಎಂದು ಘೋಷಿಸಿ ದಶಕದ ಕಾಲವಾಗಿದೆ. ಘೋಷಣೆಗಳು ಮಾತ್ರ ನಿರಂತರವಾಗಿದೆ. ಸ್ಪರ್ಧಿಸಿ ಗೆಲ್ಲಲು ಸೂಕ್ತ ಕ್ಷೇತ್ರವಿಲ್ಲದ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.

ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ. ಅಂಗಳ ಅಳೆಯಲು ಸಾಧ್ಯವಿಲ್ಲದ ವ್ಯಕ್ತಿಯಿಂದ ಆಕಾಶ ಅಳೆಯಲು ಹೊರಟಿರುವುದು ಹಾಸ್ಯಾಸ್ಪದವಲ್ಲವೇ? ಎಂದು ಲೇವಡಿ ಮಾಡಿದೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.