Bengaluru : ಟೀಕೆಗಳು ಬರುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ನನ್ನ ಅನುಮತಿ ಇಲ್ಲದೆಯೇ ಹೆಸರು ಹಾಕಿದ್ದಾರೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಇದು ಹೇಗೆ ಸಾಧ್ಯ?

ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರು, ಮಾಜಿ ಸಚಿವರೇ ಪ್ರಮುಖ ಆಹ್ವಾನಿತರಾಗಿರುವ ಈ ಕಾರ್ಯಕ್ರಮ ಕೆಪಿಸಿಸಿ (KPCC) ವತಿಯಿಂದಲೇ ಆಯೋಜನೆಗೊಂಡಿದ್ದೇ?
ಎಂದು ರಾಜ್ಯ ಬಿಜೆಪಿ (State BJP) “India-China Friendship Association” ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸುತ್ತಿರುವುದರ ಕುರಿತು ಟೀಕಿಸಿದೆ.
https://fb.watch/f9BzsR4Ivh/ “ದುಡಿಯೋ 200 ರೂ. ಅಲ್ಲಿ 100 ರೂ. ಟ್ಯಾಕ್ಸ್ಗೆ ಹೋದ್ರೆ ನಾವೇನು ಮಾಡೋದು?”
ಈ ಕುರಿತು ಟ್ವೀಟ್ (Tweet) ಮಾಡಿ, ದೇಶದ್ರೋಹಿ ಕಾಂಗ್ರೆಸ್ (Congress) ಚೀನಾ (China) ಜೊತೆಗಿನ ಗಡಿ ಸಮಸ್ಯೆ ಪ್ರಸ್ತಾಪಿಸುವ,
ರಾಹುಲ್ ಗಾಂಧಿ (Rahul Gandhi) ಅವರಿಗೆ ತಮ್ಮದೇ ಪಕ್ಷದ ನಾಯಕರು “India-China Friendship Association” ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಕಾಣುತ್ತಿಲ್ಲವೇ?

ಆಮಂತ್ರಣ ಪತ್ರಿಕೆಯ ಪೂರ್ತಿ ಕಾಂಗ್ರೆಸ್ ನಾಯಕರ ಹೆಸರುಗಳಿವೆ. ಕಾಂಗ್ರೆಸ್ಗೂ, ಚೀನಾ ದೇಶಕ್ಕೂ ಇರುವ ಸಂಬಂಧವೇನು? ಎಂದು ಪ್ರಶ್ನಿಸಿದೆ.
ಇನ್ನೊಂದೆಡೆ ಕಾಂಗ್ರೆಸ್ ಚೀನಾಕ್ಕಾಗಿ (China) ಕೆಲಸ ಮಾಡುತ್ತದೆ ಎಂಬ ಅನುಮಾನ ಯಾರಿಗಾದರೂ ಇದ್ದರೆ, ಇದು ಅವರ ಅನುಮಾನವನ್ನು ನಿವಾರಿಸುತ್ತದೆ.
ಇದನ್ನೂ ಓದಿ : https://vijayatimes.com/asia-cup-2022-ind-vs-pak/
ಅಮೆರಿಕ (America) ತನ್ನ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಿದ್ದರೆ ಕಾಂಗ್ರೆಸ್ ಚೀನಾದ ಪರವಾಗಿ ಏಕೆ ನಿಲ್ಲಬೇಕು?
ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ರಾಹುಲ್ ಗಾಂಧಿ ಅವರು ಸಹಿ ಹಾಕಿರುವ ಈ ಎಂಒಯು ಚೀನಾಕ್ಕೆ ಬೆಂಬಲ ನೀಡಿದೆಯೇ? ಎಂದು ಬಿಜೆಪಿ ನಾಯಕ ಸಿ.ಟಿ.ರವಿ (CT Ravi) ಟೀಕಿಸಿದ್ದಾರೆ.

ಬಿಜೆಪಿ (BJP) ಟೀಕೆಗೆ ಸ್ಪಷ್ಟನೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, India-China Friendship Association ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕಂಡು ಆಶ್ಚರ್ಯವಾಯಿತು.