Karnataka : ಸೋಲನ್ನೊಪ್ಪಿಕೊಳ್ಳುವ ಭಾರತವಲ್ಲ, ಗೆಲುವಿನ ಹೊಸ್ತಿಲಲ್ಲಿರುವ ಭಾರತ ಎಂದು ರಾಜ್ಯ ಬಿಜೆಪಿ (state BJP tweeted Congress) ವೀರ್‌ಸಾವರ್ಕರ್ ಭಾವಚಿತ್ರವನ್ನು,
ಬೆಳಗಾವಿ ಸುವರ್ಣಸೌಧದಲ್ಲಿ ಹಾಕುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಈ ಕುರಿತು (state BJP tweeted Congress) ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ,
ನೆಹರು ಕುಟುಂಬದ ಸಕಲ ಸದಸ್ಯರ ಹೆಸರಿಟ್ಟು ಬದುಕಲು ಇದು ಹಳೆಯ ಭಾರತ (India) ಅಲ್ಲ, ವಿಶ್ವಗುರುವಾಗುತ್ತಿರುವ ಭಾರತ ಎಂಬುದನ್ನು ಕಾಂಗ್ರೆಸ್ (Congress) ಅರ್ಥೈಸಿಕೊಳ್ಳಬೇಕು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು, ಬದುಕು ಸವೆಸಿದವರನ್ನು ಸ್ಮರಿಸುವ ಕಾಲದ ಭಾರತ.
ಕಾಲಾಪಾನಿಯಂತಹ ಕಠೋರ ಶಿಕ್ಷೆಯಿಂದ ಸಾವರ್ಕರ್ ಬಿಡುಗಡೆಗೊಂಡ ಪೂರ್ವರಂಗದ ಬಗ್ಗೆ ಇಡೀ ದೇಶಕ್ಕೆ ಸ್ಪಷ್ಟತೆಯಿದೆ. ಅದರ ಬಗ್ಗೆ ಐವತ್ತಕ್ಕೂ ಹೆಚ್ಚಿನ ಸಂಶೋಧನಾತ್ಮಕ ಪುಸ್ತಕಗಳು, ನಿಖರ ದಾಖಲೆಗಳ ಸಮೇತ ಪ್ರಕಟವಾಗಿವೆ.
ಆದರೆ ಕಾಂಗ್ರೆಸ್ ಮತಬ್ಯಾಂಕಿನ ಬೇಟೆಗಾಗಿ ತಮ್ಮ ಹಳೆ ವಿತಂಡವಾದಗಳ ಸುಳಿಗಳೊಳಗೆ ಸುತ್ತಾಡುತ್ತಿದೆ.
ಇದನ್ನೂ ಓದಿ : https://vijayatimes.com/vasanthi-nalidaga-in-sandalwood/
ಇನ್ನೊಂದು ಟ್ವೀಟ್‌ನಲ್ಲಿ, ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದ ವಿನಯ್ ಕುಲಕರ್ಣಿಯೇ(Vinay Kulkarni) ವಿನಾ ವೀರ ಸಾವರ್ಕರ್ ಅಲ್ಲ ಈ ರಾಜಕಾರಣದ ದುರಂತ ಏನೆಂದರೆ,
ಕೊತ್ವಾಲನ ತಟ್ಟೆ ಕಾಸಲ್ಲಿ ಜೀವನ ಸಾಗಿಸುತ್ತಿದ್ದವರೆಲ್ಲ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸಾವರ್ಕರ್ ಬಗ್ಗೆ ಮಾತಾಡುತ್ತಿದ್ದಾರೆ.
ಜೈಲಿಗೆ ಹೋದವರು ಯಾರು? ಯಾಕೆ ಹೋದರು? ಯಾವ ಆಧಾರದಲ್ಲಿ ಹೊರಬಂದರು ಎನ್ನುವುದನ್ನು ಖುದ್ದು ಅನುಭವವಿದ್ದ ಹಾಗೆ ಮಾತಾಡುವ ಬಿ.ಕೆ.ಹರಿಪ್ರಸಾದ್(BK Hariprasad) ಅವರೇ ನಿಮ್ಮ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಯಾವ ಕಾರಣಕ್ಕಾಗಿ ತಿಹಾರ್ ಜೈಲಿಗೆ ಹೋದರು ಎಂಬುದನ್ನೂ ಹೇಳಿ. ಹಾಗೆ ಜೈಲಿಗೆ ಹೋಗಿಬಂದ ಇತರ ಕಾಂಗ್ರೆಸಿಗರ ಬಗ್ಗೆಯೂ ತಿಳಿಸಿ.
ಇದನ್ನೂ ನೋಡಿ : https://fb.watch/hxlS7UCah0/ ಸರ್ಕಾರಿ ವಾಹನ ಹೈಡ್ರಾಮ ! Gate crash of corrupt !
ಮತ್ತೊಂದು ಟ್ವೀಟ್‌ನಲ್ಲಿ, ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕಾಗಿ, ದೇಶಕ್ಕಾಗಿ ಬಲಿದಾನಗೈದ ಕ್ರಾಂತಿಕಾರಿಗಳನ್ನು ಕೊಲೆಗಾರರು ಎನ್ನುತ್ತಿದೆ. ಸೋಜಿಗವೆಂದರೆ ದೇಶದ ಬಹುತೇಕ ಕ್ರಾಂತಿಕಾರಿಗಳನ್ನು ಬ್ರಿಟಿಷರಿಗೊಪ್ಪಿಸಿದವರೇ ಅಂದಿನ ಕೆಲ ಕಾಂಗ್ರೆಸಿಗರು.
ಅಂತಹ ಕೆಲ ದ್ರೋಹಿಗಳೇ ತದನಂತರದಲ್ಲಿ ಕಾಂಗ್ರೆಸಿನಿಂದ ಶಾಸಕ-ಸಂಸದರೂ ಆದರು ಎಂದು ರಾಜ್ಯ ಬಿಜೆಪಿಯು, ಕಾಂಗ್ರೆಸ್ ಅವರ ಟ್ವೀಟ್ ಗೆ ಈ ರೀತಿ ಪ್ರತಿಕ್ರೀಯೆ ನೀಡಿದೆ.
- ಮಹೇಶ್.ಪಿ.ಎಚ್