download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ತನ್ನ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ : ಬಿಜೆಪಿ

ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ! ತಾನು ಕಳ್ಳ, ಪರರ ನಂಬ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.
BJP

ತಾನು ಬಹಳ ಸಚ್ಚಾರಿತ್ರ್ಯ ಹೊಂದಿದವರಂತೆ ಬಿಂಬಿಸಿಕೊಳ್ಳುವ ಬಾದಾಮಿ ಶಾಸಕ ಸಿದ್ದರಾಮಯ್ಯ(Siddaramaiah) ಭ್ರಷ್ಟಾಚಾರದ(Corruption) ಬಗ್ಗೆ ಪುಂಖಾನುಪುಂಖ ಮಾತನಾಡುತ್ತಿದ್ದಾರೆ.

ಅವರೇ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು? ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ!

ತಾನು ಕಳ್ಳ, ಪರರ ನಂಬ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

State bjp tweets against siddaramaiah

ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಸಮಾಜವಾದಿಯ ಪೋಸು ಕೊಡುವ ಸಿದ್ದರಾಮಯ್ಯ 70 ಲಕ್ಷ ರೂ ಬೆಲೆಯ ಹ್ಯೂಬ್ಲೊ ಕೈಗಡಿಯಾರ ಕಟ್ಟಿಕೊಂಡಿದ್ದರು! ಆಮದು ಸುಂಕವನ್ನೇ ಪಾವತಿಸದೇ ದೇಶಕ್ಕೆ ತೆರಿಗೆ ವಂಚಿಸಿದ್ದರು.

ಅಲಾರಾಂ ಜಾಸ್ತಿಯೇ ಬಡಿದಿದ್ದರಿಂದ ಕೊನೆಗೆ ಓಡೋಡಿ ಹೋಗಿ ಆಮದು ಸುಂಕ ಪಾವತಿಸಿದ ವ್ಯಕ್ತಿ ಈಗ ನೀತಿ ಪಾಠ ಮಾಡೋದು ಭೂತ ಭಗವದ್ಗೀತೆ ನುಡಿದ ಹಾಗಿದೆ.  ಸಿದ್ದರಾಮಯ್ಯರದ್ದು ಸ್ಪ್ಲಿಟ್ ಪರ್ಸನಾಲಿಟಿ. ಪಕ್ಷದ ಪ್ರಣಾಳಿಕೆಯಲ್ಲಿ ಭಾಗ್ಯಗಳ ಪುಂಗಿ ಊದಿ ಆಶ್ವಾಸನೆ ಕೊಟ್ಟ ಧನರಾಶಿಯೇ ಬೇರೆ,

ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ  ಆ ಭಾಗ್ಯಗಳಿಗೆ ಘೋಷಿಸಿದ ಪುಡಿಗಾಸು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ಸರಿ. ಇಷ್ಟೆಲ್ಲಾ ಹಳವಂಡಗಳ ಮೇಲೆ ಭಾಗ್ಯಗಳ ದುಡ್ಡನ್ನೂ ದೋಚಿದ್ದಾಯಿತು ಎಂದು ಟೀಕಿಸಿದೆ. 

ಕೈ ಪಕ್ಷ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಪಕ್ಷದ ಅಧ್ಯಕ್ಷೆಯಿಂದ ಹಿಡಿದು ಚಾಮರಾಜಪೇಟೆಯ ಪುಢಾರಿ ಶಾಸಕನವರೆಗೂ ಸಾಲು ಸಾಲಾಗಿ ಇ.ಡಿ. ಹಿಡಿತದಲ್ಲಿದ್ದಾರೆ.

ಜಾಮೀನಿನ ಮೇಲೆ ಹೊರಬಂದು ಈಗ ಭ್ರಷ್ಟಾಚಾರದ ಬಗ್ಗೆ ಗಂಟಲು ಹರಿಯುವಂತೆ ಕೂಗುವುದು ಕೈ ಪಕ್ಷದ ಅಧೋಗತಿಯ ಸೂಚನೆ. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ಮಾತ್ರ ನೀರು!  https://vijayatimes.com/ex-japan-pm-shinzo-abe-shot-in-chest/
BJP- State bjp tweets against siddaramaiah

ಕೈಪಕ್ಷದ ರಾಜ್ಯಾಧ್ಯಕ್ಷರಿಗೆ ಭ್ರಷ್ಚಾಚಾರದ ವಿರುದ್ಧ ಮಾತಾಡೋ ನೈತಿಕ ಅರ್ಹತೆಯೇ ಇಲ್ಲ.

317 ಬ್ಯಾಂಕ್ ಖಾತೆಗಳ ಮೂಲಕ ಹವಾಲಾ ದಂಧೆ ಮಾಡಿರುವವರು, ಶಾಂತಿನಗರ ಗೃಹ ನಿರ್ಮಾಣ ಸೊಸೈಟಿಯ 1,456 ಕೋಟಿ ರೂ. ಮೊತ್ತದ ಆಸ್ತಿ ಗುಳುಂ ಮಾಡಿರುವವರು ಸುಭಗರಂತೆ ಬುಡಬುಡಿಕೆ ಮಾತುಗಳನ್ನಾಡುವುದು ಬದನೇಕಾಯಿ ತಿಂದು ವೇದಾಂತ ನುಡಿದಂತೆ ಎಂದು ಟ್ವೀಟ್‌(Tweet) ಮೂಲಕ ಲೇವಡಿ ಮಾಡಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article