Visit Channel

ಹಿಂದೂ ವಿರೋಧಿ ಧೋರಣೆಯಿಂದಲೇ ಸಿದ್ದರಾಮಯ್ಯಗೆ ರಾಜಕೀಯ ಹಿನ್ನಡೆಯಾಗುತ್ತಿದೆ : ಬಿಜೆಪಿ

BJP

ಹಿಂದೂ ವಿರೋಧಿ ಧೋರಣೆಯಿಂದಲೇ ಸಿದ್ದರಾಮಯ್ಯ(Siddaramaiah) ಅವರಿಗೆ ರಾಜಕೀಯ(Political) ಹಿನ್ನಡೆಯಾಗುತ್ತಿದೆ. ಚಾಮುಂಡೇಶ್ವರಿಯಲ್ಲಿ ದೇವಿ ಕೈಹಿಡಿಯಲಿಲ್ಲ. ಬಾದಾಮಿಯಲ್ಲೂ ಬನಶಂಕರಿಯ ಶಾಪ. ಸವದತ್ತಿ ಎಲ್ಲಮ್ಮನೂ ನಿಮ್ಮನ್ನು ಕಾಪಾಡಲಾರಳು. ಸಿದ್ದರಾಮಯ್ಯರ ಪಾಪದ ಕೊಡ ತುಂಬಿದೆ. ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.

BJP


ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ, ನಿಮ್ಮ ಉತ್ಸವ ನಾಲ್ಕು ಕುರ್ಚಿಗಳನ್ನು ತುಂಬ ಬಹುದೇ ಹೊರತು, ನಾಲ್ಕು ಸೀಟುಗಳನ್ನು ಗಳಿಸಿಕೊಡದು. ಸಿದ್ದರಾಮಯ್ಯನವರೇ, ಮೂಲ ಕಾಂಗ್ರೆಸ್ಸಿಗರು ನಿಮ್ಮಿಂದಾಗಿಯೇ ಪಕ್ಷ ತೊರೆಯುತ್ತಿರುವುದು ನಿಜವಲ್ಲವೇ? ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಮತ್ತಷ್ಟು ಖಾಲಿಯಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ನಾಂದಿ ಹಾಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೆಸರು ಘೋಷಿಸದೇ ಇದ್ದಲ್ಲಿ, ಆರು ಪಕ್ಷ ಬಿಟ್ಟು ಬಂದಿರುವ ಸಿದ್ದರಾಮಯ್ಯ ಅವರಿಗೆ ಏಳನೇ ಬಾರಿ ಪಕ್ಷಾಂತರ ಮಾಡುವುದು ಕಷ್ಟವೇ?

ಆ ಭಾಗ್ಯ, ಈ ಭಾಗ್ಯ ಎಂದು ಘೋಷಣೆ ಮಾಡಿದ್ದೇ ಬಂತು, ಜನಪ್ರಿಯತೆ, ಪ್ರಚಾರಕ್ಕಾಗಿ ಮಾಡಿದ ಯಾವ ಕಾರ್ಯವೂ ಈಗ ಸಿದ್ದರಾಮಯ್ಯ ಸಹಾಯಕ್ಕೆ ಬರುತ್ತಿಲ್ಲ. ಹಲವು ಬಿಟ್ಟಿ ಭಾಗ್ಯ ನೀಡಿದ ಸಿದ್ದರಾಮಯ್ಯಗೆ ಈಗ ಕ್ಷೇತ್ರ ಭಾಗ್ಯದ ಫಲಾನುಭವಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಿಂತ ನಾಚಿಗೆಗೇಡಿನ ಸಂಗತಿ ಮತ್ತೊಂದಿದೆಯೇ? ಎಂದು ಪ್ರಶ್ನಿಸಿದೆ.
ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳಲು ತನ್ನದೇ ಪಟಾಲಂ ಜೊತೆಗೂಡಿ ವ್ಯಕ್ತಿ ಪೂಜೋತ್ಸವ ಮಾಡಿದರೆ ಅದನ್ನು ಶಕ್ತಿ ಪ್ರದರ್ಶನ ಎನ್ನುವುದಿಲ್ಲ, ಅದು ಉತ್ತರಕುಮಾರನ ಪೌರುಷ ಅಷ್ಟೇ.

Congress

ತಾಕತ್ತು ಅನ್ನುವುದಿದ್ದರೆ ಈಗಲೇ ಡಿಕೆಶಿ ವಿರುದ್ಧ ಸೆಟೆದು ನಿಲ್ಲಿ, ರಾಜಕೀಯ ಸಂದಿಗ್ಧತೆ ತಂದಿಡುವುದು ಸಾಮರ್ಥ್ಯವೇ? ತಳಹದಿಯಿಲ್ಲದೆ ಮಹಡಿ ಮನೆ ಕಟ್ಟಲು ಸಿದ್ದರಾಮಯ್ಯ ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಸಿಗಲಾರದ ಪರಿಸ್ಥಿತಿ ಯಾವ ನಾಯಕರಿಗೂ ಬರಬಾರದು. ಸಿದ್ದರಾಮಯ್ಯನವರೇ, ಇದಕ್ಕಾಗಿ ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ ಎಂದು ವ್ಯಂಗ್ಯವಾಡಿದೆ.

Latest News

Lal Singh Chadda
ಮನರಂಜನೆ

ಲಾಲ್ ಸಿಂಗ್ ಚಡ್ಡಾ ನಷ್ಟಕ್ಕೆ ವಿತರಕರಿಗೆ ಪರಿಹಾರ ಕೊಡಲು ಸಜ್ಜಾದ್ರಾ ನಟ ಅಮೀರ್ ಖಾನ್?

ಚಿತ್ರದ ವಿತರಕರಿಗೆ ಪರಿಹಾರದ ಮಾದರಿಯನ್ನು ರೂಪಿಸಲು ನಟ ಅಮೀರ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಪ್ರಮುಖ ಸುದ್ದಿ

215 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ ಎಂದು ಹೆಸರಿಸಿದ : ಇ.ಡಿ

215 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ(ED) ಹೆಸರಿಸಿದೆ.

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!