Bengaluru: ಹೊಸ ವರ್ಷದ ಮೊದಲ ಅಧಿವೇಶನ (Session) ಮಾರ್ಚ್ 3ರಂದು ಆರಂಭವಾಗಲಿದೆ. ಹಾಗೂ 7ರಂದು ಬಜೆಟ್ (Budget) ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಹೇಳಿದ್ದಾರೆ. ಈ ಕುರಿತಾಗಿ ಮಾತನಾಡಿದ ಅವರು, ಮೊದಲ ದಿನ ರಾಜ್ಯಪಾಲರು (Governor) ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ (Joint Session of Legislature) ಭಾಷಣ ಮಾಡಲಿದ್ದಾರೆ. ಬಳಿಕ ಅವರ ಭಾಷಣದ ಮೇಲೆ ಚರ್ಚೆ ಇರುತ್ತದೆ ಎಂದಿದ್ದಾರೆ.
ಬಜೆಟ್ (Budget) ಮಾಡುವಾಗ ನಮ್ಮ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ನಮ್ಮ ಸರ್ಕಾರ (Our government) ರೈತರ ಹಿತ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಕರಿಗೆ (Farmers) ಪೂರಕವಾಗಿ ಇರುತ್ತೇನೆ ಎಂಬ ಮಾತು ಕೊಡುತ್ತೇನೆ. ಬೆಲೆ ಏರಿಕೆ (Price rise) ಕೇಂದ್ರ ಮತ್ತು ರಾಜ್ಯ ಸರ್ಕಾರ (Central and State Govt) ಎರಡೂ ಮಾಡಬೇಕು. ರಾಜ್ಯ ಸರ್ಕಾರದ (State Govt) ಕಡೆಯಿಂದ ಬೆಲೆ ಏರಿಕೆ ನಿಯಂತ್ರಿಸಲು (Control the rise) ಏನು ಮಾಡಬೇಕೊ ಅದು ಮಾಡುತ್ತೇವೆ. ಕೇಂದ್ರ ಸರ್ಕಾರ (Central Govt) ಕೂಡಾ ಬೆಲೆ ಏರಿಕೆ ಬಗ್ಗೆ ಸೂಕ್ತ ತೀರ್ಮಾನ (Appropriate conclusion) ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಸೋಮವಾರ ರೈತ ಮುಖಂಡರು ಮತ್ತು ರೈತ ಸಂಘಟನೆಯ (A farmer’s organization) ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ ಸಮಾಲೋಚನಾ ಸಭೆ (Pre-budget consultation meeting) ನಡೆಸಿದ ಮುಖ್ಯಮಂತ್ರಿ (Chief Minister), ತಮ್ಮ ಮೊಣಕಾಲು ನೋವಿನ ಹೊರತಾಗಿಯೂ ಕಳೆದ ಕೆಲವು ದಿನಗಳಿಂದ ತಮ್ಮ ಅಧಿಕೃತ ನಿವಾಸದಲ್ಲಿ ವಿವಿಧ ಇಲಾಖೆಗಳೊಂದಿಗೆ (Various departments) ಇದೇ ರೀತಿಯ ಚರ್ಚೆಗಳನ್ನು ನಡೆಸುತ್ತಿರುವುದಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ರೈತ ನಾಯಕರನ್ನು (Farmer leaders) ಭೇಟಿ ಮಾಡಲು ವಿಧಾನಸೌಧಕ್ಕೆ ಬಂದಿದ್ದಾಗಿ ಹೇಳಿದರು.ಕಳೆದ ಕೆಲವು ತಿಂಗಳುಗಳಿಂದ ಅನ್ನ ಭಾಗ್ಯ (Anna Bhagya) ಮತ್ತು ಗೃಹ ಲಕ್ಷ್ಮಿ ಯೋಜನೆಗಳ (Griha Lakshmi Schemes) ಫಲಾನುಭವಿಗಳಿಗೆ ಹಣವನ್ನು ಪಾವತಿಸದಿರುವ ಬಗ್ಗೆ ದೂರುಗಳ ಕುರಿತಾದ ಪ್ರಶ್ನೆಗೆ, ಈ ಯಾವುದೇ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಹಣ ಪಾವತಿ ವಿಳಂಬವಾದರೆ (If payment is delayed), ಅದನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಸಿಎಂ (CM) ಹೇಳಿದ್ದಾರೆ.