Bengaluru : ರಾಜ್ಯದ ಹಳೇ ಮೈಸೂರು(State Congress controversial statement) ಭಾಗದ ಬಿಜೆಪಿಯ ಜನಸಂಕಲ್ಪಯಾತ್ರೆಗೆ(Janasankalpayatra) ಬಂದ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್, ಕಷ್ಟಕ್ಕೆ ಬಾರದ ಬಿಜೆಪಿ, ಚುನಾವಣೆಗೆ ಬರುವುದು ಮಾತ್ರ ಬಿಡುವುದಿಲ್ಲ ಎಂದು ಟೀಕಿಸಿದೆ.

ಮುಂಬರುವ 2023ರ ವಿಧಾನಸಭಾ ಚುನಾವಣಾ(State Congress controversial statement) ಹಿನ್ನೆಲೆ ರಾಜ್ಯ ಬಿಜೆಪಿ ಸರ್ಕಾರ ನಡೆಸುತ್ತಿರುವ ಜನಸಂಕಲ್ಪಯಾತ್ರೆ ರಾಜ್ಯದ ನಾನಾ ಭಾಗಗಳಲ್ಲಿ ಎಂದಿನಂತೆ ಮುಂದುವರೆಯುತ್ತಿದೆ.
ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraja Bommai) ಅವರ ನೇತೃತ್ವದಲ್ಲಿ ಹಳೇ ಮೈಸೂರು ಭಾಗಕ್ಕೆ ಜನಸಂಕಲ್ಪಯಾತ್ರೆಯನ್ನು ಹೊತ್ತೊಯ್ದ ಬಿಜೆಪಿ,
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಿತ್ತು. ಹಳೇ ಮೈಸೂರು ಭಾಗದ ಜನರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ,
ಕಾಂಗ್ರೆಸ್(Congress) ಭ್ರಷ್ಟ ಪಕ್ಷ, ಕಾಂಗ್ರೆಸ್ ಒಂದು ಪರಿವಾರವಾದಿ ಪಕ್ಷ ಎಂದು ಆರೋಪಿಸಿದರು. ಅಮಿತ್ ಶಾ ಆರೋಪವನ್ನು ಆಲಿಸಿದ ರಾಜ್ಯ ಕಾಂಗ್ರೆಸ್,
ಇದನ್ನೂ ಓದಿ : https://vijayatimes.com/india-never-tolerate-terrorism/
ಚುನಾವಣೆಗಾಗಿ ಕರ್ನಾಟಕದತ್ತ(Karnataka) ಮುಖ ಮಾಡುತ್ತಿರುವ ನರೇಂದ್ರ ಮೋದಿ(Narendra Modi) ಅಮಿತ್ ಶಾ ಜೋಡಿ ಕರ್ನಾಟಕ ಸಂಕಷ್ಟ ಎದುರಿಸುತ್ತಿದ್ದಾಗ ನಾಪತ್ತೆಯಾಗಿದ್ದರು.
ಕಷ್ಟಕ್ಕೆ ಬರಬೇಡ, ಚುನಾವಣೆಗೆ ಮಾತ್ರ ಬಿಡಬೇಡ ಎಂಬಂತಿದೆ ಅವರ ನಡೆ. ಮಂಡ್ಯದಲ್ಲಿ ರೈತರು ಹಲವು ದಿನಗಳಿಂದ ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ,
ಬಿಜೆಪಿಗೆ(BJP) ನೈಜ ಕಾಳಜಿ ಇದ್ದರೆ ಅವರ ಬಳಿ ಹೋಗಲಿ. ಚುನಾವಣೆಗಾಗಿ ಕರ್ನಾಟಕದ ಕಡೆ ‘ದಂಡ’ಯಾತ್ರೆ ಕೈಗೊಂಡಿದ್ದಾರೆ ಬಿಜೆಪಿಯ ದೆಹಲಿ ನಾಯಕರು!
ಗಡಿ ವಿವಾದ ಬಗೆಹರಿಸಾಲಾಗದ ಅಮಿತ್ ಶಾ ಅವರ ಮಾತಿಗೆ ಮಹಾರಾಷ್ಟ್ರ ಕಿಮ್ಮತ್ತು ನೀಡುತ್ತಿಲ್ಲ. ಈ ಕಿಮ್ಮತ್ತಿಲ್ಲದ ವ್ಯಕ್ತಿಗೆ ಕರ್ನಾಟಕದ ಜನತೆ ಬೆಲೆ ಕೊಡುವುದು ಅಸಂಭವ!
ಇದನ್ನೂ ಓದಿ : https://vijayatimes.com/siddaramaiah-reacted-amitshahs-statement/
ಬಿಜೆಪಿ ಅದೆಷ್ಟೇ ಸರ್ಕಸ್ ನಡೆಸಿದರೂ ಜನರ ತಿರಸ್ಕಾರ ಎದುರಿಸುವುದು ನಿಶ್ಚಿತ. ಹಿಂದಿನ ಜನಸಂಕಟಯಾತ್ರೆಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ, ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ.

ಈ ಹಣ ಯಾವುದು ಬಿಜೆಪಿ ಶಾಸಕರೇ ? 40% ಕಮಿಷನ್ ಲೂಟಿಯದ್ದೇ? ಹುದ್ದೆಗಳ ಮಾರಾಟದ ಸಂಪಾದನೆಯೇ? ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ? ಎಂದು ಒಂದರ ಹಿಂದೆ ಒಂದು ಎಂಬಂತೆ ಪ್ರಶ್ನಿಸುವ ಮುಖೇನ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದೆ.