ರಾಜ್ಯ ಸರ್ಕಾರ(State Government) ರೈತರಿಂದ(Farmers) ಗೋಮೂತ್ರ(Cow Urine), ಸಗಣಿಯನ್ನು(Cow Dung) ಖರೀದಿ ಮಾಡಲು ಚಿಂತಿಸಿದ್ದು, ಈ ಕುರಿತು ರಾಜ್ಯ ಸರ್ಕಾರದ ಈ ಚಿಂತನೆಯನ್ನು ರಾಜ್ಯ ಕಾಂಗ್ರೆಸ್(State Congress) ಲೇವಡಿ ಮಾಡಿದೆ. ಗೋಮೂತ್ರ, ಸಗಣಿ ಖರೀದಿ ಎಂಬ ಸರ್ಕಾರದ ನಿರ್ಧಾರ ಬಾವಿ ಇಲ್ಲದ ಊರಿಗೆ ಕೊಡ ತೆಗೆದುಕೊಂಡು ಹೋದಂತೆ! ಎಂದು ವ್ಯಂಗ್ಯವಾಡಿದೆ. ಛತ್ತೀಸ್ಗಢ(Chattisgarh) ಸರ್ಕಾರದ ಮಾದರಿಯಂತೆ ಕರ್ನಾಟಕ ಸರ್ಕಾರ ಕೂಡ ನಾಡಿನ ರೈತರ ಬಳಿ ಗೋಮೂತ್ರ, ಸಗಣಿಯನ್ನು ಖರೀದಿಸಲು ಚಿಂತಿಸುತ್ತಿದೆ.

ಪಶು ಸಂಗೋಪನೆ ಇಲಾಖೆ ಆದಾಯ(Income) ತಂದುಕೊಡುವಂತಹ ಇಲಾಖೆಯಲ್ಲ ಎಂಬ ಭಾವನೆ ಇದೆ. ಹೀಗಾಗಿ ರೈತರಿಂದ ಗೋಮೂತ್ರ, ಸಗಣಿಯನ್ನು ಖರೀದಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದಲ್ಲದೇ, ಪಶುಸಂಗೋಪನೆ ಇಲಾಖೆಯೂ ಆದಾಯವನ್ನು ತರುವಂತಹದ್ದು ಎಂಬುದನ್ನು ಬಿಂಬಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಪ್ರಾರಂಭದಲ್ಲಿ ಇಲಾಖೆಯು ಉದ್ದೇಶಿತ ಗೋಶಾಲೆಗಳಿಂದ ಗೋಮೂತ್ರ ಮತ್ತು ಸಗಣಿ ಪಡೆಯುತ್ತದೆ. ಗೋಮೂತ್ರ ಮತ್ತು ಸಗಣಿ ಬಳಸಿ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.
ಸದ್ಯ ರಾಜ್ಯ ಸರ್ಕಾರದ ಈ ಚಿಂತನೆಯನ್ನು ಲೇವಡಿ ಮಾಡಿರುವ ರಾಜ್ಯ ಕಾಂಗ್ರೆಸ್,”ಗೋಮೂತ್ರ, ಸಗಣಿ ಖರೀದಿ ಎಂಬ ಸರ್ಕಾರದ ನಿರ್ಧಾರ ಬಾವಿ ಇಲ್ಲದ ಊರಿಗೆ ಕೊಡ ತೆಗೆದುಕೊಂಡು ಹೋದಂತೆ! ನಿರ್ವಹಣೆ ದುಬಾರಿಯಾದ ಕಾರಣಕ್ಕೆ ಹೈನುಗಾರಿಕೆಯಿಂದ ರೈತರು ವಿಮುಖರಾಗುತ್ತಿದ್ದಾರೆ, ಹಾಲು ಮಾರಾಟದಿಂದಲೇ ನಷ್ಟದಲ್ಲಿರುವಾಗ ಗೋಮೂತ್ರ, ಸಗಣಿಯಿಂದ ಲಾಭ ಪಡೆಯಲು ಸಾಧ್ಯವೇ? ಬಿಜೆಪಿಯ ಈ #ಸಗಣಿನಾಮಿಕ್ಸ್ ನಿಂದ ರೈತರು ಉದ್ಧಾರವಾಗಲಾರರು” ಎಂದು ಟ್ವೀಟ್(Tweet) ಮಾಡುವ ಮುಖೇನ ರಾಜ್ಯ ಬಿಜೆಪಿ ಸರ್ಕಾರದ ಚಿಂತನೆಯನ್ನು ಲೇವಡಿ ಮಾಡಿದೆ.