ರಾಜ್ಯದಲ್ಲಿ ಬುಗಿಲೆದ್ದ ಪಿಎಸೈ ನೇಮಕಾತಿ ಪರೀಕ್ಷೆಯ ಅಕ್ರಮ ಈಗ ಬೆತ್ತಲಾಗಿದೆ! ಬಿಜೆಪಿಯ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ(Divya Hagaragi) ಈ ಅಕ್ರಮ(Illegal) ನಡೆಸಲು ಪ್ರಮುಖ ಆರೋಪಿ ಎಂಬುದು ತಿಳಿಯುತ್ತಿದ್ದಂತೆ ದಿವ್ಯಾ ಹಾಗರಗಿ ಸ್ಥಳದಿಂದ ಪರಾರಿಯಾಗಿದ್ದಾರೆ! ಸದ್ಯ ಈ ಪ್ರಕರಣ ಈಗ ಸ್ಪೋಟಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್(State Congress) ವಿವಾದಾತ್ಮಕವಾಗಿ ಟ್ವೀಟ್ ಮಾಡಿದೆ.

ಸಿಐಡಿ ದಾಳಿಯ ನಂತರ, ಕರ್ನಾಟಕ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಅವರು ಹೇಳಿಕೆಯಲ್ಲಿ ದಿವ್ಯಾ ಹಾಗರಗಿ ನೇತೃತ್ವದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆ ಹಗರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಕಲಬುರಗಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ ಮನೆ ಮೇಲೆ ಸೋಮವಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ದಾಳಿ ನಡೆಸಿದ್ದು, ಆಪಾದಿತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಗರಗಿ ಅನ್ನು ತನಿಖೆ ಮಾಡಲು ಮುಂದಾಗಿದೆ.
ಆದ್ರೆ ದಿವ್ಯಾ ಹಾಗರಗಿ ಈ ಬಗ್ಗೆ ಮುಂಚೆಯೇ ತಿಳಿದಂತೆ ಮನೆಯಲ್ಲಿ ಇಲ್ಲವಾಗಿದ್ದಾರೆ, ಹೀಗಾಗಿ ಸೂಕ್ತ ವಿಚಾರಣೆ ಲಭ್ಯವಾಗದ ಕಾರಣ ಪತಿ ರಾಜೇಶ್ ಹಾಗರಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಅಧಿಕಾರಿಗಳ ಮಾಹಿತಿಯ ಪ್ರಕಾರ, ತನಿಖೆಯ ಸಮಯದಲ್ಲಿ, ಬಿಜೆಪಿ ಕಾರ್ಯಕರ್ತ ನಡೆಸುತ್ತಿದ್ದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಅಕ್ಟೋಬರ್ 2021 ರಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆದ ಕೇಂದ್ರಗಳಲ್ಲಿ ಶಾಲೆಯೂ ಒಂದಾಗಿದೆ. ಕೆಲವು ಆಕಾಂಕ್ಷಿಗಳಿಂದ ನಕಲಿ ಅಂಕಗಳನ್ನು ಪಡೆದಿರುವುದು ಪತ್ತೆಯಾದ ನಂತರ ಸಿಐಡಿ ಏಪ್ರಿಲ್ 9 ರಂದು ಈ ಪ್ರಕರಣವನ್ನು ದಾಖಲಿಸಿದೆ.

ಹಾಗರಗಿಯ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಲ್ಲಿ ಒಬ್ಬರು ತಮ್ಮ OMR ಶೀಟ್‌ನಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ, ಆದ್ರೆ ಇತರರು ಖಾಲಿ ಉಳಿದಿದ್ದಾರೆ. ಆದರೆ ಕೆಲವರು 100 ಅಂಕಗಳನ್ನು ಗಳಿಸಿ ಏಳನೇ ರ್ಯಾಂಕ್ ಗಳಿಸಿದ್ದಾರೆ. ತನಿಖೆ ವೇಳೆ ವಿದ್ಯಾರ್ಥಿ ಪೊಲೀಸರಿಗೆ ಒಎಂಆರ್ ಶೀಟ್ ನಕಲಿ ಮಾಡಲು ₹36 ಲಕ್ಷ ನೀಡಿರುವುದಾಗಿ ತಿಳಿಸಿದ್ದಾನೆ. ಇದೊಂದು ಸತ್ಯ ಈಗ ಹೊರಬಿದ್ದಿದ್ದು, ದಿವ್ಯಾ ಹಾಗರಗಿಯ ಅಕ್ರಮ ಬಟಾ ಬಯಲಾಗಿದೆ! ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ,
ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್ ಪಿನ್, ಬಿಜೆಪಿ ಪಕ್ಷದ ಪದಾಧಿಕಾರಿಯಾದ ದಿವ್ಯಾ ಹಾಗಾರಗಿ ಮನೆಗೆ ಹೋಗಿ ಅತಿಥ್ಯ ಸ್ವೀಕರಿಸುವಂತಹ ಆತ್ಮೀಯತೆ ಹೊಂದಿದ್ದಾರೆ ಈ ರಾಜ್ಯದ ಗೃಹಸಚಿವರು. ಹೀಗಾಗಿಯೇ ಈ ಅಕ್ರಮದ ಬಗ್ಗೆ `ರಕ್ಷಣಾತ್ಮಕ ಆಟ’ ಆಡುತ್ತಾ ಬಂದಿದ್ದರು. ಹೀಗಿರುವಾಗ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವೇ? ಪ್ರತಿ ಹಗರಣದ ಮೂಲ ಬಿಜೆಪಿ! ಎಂದು ಬರೆದು ರಾಜ್ಯ ಕಾಂಗ್ರೆಸ್ ಆರೋಪಿಸಿ ಟ್ವೀಟ್ ಮಾಡಿದೆ.