ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ಪ್ರಶ್ನಿಸುವ ರಾಜ್ಯ ಕಾಂಗ್ರೆಸ್ ಪ್ರವೃತ್ತಿ ಎಂದಿನಂತೆ ಮುಂದುವರೆದಿದೆ.
ರಾಜ್ಯ ಶಿಕ್ಷಣ ಸಚಿವ( BC nagesh) ಬಿ.ಸಿ ನಾಗೇಶ್ವರ ನೇತೃತ್ವದಲ್ಲಿ 1500 ಮಾದರಿ ಸರ್ಕಾರಿ ಶಾಲೆ ಅಭಿವೃದ್ಧಿಯ ಯೋಜನೆಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ರಾಜ್ಯದ 1500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವತ್ತ ಸರ್ಕಾರ ಶ್ರಮಿಸುತ್ತಿದೆ. ಇದೊಂದು ಮುಖ್ಯ ಗುರಿಯಾಗಿದ್ದು, ಶೀಘ್ರವೇ ಈ ಕೆಲಸವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಮಾದರಿ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಸ್ಪೋಕನ್ ಇಂಗ್ಲೀಷ್(Spoken English) ತರಗತಿಯನ್ನು ತೆಗೆದುಕೊಂಡು ಅವರಿಗೆ ಕಲಿಸಲಾಗುವುದು.
ಸದ್ಯ ಇದಕ್ಕಾಗಿ ಯಾವುದೇ ಬದಲಾವಣೆಗಳು ಇಲ್ಲ, ಈಗಿರುವ ಶಾಲೆಗಳಲ್ಲೇ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಿಸಲಾಗುವುದು, ಮಕ್ಕಳ ಕೊರತೆ ಕಾರಣಕ್ಕೆ ಯಾವುದೇ ಶಾಲೆ ಮುಚ್ಚುವುದಿಲ್ಲ ಎಂದು ಬಿ.ಸಿ ನಾಗೇಶ್ ಹೇಳಿದರು.
ಈ ಕುರಿತು ಶಿಕ್ಷಣ ಸಚಿವರನ್ನು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್, “ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೇ ಒದಗಿಸಲಾಗದ ಶಿಕ್ಷಣ ಸಚಿವರು, ಬೂಟಾಟಿಕೆಯ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ! ಸೈಕಲ್, ಶೂಗಳನ್ನೇ ನೀಡಲಾಗದವರು ಶಾಲೆ ಅಭಿವೃದ್ಧಿ ಮಾಡುವುದು ಕನಸಿನ ಮಾತು.