ರಾಜ್ಯ ಚುನಾವಣಾ ಆಯೋಗ (State Election Commission) ಹೊರಡಿಸಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ಇದೇ ಅಕ್ಟೋಬರ್ 28 ರಂದು ಮತದಾನ (Voting) ನಡೆಯಲಿದೆ. ಆದರೆ ಅಕ್ಟೋಬರ್ 31 ರಂದು ಫಲಿತಾಂಶ ಪ್ರಕಟವಾಗಲಿದೆ.

ಗ್ರಾಮ ಪಂಚಾಯತಿಗಳಲ್ಲಿ (Grama Panchayat) ವಿವಿಧ ಕಾರಣಗಳಿಂದ ಖಾಲಿ ಇರುವ, ನಿಧನರಾಗಿರುವ, ತೆರವಾಗಿರುವ, ರಾಜೀನಾಮೆ (Resign) ನೀಡಿರುವ ಸದಸ್ಯರ ಉಪಚುನಾವಣೆ ಮತ್ತು ಕೆಲ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗುತ್ತಿದೆ.
ಇನ್ನು ದಿನಾಂಕ 18-10-2022ರಿಂದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, (State Election Commission Announcement)ನಾಮಪತ್ರಗಳ ಪರಿಶೀಲನೆ ದಿನಾಂಕ 19-10-2022ರಂದು ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ದಿನಾಂಕ 21-10-2022 ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ : https://vijayatimes.com/why-cesarean-delivery-cases-are-more/
ಈ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧಿಕೃತ ಅಧಿಸೂಚನೆ ಹೊರಡಿಸಲಿದ್ದಾರೆ. ಇನ್ನು ದಿನಾಂಕ 28-10-2022 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು,
ಮರು ಮತದಾನ ಇದ್ದರೆ ದಿನಾಂಕ 30-10-2022 ರಂದು ನಡೆಸಲಾಗುತ್ತದೆ. ಮತ ಏಣಿಕೆ(Vote Counting) ದಿನಾಂಕ 31-10-2022ರಂದು ಆರಂಭಗೊಳ್ಳುತ್ತದೆ.

ಇನ್ನು ಒಟ್ಟು 252 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು, 2022ರ ಆಗಸ್ಟ್ ನಿಂದ 2022ರ (State Election Commission Announcement)ನವೆಂಬರ್ವರೆಗೆ ಅವಧಿ ಮುಕ್ತಾಯವಾಗಲಿರುವ 203 ಗ್ರಾಮ ಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆ, 49 ಗ್ರಾಮ ಪಂಚಾಯ್ತಿಗಳಿಗೆ ಉಪ ಚುನಾವಣೆ ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ : https://vijayatimes.com/deadly-bpa/
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸ್ಪಷ್ಟ ಮಾರ್ಗಸೂಚಿಗಳನ್ನು ಆಯೋಗ ಬಿಡುಗಡೆ ಮಾಡಿದೆ.
- ಮಹೇಶ್.ಪಿ.ಎಚ್