Karnataka : ರಾಜ್ಯ ವಿಧಾನಸಭಾ ಚುನಾವಣೆಯನ್ನು (Assembly election) ಕೇಂದ್ರ ಚುನಾವಣಾ ಆಯೋಗ ಯಾವ ಕ್ಷಣದಲ್ಲಾದ್ರೂ ಘೋಷಣೆ ಮಾಡಬಹುದು. ಈಗಾಗಲೇ ರಾಜ್ಯ ಚುನಾವಣಾ ಆಯೋಗ ನೀತಿ (State Election Commission) ಸಂಹಿತೆ ಜಾರಿಗೆ ಸಜ್ಜಾಗಲು ಸೂಚನೆ ನೀಡಿದ್ದು, ಎಲ್ಲಾ ಡಿಸಿಗಳಿಗೆ ಪತ್ರ ಬರೆದ ಆಯೋಗ ಅಸೆಂಬ್ಲಿ ಎಲೆಕ್ಷನ್‌ಗೆ ಪೂರ್ವ ತಯಾರಿ ಮಾಡಲು ನಿರ್ದೇಶನ ನೀಡಿದೆ.

ನೀತಿ ಸಂಹಿತೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಸಿದ್ದವಾಗಿರಬೇಕು. ಯಾವುದೇ ಅಕ್ರಮಗಳು ನಡೆಯದಂತೆ,
ಕಾನೂನಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಡಿ.ಸಿ ಯವರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಈ ಸಂಬಂಧ ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿ ಟಿ. ಯೋಗೇಶ್ (T. Yogesh) ಅವರು ಎಲ್ಲರಿಗೂ ಪತ್ರ ಬರೆದು ಸಿದ್ಧತೆ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಮಾದರಿ ಚುನಾವಣಾ ನೀತಿ ಸಂಹಿತೆಯನ್ನು (State Election Commission) ಸಮರ್ಪಕವಾಗಿ ಜಾರಿಗೊಳಿಸಲು ಪೂರ್ವ ತಯಾರಿಗಳೆಲ್ಲಾ ನಡೆಯುತ್ತಿವೆ.
ಈಗಾಗಲೇ ಹಲವು ಹಂತಗಳ ಮೀಟಿಂಗ್‌ಗಳು ನಡೆದಿವೆ. ಚುನಾವಣಾ ಅಧಿಕಾರಿಗಳ ಪಟ್ಟಿ ಸಿದ್ಧಗೊಂಡಿವೆ. ಅವರಿಗೆ ಕೆಲವು ಹಂತದ ತರಬೇತಿಯೂ ನಡೆದಿದೆ.
ಇದನ್ನೂ ಓದಿ : https://vijayatimes.com/vijayendra-vs-siddaramaiah/
ಆದ್ರೆ ಇನ್ನೂ ಕೆಲ ಕಾರ್ಯಗಳು ಬಾಕಿ ಇದ್ದು, ಅವುಗಳನ್ನು ಪೂರ್ಣಗೊಳಿಸಬೇಕಾಗಿದೆ.
ರಾಜಕೀಯ (Politics) ಪಕ್ಷಗಳು ಮತ್ತು ರಾಜಕಾರಣಿಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಕ್ಕಾಗಿ ಹಾಕಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್‌ಗಳನ್ನು ತೆರವುಗೊಳಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಅಕ್ರಮಕ್ಕೆ ಬ್ರೇಕ್ :
- ಚುನಾವಣಾ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು.
- ಮತದಾರರಿಗೆ ಆಮಿಷ ನೀಡದಂತೆ ಅಕ್ರಮ ಹಣ ಹಂಚಿಕೆ, ಮದ್ಯ, ಗಿಫ್ಟ್‌ಗಳ ಸಾಗಾಟಕ್ಕೆ ಕಡಿವಾಣ ಹಾಕಲು ಜಾಗೃತಿ ದಳಗಳನ್ನು ನೇಮಿಸಲಾಗಿದೆ.
- ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಪಕ್ಷಗಳ ಸಭೆ ಸಮಾರಂಭ ನಡೆಸದಂತೆ ನೋಡಿಕೊಳ್ಳಬೇಕು.
- ಜೊತೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಮೇಲೆ ನಿಗಾವಹಿಸಬೇಕು.
ಇದನ್ನೂ ಓದಿ : https://vijayatimes.com/congress-candidates-list-released/
ಈ ಬಗ್ಗೆ ಸಾರ್ವಜನಿಕರಿಗೆ ದೂರು ಕೊಡಲು ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ವಿಧಾಸಭಾ ಚುನಾವಣೆಗೆ ರಣರಂಗ ಸಜ್ಜಾಗಿದೆ.
ಆದ್ರೆ ಇಲ್ಲಿ ನ್ಯಾಯಯುತವಾಗಿ ಚುನಾವಣೆ ನಡೀಬೇಕಾದ್ರೆ ಚುನಾವಣಾ ಆಯೋಗ ಪಾರದರ್ಶಕವಾಗಿ ನಿಷ್ಪಕ್ಷವಾಗಿ ಚುನಾವಣೆ ನಡೆಸಬೇಕು.