Job News : ಜೂನ್ ತಿಂಗಳಲ್ಲಿ ರಾಜ್ಯ ಆಹಾರ ನಿಗಮದ(State food corporation) ವಿವಿಧ ಪದನಾಮಗಳ 386 ಹುದ್ದೆಗೆ ಅಧಿಸೂಚಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(Karnataka Examination Authority) ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಕೊನೆಯ ಕೇವಲ 1 4 ದಿನಗಳು ಬಾಕಿ ಇದೆ ಆದ್ದರಿಂದ ಯಾರಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂಬ ಆಸಕ್ತಿ ಇದೆಯೋ ಜುಲೈ 31 ರವರೆಗೆ ಮಾತ್ರ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.
ಕರ್ನಾಟಕ ಆಹಾರ, ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಸಹಾಯಕ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು, ಗುಣಮಟ್ಟ ನಿರೀಕ್ಷಕರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳನ್ನು ಭರ್ತಿ ಮಾಡುವ ಸಂಸ್ಥೆ: ಕರ್ನಾಟಕ ಆಹಾರ
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಮತ್ತು ನಾಗರೀಕ ಸರಬರಾಜು ನಿಗಮ
ಹುದ್ದೆಗಳ ಸಂಸ್ಥೆ : 386
ಹುದ್ದೆಗಳ ವಿವರ
ಗುಣಮಟ್ಟ ನಿರೀಕ್ಷಕರು : 23
ಸಹಾಯಕ ವ್ಯವಸ್ಥಾಪಕರು : 10
ಹಿರಿಯ ಸಹಾಯಕರು: 57
ಕಿರಿಯ ಸಹಾಯಕರು: 263
ಹಿರಿಯ ಸಹಾಯಕರು (ಲೆಕ್ಕ): 33
ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ
ಹುದ್ದೆವಾರು ವೇತನ ಶ್ರೇಣಿ
ಗುಣಮಟ್ಟ ನಿರೀಕ್ಷಕರು : Rs.27650-52650.
ಸಹಾಯಕ ವ್ಯವಸ್ಥಾಪಕರು : Rs.43100-83900.
ಹಿರಿಯ ಸಹಾಯಕರು: Rs.27650-52650.
ಹಿರಿಯ ಸಹಾಯಕರು (ಲೆಕ್ಕ): Rs.27650-52650.
ಕಿರಿಯ ಸಹಾಯಕರು: Rs.21400-42000.

ಹುದ್ದೆವಾರು ವಿದ್ಯಾರ್ಹತೆ
ಹಿರಿಯ ಸಹಾಯಕರು: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
ಸಹಾಯಕ ವ್ಯವಸ್ಥಾಪಕರು : ಎಂಬಿಎ / ಹೆಚ್ಆರ್ / ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ.
ಹಿರಿಯ ಸಹಾಯಕರು (ಲೆಕ್ಕ): ವಾಣಿಜ್ಯ ಪದವಿ ಅಥವಾ ತತ್ಸಮಾನ ಪದವಿ.
ಗುಣಮಟ್ಟ ನಿರೀಕ್ಷಕರು : ಕೃಷಿ ವಿಜ್ಞಾನ ಪದವಿಯನ್ನು ಸಹಕಾರ / ಕೃಷಿ ಮಾರುಕಟ್ಟೆ ವಿಶೇಷತೆಯೊಂದಿಗೆ ಪಡೆದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್.
ಕಿರಿಯ ಸಹಾಯಕರು: ದ್ವಿತೀಯ ಪಿಯುಸಿ ಪಾಸ್.
ವಯಸ್ಸಿನ ಅರ್ಹತೆಗಳು
ಕನಿಷ್ಠ 18 ವರ್ಷ ಅರ್ಜಿ ಸಲ್ಲಿಸಲು ಆಗಿರಬೇಕು.
35 ವರ್ಷ ಗರಿಷ್ಠ ವಯಸ್ಸು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.
40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಎಸ್ಸಿ/ ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ನೀಡಲಾಗಿದೆ.

ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ.
ಅರ್ಜಿ ಶುಲ್ಕ ವಿವರ :
ಎಸ್ಸಿ/ ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.1000.
ಅರ್ಜಿ ಸಲ್ಲಿಸುವ ವಿಧಾನ
- ಕೆಇಎ ವೆಬ್ಸೈಟ್ ವಿಳಾಸ https://karnemakaone.kar.nic.in/recrfcs/ ಕ್ಕೆ ಭೇಟಿ ನೀಡಿ.
ಇಲ್ಲಿ ಓಪನ್ ಆದ ಪೇಜ್ನಲ್ಲಿ ಅರ್ಜಿ ಲಿಂಕ್ ಕ್ಲಿಕ್ ಮಾಡಿ ನಂತರ ಇಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ನೀಡಿ.
ನಂತರ ಅಭ್ಯರ್ಥಿಯ ಭಾವಚಿತ್ರ, ಸಹಿ ಅಪ್ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ, ಎರಡನ್ನು ಅಪ್ಲೋಡ್ ಮಾಡಿರಿ.
ಆನ್ಲೈನ್(Online) ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 31-07-2023 ರ ಸಂಜೆ 05-30 ಗಂಟೆವರೆಗೆ.
ರಶ್ಮಿತಾ ಅನೀಶ್