• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ರಾಜ್ಯದ 128 ಸರ್ಕಾರಿ ಕಾಲೇಜು ಉಪನ್ಯಾಸಕರಿಗೆ ಮಾರಣಾಂತಿಕ ಖಾಯಿಲೆ ಪತ್ತೆ! ವರ್ಗಾವಣೆ ಎಫೆಕ್ಟಾ?

Mohan Shetty by Mohan Shetty
in ರಾಜ್ಯ
ರಾಜ್ಯದ 128 ಸರ್ಕಾರಿ ಕಾಲೇಜು ಉಪನ್ಯಾಸಕರಿಗೆ ಮಾರಣಾಂತಿಕ ಖಾಯಿಲೆ ಪತ್ತೆ! ವರ್ಗಾವಣೆ ಎಫೆಕ್ಟಾ?
0
SHARES
7
VIEWS
Share on FacebookShare on Twitter

Bengaluru : ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲೊಂದು ಆತಂಕಕಾರಿ ಬೆಳವಣಿಗೆ ಪತ್ತೆಯಾಗಿದೆ. ಈ ಬೆಳವಣಿಗೆ ನಮ್ಮ ರಾಜ್ಯದ (State Government Transfer issue) ಉನ್ನತ ಶಿಕ್ಷಣ ಕ್ಷೇತ್ರ ರೋಗಿಗಳ ಗೂಡಾಗಿದೆಯಾ ಅನ್ನೋ ಅನುಮಾನವನ್ನೂ ಮೂಡಿಸುತ್ತಿದೆ.

ಈ ಅನುಮಾನ ಮೂಡಲು ಕಾರಣ ಏನು (State Government Transfer issue) ಗೊತ್ತಾ?

State Government Transfer issue

ರಾಜ್ಯದ 128 ಸರ್ಕಾರಿ ಕಾಲೇಜು ಉಪನ್ಯಾಸಕರಿಗೆ ಮಾರಣಾಂತಿಕ ಖಾಯಿಲೆ (Deadly Disease) ಪತ್ತೆಯಾಗಿದೆ. ಇವರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.

ನಮ್ಮ ರಾಜ್ಯದ ಇಷ್ಟೊಂದು ಶಿಕ್ಷಕರಿಗೆ ಗಂಭೀರ ಕಾಯಿಲೆಗಳು ಇರುವುದು ವರ್ಗಾವಣೆ (Transfer) ಹಿನ್ನೆಲೆಯಲ್ಲಿ ಪತ್ತೆಯಾಗಿದೆ.


ರಾಜ್ಯ ಸರ್ಕಾರ (State Government) ವರ್ಷವೊಂದರಲ್ಲೇ ಎರಡನೇ ಬಾರಿ ಕಾಲೇಜು ಶಿಕ್ಷಕರ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿದೆ. ವರ್ಷಾಂತ್ಯದಲ್ಲಿ ಬಿಡುಗಡೆಯಾಗಿರುವ ವರ್ಗಾವಣೆ ಪಟ್ಟಿಯಲ್ಲಿ ಆರುನೂರಕ್ಕೂ ಹೆಚ್ಚು ಶಿಕ್ಷಕರ ಹೆಸರಿದೆ.

ಆದ್ರೆ ಅಚ್ಚರಿಯ ವಿಚಾರ ಅಂದ್ರೆ, ಈ ಪಟ್ಟಿಯಲ್ಲಿ 128 ಮಂದಿ ಉಪನ್ಯಾಸಕರಿಗೆ ಮಾರಣಾಂತಿಕ ಕಾಯಿಲೆ ಪತ್ತೆಯಾಗಿದ್ದು,

ಅವರಿಗೆ ವರ್ಗಾವಣೆ ಪ್ರಕ್ರಿಯೆಯಲ್ಲಿ ಕಾಲೇಜು ಆಯ್ದುಕೊಳ್ಳಲು ಮೊದಲ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ : https://vijayatimes.com/karnataka-bank-locker-scam/


ವರ್ಗಾವಣೆ ನಿಯಮದ ಪ್ರಕಾರ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸರ್ಕಾರ ಅನುಕಂಪ ತೋರಿ ಅವರಿಗೆ ವರ್ಗಾವಣೆ ಸ್ಥಳಗಳನ್ನು ಆರಿಸಿಕೊಳ್ಳಲು ಮೊದಲ ಅವಕಾಶ ನೀಡಲಾಗುತ್ತೆ.

ಆದ್ರೆ ಈ ಅನುಕೂಲ ಪಡೆಯಲು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಉಪನ್ಯಾಸಕರು ತಮ್ಮ ರೋಗದ ವಿವರ,

ಚಿಕಿತ್ಸೆಯ ವಿವರ ಹಾಗೂ ಚಿಕಿತ್ಸೆ ಪಡೆಯುತ್ತಿರುವ ವೈದ್ಯರಿಂದ ಸರ್ಟಿಫಿಕೇಟ್‌ ಪಡೆದು ಇಲಾಖೆಗೆ ಸಲ್ಲಿಸಬೇಕು.

ಈ ಪ್ರಮಾಣ ಪತ್ರವನ್ನು ಆಯ್ದ ಸರ್ಕಾರಿ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ.

ಪ್ರಮಾಣಪತ್ರ ನೈಜವಾಗಿದ್ದರೆ ಅಂಥಾ ಉಪನ್ಯಾಸಕರಿಗೆ ಈ ವಿಶೇಷ ಸೌಲಭ್ಯ ನೀಡಲಾಗುತ್ತೆ.

Transfer Notice


ಈ ಬಾರಿಯ ವರ್ಗಾವಣೆ ಪಟ್ಟಿಯಲ್ಲಿರುವ ರೋಗಿಗಳ ಸಂಖ್ಯೆ ನೋಡಿ ಎಲ್ಲರಲ್ಲು ಅಚ್ಚರಿ ಮೂಡಿಸಿದೆ. ಈ ರೋಗಗ್ರಸ್ತ ಉಪನ್ಯಾಸಕರ ಪಟ್ಟಿಯನ್ನು ಪರಿಶೀಲಿಸಲು ಬೆಂಗಳೂರಿನ ಕೆ.ಸಿ ಜನರಲ್‌ ಆಸ್ಪತ್ರೆ (KC General Hospital),

ಜಯನಗರ ಜನರಲ್‌ ಆಸ್ಪತ್ರೆ, ಇಂದಿರಾನಗರದ ಶ್ರೀ ಸ.ವಿ ರಾಮನ್‌ ಜನರಲ್‌ ಆಸ್ಪತ್ರೆಯ ವೈದ್ಯರಿಗೆ ಕಳುಹಿಸಿ ಕೊಡಲಾಗಿದೆ.

ಅವರು ಪರಿಶೀಲಿಸಿ ಯಾರಿಗೆ ನಿಜವಾದ ಕಾಯಿಲೆ ಇದೆ ಯಾರಿಗಿಲ್ಲ ಅನ್ನೋದನ್ನು ಪತ್ತೆಹಚ್ಚಿ ವರದಿ ನೀಡಲಿದ್ದಾರೆ.


ರಾಜ್ಯ ಸರ್ಕಾರ ಉಪನ್ಯಾಸಕರ ವರ್ಗಾವಣೆ ಕುರಿತು ಹೊರಡಿಸಿರುವ ಅಧಿಕೃತ ಸುತ್ತೋಲೆಯನ್ನು ಗಮನಿಸುವುದಾದರೆ : “ಮಾರಣಾಂತಿಕ ಖಾಯಿಲೆಗಳ ಪ್ರಕರಣಗಳಡಿ ಕೋರಿಕೆ ವರ್ಗಾವಣೆಗೆ ಮನವಿ ಸಲ್ಲಿಸಿರುವ ಬೋಧಕರ ವೈದ್ಯಕೀಯ ಪರಿಶೀಲನೆಗೆ ಬಗ್ಗೆ..

ಇದನ್ನೂ ಓದಿ : https://vijayatimes.com/proud-daughter-mother/

ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಂತ್ರಣ 2021ರ ಅನ್ವಯ ಇಲಾಖೆ ವ್ಯಾಪ್ತಿಯ ಅಧೀನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಬೋಧಕ ವರ್ಗದವರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲು ಉಲ್ಲೇಖ(1)ರ ಸರ್ಕಾರದ ಅನುಮತಿಯಂತೆ ಅಧಿ¸ಸೂಚನೆ ಹೊರಡಿಸಲಾಗಿದೆ.

ಉಲ್ಲೇಖ(2)ರ ಈ ಕಛೇರಿ ಅಧಿಸೂಚನೆಯಲ್ಲಿ ಇಲಾಖಾ ವ್ಯಾಪ್ತಿಯ ಅಧೀನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಬೋಧಕ ವರ್ಗದವರಿಗೆ ವರ್ಗಾವಣೆ ನಿಯಮಗಳನ್ವಯ ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.

state govt

ಮಾರಣಾಂತಿಕ ಖಾಯಿಲೆಗಳ ಹಿನ್ನೆಲೆಯಲ್ಲಿ ವರ್ಗಾವಣೆ ಬಯಸುವ ಬೋಧಕರ ಪಟ್ಟಿಯನ್ನು ಈ ಸುತ್ತೋಲೆಗೆ ಅನುಬಂಧಿಸಿದ್ದು, ಸದರಿ ಪಟ್ಟಿಯಲ್ಲಿನ ಬೋಧಕರು/ಬೋಧಕರ ಅವಲಂಬಿತರು (ಪತಿ/ಪತ್ನಿ/ಮಕ್ಕಳು)

ವೈದ್ಯಕೀಯ ದಾಖಲೆಗಳೊಂದಿಗೆ ಅವರಿಗೆ ನಿಗದಿಪಡಿಸಿದ ದಿನಾಂಕಗಳಂದು ಬೆಳಿಗ್ಗೆ 9:30 ಗಂಟೆಗೆ ನಿಗದಿಪಡಿಸಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಜರಾಗಿ ವೈದ್ಯಕೀಯ ಪರಿಶೀಲನೆಗೆ ಒಳಪಡುವಂತೆ ಸೂಚಿಸಲಾಗಿದೆ.

https://fb.watch/hqQv_A0Rre/ PROMO COVER STORY| ಪ್ಲಾಸ್ಟಿಕ್‌ ಬ್ಯಾನ್‌ ಅನ್ನೋ Joke ! ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಬೆಲೆಯೇ ಇಲ್ಲ.

ನಿಗದಿಪಡಿಸಿದ ದಿನಾಂಕಗಳಂದು ವೈದ್ಯಕೀಯ ಪರಿಶೀಲನೆಗೆ ಹಾಜರಾಗದಿದ್ದಲ್ಲಿ ಅಂತಹ ಬೋಧಕರನ್ನು ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ”.

ಸದ್ಯ ತಮಗೆ ಮಾರಣಾಂತಿಕ ಖಾಯಿಲೆ ಇರುವುದರ ಬಗ್ಗೆ ತಿಳಿಸಿರುವ ೧೨೮ ಉಪನ್ಯಾಸಕರನ್ನು ಬೆಂಗಳೂರಿನ ಕೆ.ಸಿ ಜೆನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಪಡೆಯಲು ಸರ್ಕಾರ ಆದೇಶ ಹೊರಡಿಸಿದೆ.
Tags: bengaluruGovt LectureresKarnataka

Related News

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
Vijaya Time

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್

June 8, 2023
ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ
Vijaya Time

ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ

June 8, 2023
ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್
ರಾಜ್ಯ

ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್

June 7, 2023
ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಖಚಿತ: ಯಾವೆಲ್ಲಾ ಪಠ್ಯಗಳಿಗೆ ಬಿಳಲಿದೆ ಕತ್ತರಿ?
ರಾಜ್ಯ

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಖಚಿತ: ಯಾವೆಲ್ಲಾ ಪಠ್ಯಗಳಿಗೆ ಬಿಳಲಿದೆ ಕತ್ತರಿ?

June 7, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.