Bangalore : ರಾಜ್ಯ ಹೈಕೊರ್ಟ್(State High Court) ಜನರಿಗೊಂದು ಒಳ್ಳೆಯ ಆದೇಶ ಕೊಟ್ಟಿದೆ. ಅದೇನಂದ್ರೆ ಇನ್ಮುಂದೆ ತನಿಖೆ ಪೂರ್ಣಗೊಂಡ ಪೋಲಿಸರ ತನಿಖಾ ವರದಿಯ ಪ್ರತಿಯನ್ನು ಸಾರ್ವಜನಿಕರು (State High Court order) ಮಾಹಿತಿ ಹಕ್ಕು ಕಾಯ್ದೆ(RTI) ಅಡಿಯಲ್ಲಿ ಪಡೆಯಬಹುದುಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಜ್ಯ ಮಾಹಿತಿ ಹಕ್ಕು ಆಯೋಗವು ಪ್ರಕರಣವೊಂದಕ್ಕೆ ಸಂಬಂಧಿಸಿದ ತನಿಖಾ ವರದಿಯ ಪ್ರತಿಯೊಂದನ್ನು ಆರ್‍ಟಿಐ ಅಡಿ ನೀಡುವಂತೆ ಆದೇಶಿಸಿತ್ತು.
ಆದರೆ ಇದನ್ನು ಪ್ರಶ್ನಿಸಿದ ಪೋಲೀಸ್ ಮಹಾ ನಿರ್ದೇಶಕರು ತಕರಾರು ಅರ್ಜಿ ಸಲ್ಲಿಸಿದ್ದರು. ನ್ಯಾಯ ಮೂರ್ತಿ ಎನ್.ಎಸ್.ಸಂಜಯ್ ಗೌಡ (Justice NS Sanjay Gowda) ಅವರಿದ್ದ ಪೀಠ ಈ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ತನ್ನ ತೀರ್ಪಿನಲ್ಲಿ, ಯಾವುದೇ ತರಹದ ಪ್ರಕರಣದ ತನಿಖೆಯ ಮಾಹಿತಿಗಳನ್ನು ತನಿಖಾ ಸಂದರ್ಭದಲ್ಲಿ ನೀಡಲಾಗುವುದಿಲ್ಲ,
ಆದರೆ ತನಿಖೆ ಪೂರ್ಣಗೊಂಡ ನಂತರ ಪೋಲಿಸರ ತನಿಖಾ ವರದಿಯ ಪ್ರತಿಯನ್ನುಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಬಹುದು ಎಂದು ಆದೇಶಿಸಿದೆ.
ಇದನ್ನೂ ಓದಿ : https://vijayatimes.com/annamalai-corruption-statement-viral/
ಪ್ರಕರಣದ ಹಿನ್ನೆಲೆ: ಸಿಐಡಿ (CID) ಪೋಲಿಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಿ ‘ಬಿ’ ರಿಪೋರ್ಟನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಧಾರವಾಡದ ಮಲ್ಲೇಶಪ್ಪ.ಎಂ.ಚಿಕ್ಕೇರಿ (Malleshappa.Chikkeri) ಎಂಬುವವರು ‘ಬಿ’ ರಿಪೋರ್ಟ್‌ನ ಪ್ರತಿ ಒದಗಿಸುವಂತೆ (State High Court order) ಸಿಐಡಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು.
ಆದರೆ ಇದನ್ನು ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ಇದನ್ನು ನಿರಾಕರಿಸಿದ್ದರಿಂದ ಬಳಿಕ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಇವರು ಅರ್ಜಿ ಸಲ್ಲಿಸಿದರು,
ಆಯುಕ್ತರು ಅರ್ಜಿಯನ್ನು ಪುರಸ್ಕರಿಸಿ ತನಿಖಾ ವರದಿಯ ಪ್ರತಿ ಒದಗಿಸುವಂತೆ ಸಿಐಡಿಗೆ ಆದೇಶಿಸಿದ್ದರು.
ಆದರೆ ಪೋಲಿಸ್ ಮಹಾ ನಿರ್ದೇಶಕರು ಮತ್ತು ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಆದರೆ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಪೋಲಿಸರ ತನಿಖಾ ವರದಿಯ ಪ್ರತಿಯನ್ನು ಆರ್‍ಟಿಐ ಅಡಿಯಲ್ಲಿ ಪಡೆಯುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ.
ಆರ್‌ಟಿಐ ಮಹತ್ವ: ಆರ್ ಟಿಐ ಎಂಬ ಪದ ಕೇಳಿದ್ದರೂ ಅತಿ ಹೆಚ್ಚಿನ ಜನರಿಗೆ ಆರ್ ಟಿಐ (Right To Information) ಕಾಯಿದೆ ಅರಿವಿಲ್ಲ.
ಇದನ್ನೂ ಓದಿ : https://vijayatimes.com/couple-beheaded-by-guillotine/
ಆದರೆ ಮಾಹಿತಿ ಹಕ್ಕು ಕಾಯಿದೆ ಮೂಲಕ ನಮ್ಮ ದೇಶದಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಕೇಳಿ ಪಡೆಯಬಹುದು.
ಅರ್ಜಿದಾರರು ಸಲ್ಲಿಸಿದ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸರ್ಕಾರಿ ಅಧಿಕಾರಿಗಳು 30 ದಿನಗಳಲ್ಲಿ ನೀಡಬೇಕೆಂಬ ಕಾನೂನಿದೆ.
ಆರ್‍ಟಿಐ ಇದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕು, ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು.
ಆರ್ ಟಿಐ ಮೂಲಕ ಯಾವ ಮಾಹಿತಿಯನ್ನು ಹೊರ ತೆಗೆಯಬಹುದು?
- ಯಾವುದೇ ಒಂದು ಸರ್ಕಾರಿ ಕಾಮಗಾರಿಯ ಪ್ರತಿ ಹಂತದ ಮಾಹಿತಿಗಳನ್ನು ಪಡೆಯಬಹುದು. ಉದಾಹರಣೆಗೆ ರಸ್ತೆ ಕಾಮಗಾರಿಯಾದರೆ, ಗುತ್ತಿಗೆ ಪಡೆದವರು, ಜಲ್ಲಿ, ಡಾಂಬರುಗಳನ್ನು ಕೊಂಡುಕೊಂಡ ಸಂಸ್ಥೆ ,ಕಾಮಗಾರಿ ಅವಧಿ ಈ ರೀತಿ ಪ್ರತಿ ಹಂತದಲ್ಲೂ ಪ್ರಶ್ನಿಸುವ ಹಕ್ಕನ್ನು ನಾಗರಿಕರಿಗೆ ನೀಡಲಾಗಿದೆ.
- ಸರ್ಕಾರದ GOಗಳ ನಕಲು ಪ್ರತಿಯನ್ನು ಪಡೆದುಕೊಳ್ಳಬಹುದು.
- ಸರ್ಕಾರಿ ಕಡತಗಳ, ದಾಖಲೆಗಳನ್ನು ಪರಿಶೀಲಿಸಬಹುದು.
- ಸರ್ಕಾರದ ಯಾವುದೇ ಕಾರ್ಯವಾದರೂ ಆರ್‍ಟಿಐ ವ್ಯಾಪ್ತಿಗೆ ಒಳಪಡುವುದರಿಂದ ಪ್ರತಿಯೊಬ್ಬರೂ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ : https://vijayatimes.com/charan-waiting-to-dance/
ಆರ್‍ಟಿಐ ಅರ್ಜಿ ಸಲ್ಲಿಸುವುದು ಹೇಗೆ?
ಆರ್‍ಟಿಐ ಗೆ ಅರ್ಜಿ ಸಲ್ಲಿಸುವುದು ತುಂಬಾ ಕಷ್ಟವೇನಿಲ್ಲ, ಒಂದು ಬಿಳಿ ಹಾಳೆಯಲ್ಲಿ ನಿಮ್ಮ ಹೆಸರು,ಹಾಗೂ ವಿಳಾಸವನ್ನು ಬರೆದು ನಿಮ್ಮ ಸಮಸ್ಯೆಯನ್ನು
ಅಥವಾ ನಿಮಗೆ ಬೇಕಾಗುವಂತಹ ಮಾಹಿತಿಯನ್ನು ಕೇಳಿ ಅರ್ಜಿ ಸಲ್ಲಿಸಬಹುದು.ರೂ 10 ಶುಲ್ಕ ನೀಡಿ ಆರ್ ಟಿಐ ಅರ್ಜಿ ದಾಖಲಿಸಬಹುದು. ನೀವು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬೇಕಿದ್ದರೆ ಪ್ರತಿ ಅರ್ಜಿಗೂ 10 ರು ಶುಲ್ಕ ಪಾವತಿಸಬೇಕಾಗುತ್ತದೆ.
ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಮಾಹಿತಿಯನ್ನು ಪಡೆಯಲು ಪ್ರತಿ ಪುಟಕ್ಕೆ 2 ರು ನಂತೆ ಪ್ರತ್ಯೇಕ ಶುಲ್ಕ ನೀಡಬೇಕಾಗುತ್ತದೆ.
ಅಂಚೆ ಕಚೇರಿ,ಅಥವಾ ಆರ್ ಟಿಐ ಕೌಂಟರ್ ಗಳಲ್ಲಿ ನಿಮ್ಮ ಅರ್ಜಿಯನ್ನು ನೀಡಬಹುದು. ಅಥವಾ ಅನ್ ಲೈನ್ ಮೂಲಕವಾಗಿ ಕೂಡ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
http://www.righttoinformation.gov.in/
ಅಥವಾ
http://www.rtiindia.org.
http://www.rtination.com/.