• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಪಕ್ಷ ಇದ್ದರೆ ಮಾತ್ರ ನಾನು: ಅಧಿಕಾರದ ಹಂಚಿಕೆಯ ಕುರಿತು ಡಿಕೆಶಿ ಸಂಯಮದ ನುಡಿ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಪಕ್ಷ ಇದ್ದರೆ ಮಾತ್ರ ನಾನು: ಅಧಿಕಾರದ ಹಂಚಿಕೆಯ ಕುರಿತು ಡಿಕೆಶಿ ಸಂಯಮದ ನುಡಿ
0
SHARES
23
VIEWS
Share on FacebookShare on Twitter
  • ನನ್ನ ಗಮನವೇನಿದ್ದರೂ ಪಕ್ಷ ಮತ್ತು ಸರ್ಕಾರದ ಹಿತಾಸಕ್ತಿ ಕಾಪಾಡುವುದರ ಕಡೆಗಿದೆ
  • ಸಿಎಂ ಹೇಳಿಕೆ ಚರ್ಚಿಸಲ್ಲವೆಂದು ಡಿಕೆಶಿ ಸಂಯಮದ ನುಡಿ (State politics calculated)
  • ರಾಜ್ಯ ರಾಜಕಾರಣದಲ್ಲಿ ಡಿಕೆಶಿ ಭವಿಷ್ಯದ ಲೆಕ್ಕಾಚಾರ

Bengaluru: ರಾಜ್ಯ ಕಾಂಗ್ರೆಸ್‌ನಲ್ಲಿ ಸೈದ್ದಾಂತಿಕ ಕವಲುಗಳು ಇವೆ. ಸಿಎಂ ಸಿದ್ದರಾಮಯ್ಯ(CM Siddaramaiah) ಹಾಗೂ ಆಪ್ತ ಬಣದ್ದು ಒಂದು ಹಾದಿಯಾದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರದ್ದು ಭಿನ್ನ ಹಾದಿ.

ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ನೋಡಿಕೊಂಡು ಡಿಕೆ ಶಿವಕುಮಾರ್(DK Sivakumar) ಅವರು ಸಾಫ್ಟ್ ಹಿಂದುತ್ವದ ಹಾದಿಯನ್ನು ಅನುಸರಿಸುತ್ತಿದ್ದಾರೆ.

ಆದರೆ ಡಿಕೆಶಿ ಈ ಪ್ಲ್ಯಾನ್ ವರ್ಕೌಟ್ ಆಗುತ್ತಾ ಎಂಬುವುದು ಕುತೂಹಲದ ಪ್ರಶ್ನೆಯಾಗಿದೆ.ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರು ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಅಧಿಕಾರದ ತೆಕ್ಕೆಗೆ ಏರಲು ಕಾಂಗ್ರೆಸ್ ಸಹಜವಾಗಿ ತನ್ನ ಸಾಂಪ್ರದಾಯಕ ನಡೆಯನ್ನು ಅನುಸರಿಸುತ್ತದೆ. ಆದರೆ ಡಿಕೆ ಶಿವಕುಮಾರ್ ನಡೆ ಇದಕ್ಕೆ ಕೊಂಚ ಭಿನ್ನವಾಗಿದೆ.

ಸಿದ್ದರಾಮಯ್ಯ ಹಾಗೂ ಟೀಂ ಅಹಿಂದ ಲೆಕ್ಕಾಚಾರದಲ್ಲಿ ಪಕ್ಷ ಸಂಘಟನೆಗೆ ಹೊರಟರೆ ಡಿಕೆಶಿ ಮಾತ್ರ ಸಾಫ್ಟ್ ಹಿಂದುತ್ವಕ್ಕೆ ಮುಖಮಾಡುತ್ತಿದ್ದಾರೆ.

ಪಕ್ಷ ನನಗೆ ಕೆಪಿಸಿಸಿ ಅಧ್ಯಕ್ಷ(KPCC President) ಮತ್ತು ಉಪಮುಖ್ಯಮಂತ್ರಿ ಹುದ್ದೆ, ಜವಾಬ್ದಾರಿ ನೀಡಿದೆ. ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. ಉಳಿದ ಯಾವ ವಿಚಾರಗಳಿಗೂ ನಾನು ಪ್ರತಿಕ್ರಿಯಿಸಲ್ಲ.

State politics calculated DK Sivakumar
D.K. Sivakumar’s restrained response

ನನ್ನ ಗಮನವೇನಿದ್ದರೂ ಪಕ್ಷ ಮತ್ತು ಸರ್ಕಾರದ ಹಿತಾಸಕ್ತಿ ಕಾಪಾಡುವುದರ ಕಡೆಗಿದೆ.

ಅಧಿಕಾರ ಹಂಚಿಕೆ ಒಪ್ಪಂದವಾಗಿಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ(Chief Minister) ಎಂಬ ಸಿದ್ದರಾಮಯ್ಯ ಅವರ ಘಂಟಾಘೋಷದ ನುಡಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಯಮದ ಪ್ರತಿಕ್ರಿಯೆ ನೀಡಿದ್ದಾರೆ.

ಯಾವ ವಿಚಾರವಾದರೂ ಕಡ್ಡಿ ಮುರಿದಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆ ಸೇರಿ ಪ್ರಸಕ್ತ ರಾಜಕೀಯ(politics) ಬೆಳವಣಿಗೆಗಳ ಬಗ್ಗೆ ಅತ್ಯಂತ ಹಿಡಿತದ ಪ್ರತಿಕ್ರಿಯೆ ನೀಡಿದರು.

ಜತೆಗೆ, ಪಕ್ಷ ಇದ್ದರಷ್ಟೇ ನಾನು. ಪಕ್ಷ ಇಲ್ಲದಿದ್ದರೆ ನಾನಿಲ್ಲ ಎಂದು ನುಡಿದರು.ಅಲ್ಲದೆ, ತಾವು ಮುಖ್ಯಮಂತ್ರಿಯಾಗಬೇಕು ಎಂದು ಯಾರೂ ಹೇಳಿಕೆ ನೀಡುವ ಅವಶ್ಯಕತೆಯಿಲ್ಲ ಎಂದು ದೃಢವಾಗಿ ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕ ಬೆಂಬಲ ಕಡಿಮೆಯಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆಯೂ ನಯವಾಗಿಯೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌,

ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ, ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ.

ಮುಖ್ಯಮಂತ್ರಿ ಅವರು ನೀಡಿರುವ ಹೇಳಿಕೆ ನೋಡಿದ್ದೇನೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರಿಸಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಅದನ್ನು ಚರ್ಚೆ ಮಾಡುವುದು ಸೂಕ್ತವಲ್ಲ.

ಮಾಧ್ಯಮದವರೂ ಮತ್ತೆ ಆ ವಿಚಾರವಾಗಿ ನನ್ನಲ್ಲಿ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.ನಮ್ಮ ವಿಚಾರದಲ್ಲಿ ಮಾಧ್ಯಮಗಳು ಏತಕ್ಕಾಗಿ ಗಾಬರಿಯಾಗುತ್ತಿವೆ ಎಂಬುದು ತಿಳಿದಿಲ್ಲ.

ಆದರೆ, ನಾವು ಯಾವುದೇ ವಿಚಾರದಲ್ಲೂ ಗಾಬರಿಯಾಗುತ್ತಿಲ್ಲ. ಮಾಧ್ಯಮಗಳಿಗೆ ಸದ್ದು ಬೇಕಿದೆ, ಅದಕ್ಕಾಗಿ ಸದ್ದು ಮಾಡುತ್ತಿದ್ದೀರಿ. ಆದರೆ, ನಮ್ಮಲ್ಲಿ ಯಾವುದೂ ಸದ್ದಿಲ್ಲ ಎಂದು ನಗುತ್ತಲೇ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಚಿವರ ಮಾತುಗಳಿಗೆ ಪ್ರತಿಕ್ರಿಯಿಸಿ, ನಾನು ಪಕ್ಷದ ಅಧ್ಯಕ್ಷನಾಗಿ ಶುಕ್ರವಾರವೂ ಮಾಜಿ ಸಚಿವೆಯೊಬ್ಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ.

ಇನ್ನು, ನಾನು ಪಕ್ಷದ ವಕ್ತಾರನೇ ಹೊರತು, ಬೇರೆ ಯಾವುದೇ ವ್ಯಕ್ತಿಯ ವಕ್ತಾರನಲ್ಲ.

ಇದನ್ನು ಓದಿ : ಗೂಗಲ್ ಪೇ, ಫೋನ್ ಪೇ, PTMನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ !ಅಂಗಡಿ ಮಾಲೀಕರಿಗೆ ಲಕ್ಷ ತೆರಿಗೆ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ಸೂಚನೆ

ಆ ವಿಚಾರಗಳನ್ನು ಯಾರು ಮಾತನಾಡುತ್ತಾರೋ ಅವರನ್ನೇ ಕೇಳಿ. (State politics calculated) ಪಕ್ಷ ಇದ್ದರಷ್ಟೇ ನಾನು. ಪಕ್ಷ ಇಲ್ಲದಿದ್ದರೆ ನಾನಿಲ್ಲ ಎಂದು ಹೇಳಿದ್ದಾರೆ.

Tags: bengaluruCM siddaramaiahDK SivakumarKPCC PresidentState politicsvijaya times

Related News

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ
ಪ್ರಮುಖ ಸುದ್ದಿ

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ

September 11, 2026
ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ
ಪ್ರಮುಖ ಸುದ್ದಿ

ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ

September 11, 2026
BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ
ದೇಶ-ವಿದೇಶ

BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ

September 11, 2026
ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.