Karnataka: ರಾಜ್ಯ ಸರ್ಕಾರದ(State government) ಕೋವಿಡ್-19 ಸಂಬಂಧಿತ ಸಲಹೆಗೆ ವಿರೋಧ ಪಕ್ಷಗಳು ನೀಡುತ್ತಿರುವ ರಾಜಕೀಯ ಬಣ್ಣವನ್ನು ಆರೋಗ್ಯ ಸಚಿವ ಕೆ.ಸುಧಾಕರ್(K . Sudhakar) ಖಂಡಿಸಿದ್ದು, ಇದನ್ನು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ನೀಡಲಾಗಿದೆಯೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ ಎಂದು ಹೇಳಿದ್ದಾರೆ.

ಈ ಕುರಿತು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಕರ್ನಾಟಕದಲ್ಲಿ(Karnataka) ವಿಧಾನಸಭೆ ಚುನಾವಣೆಗೆ(Assembly election) ಇನ್ನು ನಾಲ್ಕು ತಿಂಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ರಾಜಕೀಯ ವಾತಾವರಣ ಗರಿಗೆದರಿದೆ.
ಆದರೆ ಪ್ರಪಂಚದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಪ್ರಾರಂಭದಲ್ಲೇ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಸಲಹೆಗಳನ್ನು ನೀಡಿದೆ.
ಆದರೆ ರಾಜ್ಯ ಸರ್ಕಾರದ ಸಲಹೆಯು, ‘ಪಂಚರತ್ನ ಯಾತ್ರೆ’ ಯನ್ನು ಕೈಗೊಳ್ಳದಂತೆ ನಿರ್ಬಂಧಿಸುವ ಗುರಿಯನ್ನು ಹೊಂದಿದೆ ಎಂದು ಹೇಳುವ ಮೂಲಕ ಜೆಡಿಎಸ್(JDS) ಪಕ್ಷ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಸುಧಾಕರ್ ಹೇಳಿದರು.
https://vijayatimes.com/tajmahal-received-tax-notice/
ಇನ್ನು ಕೋವಿಡ್ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದೆಯೇ ಹೊರತು ರಾಜಕೀಯ ಕಾರಣಗಳಲ್ಲ.
ಇದನ್ನೂ ನೋಡಿ : https://youtu.be/k0c1QubEByI ಯಾರಾಗ್ತಾರೆ ಸಿ ಎಂ ? ಈ ಬಾರಿ ಸಿ ಎಂ ಸೀಟ್ ಯಾರಿಗೇ?? ಜನಸಾಮಾನ್ಯರ ಅಭಿಪ್ರಾಯ ಕೇಳೋಣ ಬನ್ನೀ.
ಚೀನಾ(China), ಜಪಾನ್, ಕೊರಿಯಾ ಮತ್ತು ಯುಎಸ್(US)ನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮ ಆದ್ಯತೆ ನಮ್ಮ ಜನರನ್ನು ರಕ್ಷಿಸುವುದಾಗಿದೆ.
ಜನರ ರಕ್ಷಣೆಗಾಗಿ ವಿಪಕ್ಷಗಳು ಸರ್ಕಾರದ ನಿರ್ಧಾರವನ್ನು ಬೆಂಬಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇನ್ನು ಜೆಡಿಎಸ್ನಾಯಕ ಎಚ್.ಡಿ. ಕುಮಾರಸ್ವಾಮಿ(H.D. Kumaraswamy) ಅವರು ಕಳೆದ 30 ದಿನಗಳಿಂದ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ‘ಪಂಚರತ್ನ ಯಾತ್ರೆ’ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ದೇಶಾದ್ಯಂತ ತಮ್ಮ ‘ಭಾರತ್ ಜೋಡೋ ಯಾತ್ರೆ’ಯನ್ನು ಮುಂದುವರೆಸಿದ್ದಾರೆ.
ಕೋವಿಡ್ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಈ ಯಾತ್ರೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ವಿಪಕ್ಷಗಳು ಸರ್ಕಾರದ(Government) ನಿರ್ಧಾರವನ್ನು ವಿರೋಧಿಸುತ್ತಿವೆ.
- ಮಹೇಶ್.ಪಿ.ಎಚ್