ಮೈಸೂರಿನ ಮೃಗಾಲಯದಲ್ಲಿ ಪೆಂಗ್ವಿನ್ ಪಾರ್ಕ್ (States first penguin park)
ಮತ್ಸ್ಯಾಗಾರದ ಬದಲು ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಸರ್ಕಾರ ನಿರ್ಧಾರ
ಮೃಗಾಲಯ ಸಮೀಪದ ಕಾರಂಜಿ ಕೆರೆಯಲ್ಲಿನಿರ್ಮಾಣ
ಮೈಸೂರು: ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಮೈಸೂರಿನ ಮೃಗಾಲಯದ ಸಮೀಪ ಇರುವ ಕಾರಂಜಿಕೆರೆಯಲ್ಲಿ(Karanji Lake) ಮತ್ಸ್ಯಾಗಾರ(Aquarium) ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಸರಕಾರ ಮುಂದಾಗಿದೆ.
ವಿಕಾಸಸೌಧದಲ್ಲಿ(Vikas Soudha) ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಈಶ್ವರ ಬಿ ಖಂಡ್ರೆ(Iswara B Khandre)
ಮತ್ಸ್ಯಾಗಾರದ ಕಟ್ಟಡದಲ್ಲಿ ಪೆಂಗ್ವಿನ್ ಧಾಮ(Penguin Sanctuary) ಮಾಡುವುದು ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬೆನ್ನಲ್ಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ.
ಜಿಲ್ಲೆಯ ಕಾರಂಜಿ ಕೆರೆಯಲ್ಲಿರುವ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್ (Penguin Park) ನಿರ್ಮಿಸಲು ಸರ್ಕಾರ ಮುಂದಾಗಿದ್ದು,
ಜೊತೆಗೆ ಮೈಸೂರು ಮೃಗಾಲಯ (Mysuru Zoo), ಬನ್ನೇರುಘಟ್ಟ ಝೂ (Bannerghatta Zoo) ಪ್ರವೇಶ ಶುಲ್ಕವನ್ನು ಶೇ.20ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಈ ಹಿಂದೆ ಮತ್ಸ್ಯಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ತಜ್ಞರ ವರದಿಯಲ್ಲಿ ಮತ್ಸ್ಯ ಪಾರ್ಕ್ ನಿರ್ಮಿಸುವ ಸಾಧ್ಯತೆ ಇಲ್ಲದ ಕಾರಣ, ಪೆಂಗ್ವಿನ್ ಪಾರ್ಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ(Forest Department) ಸಚಿವರು ಸೂಚಿಸಿದ್ದಾರೆ.
ಶೀಘ್ರದಲ್ಲೇ ಡಿಪಿಆರ್(DPR) ಸಿದ್ಧವಾಗಲಿದೆ. ಇದು ರಾಜ್ಯದ ಮೊದಲ ಪೆಂಗ್ವಿನ್ ಪಾರ್ಕ್ ಆಗಲಿದೆ. ಮೃಗಾಲಯಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸಿದರೆ,
ಹೊಸ ವನ್ಯಜೀವಿಗಳು(Wildlife) ಸೇರ್ಪಡೆಯಾದರೆ ಇದರಿಂದ ಪ್ರವಾಸಿಗರ ಆಕರ್ಷಣೆ(Tourist attraction) ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಹಾಗೆಯೇ ಮುಂದಿನ 5 ವರ್ಷಗಳಲ್ಲಿ ಆಯಾ ಮೃಗಾಲಯಗಳು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿರ್ವಹಿಸಲು ಶಕ್ತವಾಗುವಂತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.
ಗಣಿಬಾಧಿತ ಜಿಲ್ಲೆಗಳಲ್ಲಿರುವ ಮೃಗಾಲಯಗಳ ಅಭಿವೃದ್ಧಿಗೆ ಕೆಎಂಇಆರ್‌ಸಿ(KMERC) ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ದಾವಣಗೆರೆಯ ಮೃಗಾಲಯ ಅಭಿವೃದ್ಧಿಗೆ 2 ಕೋಟಿ ರೂ.
ಬಿಡುಗಡೆಗೆ ಅನುಮೋದನೆ ನೀಡಿದರು. ಬೀದರ್‌ನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಕ್ಷಿಧಾಮ(bird sanctuary), ವಿದೇಶಿ ಹಕ್ಕಿ, ಪಕ್ಷಿಗಳ ವಿಶಿಷ್ಟವಾದ ಪಕ್ಷಿಲೋಕವನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಿದರು.
ಜೊತೆಗೆ ಈ ಯೋಜನೆಗೆ 20 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಸೂಚಿಸಿದರು.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ(Sri Chamarajendra Zoo) ಹಾಗೂ ಕಾರಂಜಿಕೆರೆ ಮಧ್ಯ ಭಾಗದಲ್ಲಿಸಾರ್ವಜನಿಕ,
ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು ವಿಸ್ಕೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಈ ಹಿಂದೆ ಆಲೋಚಿಸಲಾಗಿತ್ತು.
ಮತ್ಸ್ಯಾಗಾರ ಮಾಡುವ ಜಾಗದಲ್ಲಿ ರಸ್ತೆ ಹಾದು ಹೋಗಿದ್ದು. ಅಲ್ಲದೆ, ಕಟ್ಟಡವನ್ನು ಒಡೆದು ಕಾಮಗಾರಿ ನಡೆಸಬೇಕು. ಈ ಹಿನ್ನೆಲೆಯಲ್ಲಿಅಕ್ವೇರಿಯಂ ಮಾಡಲು ಸಾಧ್ಯವಿಲ್ಲಎಂದು ತಜ್ಞರು ವರದಿ ನೀಡಿದ್ದಾರೆ.
ಹೀಗಾಗಿ ಮತ್ಸ್ಯಾಗಾರದ ಬದಲು ಪೆಂಗ್ವಿನ್ ಪಾರ್ಕ್ ಮಾಡಲು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಆಡಳಿತ ಮಂಡಳಿ ಡಿಪಿಆರ್ ತಯಾರಿಸಲು ತೀರ್ಮಾನಿಸಿದೆ.
ಇದೇನು ಹೊಸ ಪ್ರಾಜೆಕ್ಟ್ ಅಲ್ಲ, 14 ವರ್ಷಗಳ ಹಿಂದೆಯೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
2011-12ರಲ್ಲಿಶುರುವಾದ ಈ ಯೋಜನೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ 4.26 ಕೋಟಿ ರೂ. ವೆಚ್ಚದಲ್ಲಿಒಂದು ಕಟ್ಟಡ ಸಹ ನಿರ್ಮಾಣವಾಗಿತ್ತು.
ಈಗಲೂ ಆ ಕಟ್ಟಡವಿದೆ. ಅದನ್ನು 2018ರಲ್ಲಿ ಮೈಸೂರು ಮೃಗಾಲಯದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಆ ನಂತರ ಕಾಮಗಾರಿ ಮಾತ್ರ ಮುಂದುವರಿದಿಲ್ಲ.
ನುರಿತ ತಜ್ಞರು ಪೆಂಗ್ವಿನ್ ಪಾರ್ಕ್ ಬಗ್ಗೆ ಪರಿಶೀಲಿಸಿ ಡಿಪಿಆರ್ ಸಿದ್ಧಪಡಿಸಲಿದ್ದಾರೆ.
ತಾಂತ್ರಿಕವಾಗಿ ಏನೆಲ್ಲಾ ಮಾಡಬೇಕೆಂಬ ವರದಿಯನ್ನೂ ನೀಡಲಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಪೆಂಗ್ವಿನ್ ಪಾರ್ಕ್ ಇಲ್ಲ. ಹೊರ ದೇಶಗಳಿಂದ ಪೆಂಗ್ವಿನ್‌ಗಳನ್ನು ತರಿಸಿಕೊಳ್ಳಲಾಗುವುದು.
ಝೂನಲ್ಲಿ ಪೆಂಗ್ವಿನ್ ಇಲ್ಲದ್ದರಿಂದ ಅವುಗಳನ್ನು ತಂದರೆ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಲಿದೆ, (States first penguin park) ಎಂದು ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಹೇಳಿದರು.