ಯುಪಿಐ ಪೇಮೆಂಟ್ ಮಾಡುವಾಗ (steps when making UPI payments) ಎಚ್ಚರಿಕೆ ಇಲ್ಲದಿದ್ದರೆ ಸಮಸ್ಯೆ ಖಚಿತ
UPI ಬಳಕೆದಾರರಿಗೆ ಎಚ್ಚರಿಕೆ! ತಪ್ಪು ಪೇಮೆಂಟ್ ಆದ್ರೆ ತಕ್ಷಣ ಹೀಗೆ ಮಾಡಿ
ದೂರು ನೀಡುವ ವಿಧಾನದಿಂದ ಹಿಡಿದು ಪರಿಹಾರ ಮಾರ್ಗಗಳವರೆಗೆ ಸಂಪೂರ್ಣ ವಿವರ
ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಡಿಜಿಟಲ್ ಪಾವತಿ (steps when making UPI payments) ವ್ಯವಸ್ಥೆಯಲ್ಲಿ ಯುಪಿಐ (UPI) ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಸಣ್ಣ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದ ವಹಿವಾಟುಗಳವರೆಗೂ ಜನರು ದಿನನಿತ್ಯ ಯುಪಿಐ ಮೂಲಕವೇ ಹಣ ಕಳುಹಿಸುತ್ತಿದ್ದಾರೆ. ಅಂಗಡಿಗಳಲ್ಲಿ ಖರೀದಿ, ಸ್ನೇಹಿತರ ನಡುವೆ ಹಣ ವರ್ಗಾವಣೆ, ಆನ್‌ಲೈನ್ ಸೇವೆಗಳ ಪಾವತಿ – ಎಲ್ಲವೂ ಯುಪಿಐ ಮೂಲಕವೇ ನಡೆಯುತ್ತಿದೆ.

ಈ ವೇಗದ ಮತ್ತು ಸುಲಭವಾದ ವ್ಯವಸ್ಥೆ ಜನರಿಗೆ ತುಂಬಾ ಅನುಕೂಲಕರವಾಗಿದೆ. ಆದರೆ ಇಷ್ಟೊಂದು (steps when making UPI payments) ಪ್ರಮಾಣದಲ್ಲಿ ವಹಿವಾಟು ನಡೆಯುವಾಗ ಕೆಲವು ಬಾರಿ ತಪ್ಪುಗಳಾಗುವುದು ಸಹಜ.
ವಿಶೇಷವಾಗಿ ಮೊಬೈಲ್ ಸಂಖ್ಯೆ ಅಥವಾ ಯುಪಿಐ ಐಡಿ ತಪ್ಪಾಗಿ ನಮೂದಿಸಿದರೆ ಹಣ ಬೇರೆ ವ್ಯಕ್ತಿಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಮಾರ್ಚ್ ತಿಂಗಳಲ್ಲಿ ದೇಶದಲ್ಲಿ 2,264 ಕೋಟಿ ಸಂಖ್ಯೆಗಳಷ್ಟು ಯುಪಿಐ ಟ್ರಾನ್ಸಾಕ್ಷನ್ (UPI Transaction) ಆಗಿದೆ. ಇಂತಹ ದೊಡ್ಡ ಪ್ರಮಾಣದ ವಹಿವಾಟಿನಲ್ಲಿ ಕೆಲವೊಮ್ಮೆ ಗೊತ್ತಾಗದೇ ಕಣ್ತಪ್ಪುಗಳು ಸಂಭವಿಸಬಹುದು.
ಒಮ್ಮೆ ತಪ್ಪಾಗಿ ಹಣ ಕಳುಹಿಸಿದ ನಂತರ ಅದನ್ನು ತಕ್ಷಣ ಹಿಂತೆಗೆದುಕೊಳ್ಳಬಹುದು ಎಂಬ ಭಾವನೆ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಯುಪಿಐ ಪೇಮೆಂಟ್ ಒಂದು ರಿಯಲ್ ಟೈಮ್ ಪ್ರಕ್ರಿಯೆಯಾಗಿರುವುದರಿಂದ, ಹಣ ಕ್ಷಣಾರ್ಧದಲ್ಲಿ ಸ್ವೀಕರಿಸುವವರ ಖಾತೆಗೆ ಸೇರುತ್ತದೆ.
ಇದರಿಂದಾಗಿ ಪೇಮೆಂಟ್ (Payment) ಮಾಡಿದ ನಂತರ ಅದನ್ನು ರಿವರ್ಸ್ ಮಾಡುವುದು ಸಾಮಾನ್ಯವಾಗಿ ಸಾಧ್ಯವಿಲ್ಲ.
ಯುಪಿಐ ಪೇಮೆಂಟ್ ರಿವರ್ಸ್ ಮಾಡಲಾಗುವುದಿಲ್ಲ ಎಂಬುದು ಸರಳ ಸತ್ಯ. ಆದರೂ, ಇತ್ತೀಚೆಗೆ ಹೆಚ್ಚಿನ ಮೊತ್ತದ (₹10,000ಕ್ಕೂ ಹೆಚ್ಚು) ವ್ಯವಹಾರಗಳಿಗೆ ‘ಕೂಲಿಂಗ್ ಆಫ್’ ಅವಧಿ ನೀಡುವ ಬಗ್ಗೆ ಆರ್‌ಬಿಐ ಯೋಚನೆ ನಡೆಸುತ್ತಿದೆ.
ಈ ನಿಯಮ ಜಾರಿಗೆ ಬಂದರೆ, ದೊಡ್ಡ ಮೊತ್ತದ ಪಾವತಿಗಳಲ್ಲಿ ಕೆಲವು ಸಮಯದ ಒಳಗೆ ತಿದ್ದುಪಡಿ ಅಥವಾ ರದ್ದತಿ ಮಾಡಲು ಅವಕಾಶ ಸಿಗಬಹುದು.
ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಇಂತಹ ಸೌಲಭ್ಯ ಇಲ್ಲದಿರುವುದರಿಂದ ಬಳಕೆದಾರರು ಪಾವತಿ ಮಾಡುವ ಮೊದಲು ಅತ್ಯಂತ ಎಚ್ಚರಿಕೆಯಿಂದ ಇರಬೇಕು.
ಹಾಗಾದರೆ ತಪ್ಪಾಗಿ ಹಣ ಕಳುಹಿಸಿದರೆ ಏನು ಮಾಡಬೇಕು? ಈ ಸಂದರ್ಭದಲ್ಲಿ ಮೊದಲ ಮತ್ತು ಪ್ರಮುಖ ಮಾರ್ಗವೆಂದರೆ ಹಣ ಸ್ವೀಕರಿಸಿದ ವ್ಯಕ್ತಿಯನ್ನು ಸಂಪರ್ಕಿಸುವುದು. ಅವರು ಸಹಕರಿಸಿದರೆ ಮಾತ್ರ ಹಣವನ್ನು ವಾಪಸ್ ಪಡೆಯಲು ಸಾಧ್ಯ.
ಇಲ್ಲದಿದ್ದರೆ, ನೀವು ಬಳಸಿದ ಯುಪಿಐ ಆಪ್‌ನಲ್ಲಿ ‘Report Issue’ ಆಯ್ಕೆಯನ್ನು ಬಳಸಬಹುದು. ಇದಲ್ಲದೆ, ಎನ್‌ಪಿಸಿಐ (NPCI) ಮೂಲಕ ದೂರು ದಾಖಲಿಸಬಹುದು.
ಈ ಪ್ರಕ್ರಿಯೆಗಳು ಕೆಲವೊಮ್ಮೆ ಸಹಾಯ ಮಾಡಬಹುದು, ಆದರೆ ತಕ್ಷಣ ಪರಿಹಾರ ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಯಾವುದೇ ಕಾರಣಕ್ಕೂ ಸಮಸ್ಯೆ ಬಗೆಹರಿಯದಿದ್ದರೆ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ದೂರು ನೀಡಬಹುದು. ಅದಕ್ಕೂ ಫಲಿತಾಂಶ ಸಿಗದಿದ್ದರೆ, ಕೊನೆಯ ಆಯ್ಕೆಯಾಗಿ
ಆರ್‌ಬಿಐ ಓಂಬುಡ್ಸ್‌ಮನ್ (RBI Ombudsman) ಬಳಿ ದೂರು ಸಲ್ಲಿಸಬಹುದು. ಆದರೆ ಈ ಎಲ್ಲ ಕ್ರಮಗಳ ನಂತರವೂ ಹಣ ಮರಳಿ ಸಿಗುತ್ತದೆ ಎಂಬುದಕ್ಕೆ ಖಚಿತತೆ ಇಲ್ಲ.
ಆದ್ದರಿಂದ ಯುಪಿಐ ಪೇಮೆಂಟ್ ಮಾಡುವಾಗ ಸ್ವೀಕರಿಸುವವರ ವಿವರಗಳನ್ನು ಎರಡು ಬಾರಿ ಪರಿಶೀಲಿಸುವುದು ಅತ್ಯಂತ ಮುಖ್ಯ. ಸ್ವಲ್ಪ ಜಾಗ್ರತೆ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುತ್ತದೆ.
ಇದನ್ನು ಓದಿ : https://vijayatimes.com/pay-and-park-rule-in-bengaluru/