New Delhi: ಅಮೆರಿಕ (America) ದಲ್ಲಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಭಾರತ, ಚೀನಾ, ಜಪಾನ್ (India, China, Japan), ಐರೋಪ್ಯ ಒಕ್ಕೂಟ ಸೇರಿದಂತೆ ವಿಶ್ವಾದ್ಯಂತ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಭಾರತದ ಸೆನ್ಸೆಕ್ಸ್ (India Sensecs)ನಲ್ಲಿ ಆರಂಭದಲ್ಲೇ ಎರಡೂವರೆ ಸಾವಿರ ಅಂಕಗಳ ಕುಸಿತ ದಾಖಲಾಯ್ತು. ನಿಫ್ಟಿಯಲ್ಲೂ ಆರಂಭದಲ್ಲೇ ಶೇ. 3.25 ರಷ್ಟು ಕುಸಿತ ಕಂಡಿತು. ಭಾರತದ ಷೇರು ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡು ಬಂದಿರೋದನ್ನ ಗಮನಿಸಿದರೆ ಭಾರತದ ಹೂಡಿಕೆದಾರರಿಗೆ ಸುಮಾರು 9.51 ಲಕ್ಷ ಕೋಟಿ ರೂ. ನಷ್ಟ ಸಂಭವಿಸುವ ಭೀತಿ ಎದುರಾಗಿದೆ.
ಷೇರು ಮಾರುಕಟ್ಟೆಯ ಸೋಮವಾರದ ವಹಿವಾಟು ಆರಂಭವಾದ ಬೆನ್ನಲ್ಲೇ 2,400 ಅಂಕಗಳ (Massive fall in stock markets) ಕುಸಿತ ದಾಖಲಾಯ್ತು. ಬಳಿಕ ಈ ಕುಸಿತ ಇನ್ನಷ್ಟು ಹೆಚ್ಚಾಯ್ತು, 2,600 ಅಂಕಗಳಷ್ಟು ಕುಸಿತ ಕಂಡು ಬಂದಿದೆ.ಹೂಡಿಕೆದಾರರು ಈಗಾಗಲೇ 17 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಮಧ್ಯಮ ಮತ್ತು ಸಣ್ಣ ಕ್ಯಾಪ್ ಷೇರುಗಳು ಹೆಚ್ಚು ಹಾನಿಗೊಳಗಾಗಿವೆ. ಭಾರತೀಯ ಷೇರು ಮಾರುಕಟ್ಟೆಗಳು ಜಾಗತಿಕ ಮಾರುಕಟ್ಟೆಗಳಿಗೆ ಅನುಗುಣವಾಗಿ ಕುಸಿತ ಕಂಡಿದ್ದರೂ, ಏಷ್ಯನ್ (Asian) ಸಹವರ್ತಿಗಳಿಗೆ ಹೋಲಿಸಿದರೆ ಕುಸಿತವು ಇನ್ನೂ ಕಡಿಮೆಯಾಗಿದೆ.
ಬಿಎಸ್ಇ ಸೆನ್ಸೆಕ್ಸ್ (BSI Sensecs) 80,000 ಪಾಯಿಂಟ್ಕೆ ಳಗೆ ಚಲಿಸಿದರೆ, ನಿಫ್ಟಿ 50; 24,300 ರ ಸಮೀಪದಲ್ಲಿತ್ತು. ಬೆಳಗ್ಗೆ ಬಿಎಸ್ಇ ಸೆನ್ಸೆಕ್ಸ್ 79,579.21ರಲ್ಲಿ ವ್ಯವಹಾರ ನಡೆಸುತ್ತಿದ್ದು, 1402 ಅಂಕ ಅಂದರೆ 1.73ರಷ್ಟು ಕುಸಿತ ಕಂಡಿತ್ತು. ಹಾಗೆಯೇ ನಿಫ್ಟಿಪಿಪ್ಟಿ 24,303.80 ಅಂಕಗಳಲ್ಲಿ ಟ್ರೇಡಿಂಗ್ ಮಾಡುತ್ತಿದ್ದು, 414 ಅಂದರೆ 1.67 ರಷ್ಟು ಕುಸಿತ ಕಂಡಿತ್ತು. ಈ ಸಮಯದಲ್ಲಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಸನ್ ಫಾರ್ಮಾ ಹಾಗೂ ಹಿಂದೂಸ್ತಾನ್ ಯುನಿಲಿವರ್ ಮಾತ್ರ ಏರಿಕೆ ಕಂಡ ಷೇರುಗಳಾಗಿವೆ.
ಹಾಗೆಯೇ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಅದಾನಿ ಪೋರ್ಟ್ ಎಸ್ಇಝೆಡ್ (Adani Port SEZ), ಮಾರುತಿ ಸುಜುಕಿ, ಎಸ್ಬಿಐ, ಜೆಎಸ್ಡಬ್ಲ್ಯು ಸ್ಟೀಲ್ ಹಾಗೂ ಎಂ&ಎಂ ಪ್ರಸ್ತುತ ಇಳಿಕೆ ಕಂಡ ಪ್ರಮುಖ ಷೇರುಗಳಾಗಿವೆ. ಭಾರತದ ಷೇರು ಮಾರುಕಟ್ಟೆ ಮಾತ್ರವಲ್ಲದೇ ಜಾಗತಿಕ ಹಣಕಾಸು ಮಾರುಕಟ್ಟೆಗಳು ಇಂದು ಗಮನಾರ್ಹ ಪ್ರಕ್ಷುಬ್ಧ ಸ್ಥಿತಿ ತಲುಪಿದೆ.