Bengaluru (ಜೂ.29): ಸದ್ಯ ಕಾಂಗ್ರೆಸ್ (Streeshakti sangha loan waive) ಪಕ್ಷ ಘೋಷಿಸಿರುವ 5 ಗ್ಯಾರಂಟಿ ಜಾರಿಗೆ ಹಣ ಹೊಂದಿಸುವುದು ಕಷ್ಟಕರ ಆಗಿದೆ ಆದ್ದರಿಂದ ಖಂಡಿತವಾಗಿಯೂ ಮುಂದಿನ
ವರ್ಷ ಸ್ತ್ರೀ ಶಕ್ತಿ ಸಂಘಗಳ (Stree Shakthi association) ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ. ಕೋಲಾರದಲ್ಲಿ
(Kolar) ನಡೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು .

ಇದೀಗ ಕೋಲಾರ-ಚಿಕ್ಕಬಳ್ಳಾಪುರ (Chikkaballapur) ಭಾಗದ ಹಲವು ಮಹಿಳೆಯರು ಮುಖ್ಯಮಂತ್ರಿ ನಿವಾಸದ ಸಮೀಪ ಅದರಂತೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ
ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೈತರ ನಿಯೋಗದೊಂದಿಗೆ ಮಾತನಾಡಿದ ಈ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ,
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೊಟ್ಟಮಾತಿನಂತೆ (Streeshakti sangha loan waive) ನಡೆದುಕೊಳ್ಳುತ್ತೇನೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಆದರೆ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ
ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಎಚ್.ಕೆ.ನಾರಾಯಣಗೌಡ (H.K Narayana Gowda), ‘ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರ ಗಮನಕ್ಕೆ ಅಧಿಕಾರಿಗಳು ಬಲವಂತವಾಗಿ ಸಾಲ ವಸೂಲಿ ಮಾಡಲು
ಬರುತ್ತಿದ್ದಾರೆ ಎಂಬುದು ಗೊತ್ತಾದಾಗ ಸಹಕಾರ ಸಚಿವರು ‘ಬಜೆಟ್ ಮಂಡನೆಯ ಬಳಿಕ ,ಅಧಿಕಾರಿಗಳ ಮತ್ತು ಡಿಸಿಸಿ ಬ್ಯಾಂಕ್‌ಗಳ (DCC Bank) ಅಧ್ಯಕ್ಷರ ಜೊತೆ ಸಭೆ ನಡೆಸಿ ಬಲವಂತವಾಗಿ ಸಾಲ ವಸೂಲಿ
ಮಾಡಬಾರದು ಎಂದು ಸೂಚನೆ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದರು’ ಎಂದು ನಾರಾಯಣ ಗೌಡ ವಿವರಿಸಿದರು.

ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ‘ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರ ಪ್ರಸ್ತುತ 50 ಸಾವಿರ ರು. ಸಾಲ ಮನ್ನಾ ಮಾಡಿ ನಂತರ ಹೊಸದಾಗಿ 1 ಲಕ್ಷ ರು. ಸಾಲ ನೀಡಲಾಗುವುದು ಎಂದು ಹೇಳಿದ್ದರು.
ಸಿದ್ದರಾಮಯ್ಯನವರು ಕೊಟ್ಟಮಾತಿನಂತೆ ಭರವಸೆ ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ.ಆದರೂ ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಇದಕ್ಕೂ
ಮುನ್ನ ಮಹಿಳೆಯರು ಎಚ್ಚರಿಸಿದ್ದರು.
ಸಿಎಂ ಚಿತ್ರಕ್ಕೆ ಹಾಲಿನ ಅಭಿಷೇಕ:
‘ಕೋಲಾರದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದು ಹೂವನ್ನೂ ಹೆಚ್ಚಾಗಿ ಬೆಳೆಯುತ್ತೇವೆ. ಸಿದ್ದರಾಮಯ್ಯ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪ್ರತಿಭಟನೆ ವೇಳೆ
ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹೂವು ಮತ್ತು ಹಾಲಿನ ಅಭಿಷೇಕ ನಡೆಸಿದರು. ಕುಮಾರಕೃಪಾ ರಸ್ತೆ ಬದಿ ಕುಳಿತು ಮಹಿಳೆಯರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ಇಲ್ಲಿಂದ ತೆರಳುವುದು ಎಂದು
ಪಟ್ಟು ಹಿಡಿದರು. ಬಳಿಕ ಮುಖ್ಯಮಂತ್ರಿಗಳ ಭೇಟಿಗೆ ಐವರ ನಿಯೋಗಕ್ಕೆ ಅವಕಾಶ ಕಲ್ಪಿಸಲಾಯಿತು.
ರಶ್ಮಿತಾ ಅನೀಶ್