Chitradurga : ಹಿರಿಯರು ಮನೆತನದ ಆಧಾರ ಸ್ತಂಭ ಮತ್ತು ಜೀವನಾಡಿಯಾಗಿದ್ದು, ತಮ್ಮ ಮನೆ ಮನಗಳಲ್ಲಿ ನೂರಾರು ವರ್ಷಗಳ ಕಾಲ ಜೀವಿಸುತ್ತಾ ಎಲ್ಲರನ್ನೂ ಆಶೀರ್ವದಿಸಬೇಕೆನ್ನುವ ಹಂಬಲ ಕಿರಿಯರಲ್ಲಿ ಇರುವುದು ಸಾಮಾನ್ಯ.
ಇನ್ನು, ಈ ಕಾಲದ ಕಿರಿಯರಿಗಿಂತ ಆಗಿನ ಕಾಲದ ಹಿರಿಯರೇ ಗಟ್ಟಿ.
ಎಷ್ಟೇ ವಯಸ್ಸಾದರೂ ಪ್ರತಿನಿತ್ಯ ಏನಾದರೊಂದು ಕೆಲಸವನ್ನು ಹಚ್ಚಿಕೊಂಡು, ಹೊಸ ಚಿಂತನೆಯ ಹಾದಿಗೆ ಹಂಬಲಿಸುತ್ತಿರುತ್ತಾರೆ.
ಹೀಗೆ, ಬಿಪಿ ಶುಗರ್(Strength Secret Of Siddapajja) ಯಾವುದೇ ಸಮಸ್ಯೆಯಿಲ್ಲದೇ ಯಶಸ್ವಿಯಾಗಿ 103 ವರ್ಷ ಪೂರೈಸಿರುವ ಹಿರಿಯರೊಬ್ಬರ ಕಥೆ ಇಲ್ಲಿದೆ.
ಸಿದ್ದಪ್ಪಜ್ಜ ಎನ್ನುವ ಈ ಅಜ್ಜನ ಆರೋಗ್ಯದ ಗುಟ್ಟು ಕೇಳಿದರೆ ಖಂಡಿತ ನಮಗೆ ಆಚ್ಚರಿಯಾಗುತ್ತದೆ.
ಇದನ್ನೂ ಓದಿ : https://vijayatimes.com/pfi-ban-petition-dismissed/
“ನಮ್ಮ ಕಾಲ್ ದಲ್ಲಿ ಹಿಂಗೆಲ್ಲಾ ಇರ್ಲಿಲ್ಲಪ್ಪ” ಎಂದು ಮಾತು ಶುರು ಮಾಡುವ 103 ವರ್ಷದ ಭರಮಸಾಗರ ನಿವಾಸಿ ನರಗನಹಳ್ಳಿ ಸಿದ್ದಜ್ಜ ಅವರ ಆರೋಗ್ಯ, ಈಗಿನ ಯುವಕರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಮಾದರಿಯಾಗಿದೆ ಎಂದರೂ ತಪ್ಪಿಲ್ಲ.
ತಮ್ಮ ಮನೆತನದ ಹಿರಿಯ ಜೀವವಾಗಿರುವ ಸಿದ್ದಜ್ಜನಿಗೆ ಒಟ್ಟು 8 ಜನ ಮಕ್ಕಳಿದ್ದು, ಅದರಲ್ಲಿ 2 ಗಂಡು ಹಾಗೂ 6 ಹೆಣ್ಣು ಮಕ್ಕಳಿದ್ದಾರೆ.
ಎಲ್ಲಾ ಮಕ್ಕಳಿಗೂ ಮದುವೆ ಮಾಡಿಸಿ 20 ಜನ ಮೊಮ್ಮಕ್ಕಳು ಹಾಗೂ 5 ಜನ ಮರಿ ಮೊಮ್ಮಕ್ಕಳನ್ನು ಕಂಡಿದ್ದಾರೆ ಈ ಅಜ್ಜ.
ಇವರು 5 ಎಕರೆ ಜಮೀನನ್ನು ಹೊಂದಿದ್ದು, ಪತ್ನಿ ಶಿವಗಂಗಮ್ಮ ಬಹಳ ಹಿಂದೆಯೇ ನಿಧನರಾಗಿದ್ದಾರೆ.
ಈಗಿನ ಯುವಕರೇ ನಾಚುವಂತೆ ಪ್ರತಿನಿತ್ಯ ಎಡೆಬಿಡದೇ ಕೆಲಸಗಳಲ್ಲಿ ತೊಡಗುತ್ತಾ ಇತರರಿಗೂ ಅಜ್ಜ ಮಾದರಿಯಾಗಿ ನಿಂತಿದ್ದಾರೆ.
https://fb.watch/h6_9JrDPUG/ PROMO | ಥೂ ಥೂ..ಇದೆಂಥಾ ರಸ್ತೆ ರೀ? ಎಲ್ಲಿದೆ ಚಿನ್ನದ ರಸ್ತೆ?
ಇನ್ನು, ಸಿದ್ದಪ್ಪಜ್ಜ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಎದ್ದು ಪ್ರಾವಿಜನ್ ಸ್ಟೋರ್(Strength Secret Of Siddapajja) ಬಾಗಿಲು ತೆಗೆದು ವ್ಯಾಪಾರ ಮಾಡುತ್ತಾರೆ. ಜೊತೆಗೆ ಅಜ್ಜನಿಗೆ ಮೊಮ್ಮಗನೂ ಬೆಂಬಲ ನೀಡುತ್ತಾನೆ.
ಸಿದ್ದಪ್ಪಜ್ಜನಿಗೆ 103 ವರ್ಷ ವಯಸ್ಸಾಗಿದ್ದರೂ ಆರೋಗ್ಯ ಉತ್ತಮವಾಗಿದ್ದು, ಕಿವಿಗಳು ಸ್ವಲ್ಪ ಮಂದವಾಗಿವೆ ಎನ್ನುವುದನ್ನು ಬಿಟ್ಟರೆ ಕೆಲವೊಮ್ಮೆ ಅಲ್ಪ ಸ್ವಲ್ಪ ಜ್ವರ, ಕೈಕಾಲು ನೋವು ಇರುತ್ತದೆ ಅಷ್ಟೇ!
ಪ್ರತಿದಿನ ಸಮಯಕ್ಕೆ ಸರಿಯಾಗಿ 3 ಬಾರಿ ಊಟ ಮಾಡುವ ಸಿದ್ದಜ್ಜ ಬೆಳಿಗ್ಗೆ ಮತ್ತು ಸಂಜೆ ಟೀ ಅಥವಾ ಕಾಫಿ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ರಾಗಿ ಅಥವಾ ಜೋಳದ ಮುದ್ದೆ ಹಾಗೂ ರೊಟ್ಟಿ, ಚಪಾತಿ ಊಟ ಮಾಡುತ್ತಾರೆ.
ಅಜ್ಜನ ಹಲ್ಲುಗಳು ಈಗಲೂ ಗಟ್ಟಿಯಾಗಿರುವುದು ಆಶ್ಚರ್ಯ.
ಮನೆಯಲ್ಲಿ ಹಬ್ಬ ಅಥವಾ ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ಎಲ್ಲಾ ರೀತಿಯ ಸಿಹಿ ತಿಂಡಿಗಳನ್ನು ಸೇವಿಸುತ್ತಾರೆ. ಊಟದ ನಂತರ ಎಲೆ ಅಡಿಕೆ(Beatel Leaf) ಇದ್ದರೆ ಸಾಕು ಎನ್ನುತ್ತಾರೆ ಸಿದ್ದಪ್ಪಜ್ಜ.
ಇಂತಹ ದಿನಚರಿಯ ಜೊತೆಗೆ, ಧನಾತ್ಮಕ ಚಿಂತನೆ ಹಾಗೂ ಗಟ್ಟಿ ಮನಸ್ಸು ಆರೋಗ್ಯಕ್ಕೆ ಬಹಳ ಮುಖ್ಯ.
ಕೊರೋನಾ ಸಾಂಕ್ರಾಮಿಕ ಪಿಡುಗು ಕಾಡುತ್ತಿದ್ದ ಸಮಯದಲ್ಲಿ ಭರಮಸಾಗರದ ಗ್ರಾಪಂ ಅಧ್ಯಕ್ಷರಾಗಿದ್ದ ಮಗ ಮತ್ತು ಸೊಸೆ,
ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯಗಳನ್ನು ಕೈಗೊಂಡ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿ ದೂರವಾದ ನೋವು ಈಗಲೂ ಕಾಡುತ್ತಿದೆ ಎಂದು ಸಿದ್ದಜ್ಜ ಬೇಸರ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ : https://vijayatimes.com/priyank-questions-bjp-govt/
ಆದರೆ, ವಯಸ್ಸಿನ ಬೇಧವಿಲ್ಲದೆ ಕಾಯಿಲೆಯನ್ನೇ ಮೈ ತುಂಬಾ ಅಂಟಿಸಿಕೊಂಡು ಒದ್ದಾಡುತ್ತಿರುವ ಈ ಕಾಲದಲ್ಲಿ ಸಿದ್ದಜ್ಜ ಯುವಕರಿಗೆ ಮಾದರಿಯಾಗಿದ್ದು, ಇನ್ನೂ ಹಲವಾರು ವರ್ಷ ಆರೋಗ್ಯವಾಗಿ ಬದುಕಲಿ ಎಂಬುದೇ ಎಲ್ಲರ ಆಶಯ.