ಮೈಸೂರು, ಫೆ. 02: ಸಾಲಕ್ಕಾಗಿ ಮುಂಗಡವಾಗಿ ಹಣ ನೀಡಿದ್ದವರಿಂದ ಒತ್ತಡ ಜಾಸ್ತಿಯಾಗಿದೆ ಎಂದು ಬೇಸರಗೊಂಡು ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದಲ್ಲಿ ಹೊಟ್ಟೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಮಂಡಿಮೊಹಲ್ಲಾದ ರಾಧಾಕೃಷ್ಣ (55) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತಕ್ಷಣ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಪ್ರಧಾನಮಂತ್ರಿ ರೋಜಗಾರ್ ಯೋಜನೆಯಡಿ ಸಾಲ ಕೊಡಿಸುತ್ತೇನೆಂದು ಹೇಳಿ ರಾಧಾಕೃಷ್ಣ ಹಲವರಿಂದ ಮುಂಗಡವಾಗಿ ಹಣ ಪಡೆದಿದ್ದರು. ನಮ್ಮ ಹಣ ವಾಪಸ್ಸು ನೀಡಿ ಎಂದು ಎಲ್ಲರೂ ಕೇಳಿದ್ದರಿಂದ ಭಯಗೊಂಡಿರುವ ವ್ಯಕ್ತಿ ಮೂತ್ರವಿಸರ್ಜನೆ ಮಾಡಿ ಬರುತ್ತೇನೆಂದು ಹೇಳಿ ಹೋದ ವ್ಯಕ್ತಿ ಪಾರ್ಕ್ ಬಳಿ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.