Health : ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ಅಥವಾ ಏನೂ ಕೆಲಸ ಮಾಡದೇ ಇದ್ದರೂ ದಣಿವಾಗುವುದು, ಇಂತಹ ಸಮಸ್ಯೆಯನ್ನು ನಿವಾರಿಸಲು(stress tips on health) ಕೆಲವು ಸರಳವಾದ ಮನೆಮದ್ದುಗಳು ಇಲ್ಲಿವೆ ನೋಡಿ.
ಬಾಳೆಹಣ್ಣು: ಬಾಳೆಹಣ್ಣು ಸುಸ್ತನ್ನು ನೀಗಿಸುವ ಅತಿ ಪರಿಣಾಮಕಾರಿ ಹಣ್ಣು. ಇದರಲ್ಲಿನ ಸಕ್ಕರೆ ಮತ್ತು ಕಾರ್ಬೊಹೈಡ್ರೇಡ್ ಅಂಶ ದೇಹಕ್ಕೆ ಚೈತನ್ಯ(stress tips on health) ನೀಡುತ್ತದೆ.
ರಕ್ತಕ್ಕೆ ಕಬ್ಬಿಣಾಂಶ ನೀಡುತ್ತದೆ. ಹೀಮೊಗ್ಲೋಬಿನ್ ಅಂಶ ಹೆಚ್ಚಿದ್ದಷ್ಟು ಆಮ್ಲಜನಕ ಹೆಚ್ಚುತ್ತದೆ ಮತ್ತು ಇದರಿಂದ ಶಕ್ತಿಯೂ ದೊರಕುತ್ತದೆ.
https://vijayatimes.com/par-act-on-pfi-workers/

ಚೀಸ್: ದೇಹದಲ್ಲಿ ಶಕ್ತಿದಾಯಕ ಹಾರ್ಮೋನ್ ಬಿಡುಗಡೆ ಮಾಡುವಲ್ಲಿ ಚೀಸ್ ಹೆಚ್ಚು ಸಹಾಯಕ. ಇದು ಸೋಮಾರಿತನವನ್ನು ನೀಗಿಸಿ ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುತ್ತದೆ.
ಸ್ಟ್ರಾಬೆರಿ: ನಿಮಗೆ ತಕ್ಷಣವೇ ಶಕ್ತಿ ದೊರೆಯಬೇಕೆಂದರೆ ಸ್ಟ್ರಾಬೆರಿ ಉತ್ತಮ ಆಯ್ಕೆ. ಸ್ಟ್ರಾಬೆರಿಯಲ್ಲಿ ಹೆಚ್ಚಿನ ನಾರಿನಂಶ, ವಿಟಮಿನ್ ಸಿ, ಆಂಟಿಯಾಕ್ಸಿಡಂಟ್ ಇರುವುದರಿಂದ ಜೀವಕೋಶಗಳನ್ನು ಶುದ್ಧಗೊಳಿಸಿ ಪುನಶ್ಚೇತನಗೊಳಿಸುತ್ತದೆ.
ಗ್ರೀನ್ ಟೀ: ನಿಮ್ಮ ನರಮಂಡಲಕ್ಕೆ ಗ್ರೀನ್ ಟೀ ಸೇವನೆ ಅತ್ಯುತ್ತಮ ರಿಲ್ಯಾಕ್ಸ್ ನೀಡುತ್ತದೆ. ಬಳಲಿಕೆ ನೀಗಿಸಿ ಏಕಾಗ್ರತೆ ಹೆಚ್ಚಿಸುತ್ತದೆ. ಬೇರೆ ಟೀ, ಕಾಫಿಗೆ ಹೋಲಿಸಿದರೆ ಗ್ರೀನ್ ಟೀನಲ್ಲಿ ಹೆಚ್ಚು ಆಂಟಿಯಾಕ್ಸಿಡಂಟ್ ಇರುವುದರಿಂದ, ಇದರ ಸೇವನೆ ತಕ್ಷಣವೇ ಚೈತನ್ಯ ನೀಡುತ್ತದೆ.
ಬಾದಾಮಿ: 8 ರಿಂದ 10 ಬಾದಾಮಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.
ಜೇನುತುಪ್ಪ: ನರಗಳ ದೌರ್ಬಲ್ಯದಿಂದ ಸುಸ್ತು ಹೆಚ್ಚಾಗಿದ್ದರೆ ಸೇಬು ಹಣ್ಣಿನ ರಸವನ್ನು ಜೇನುತುಪ್ಪದ ಜತೆಗೆ ಸೇವಿಸಿದರೆ ಸುಸ್ತು ಬೇಗ ಕಡಿಮೆಯಾಗುತ್ತದೆ.
https://www.youtube.com/watch?v=ns-yLm-u0EM&list=PLuyhotqqrzj-U8ocozO1OSEg6XHvIxV_x

ಹಾಲು: ಒಂದು ಲೋಟ ಹಸುವಿನ ಹಾಲಿಗೆ ಒಂದು ಚಮಚ ಯಷ್ಠಿ ಮಧುಪುಡಿ, ಅರ್ಧ ಚಮಚ ಜೇನುತುಪ್ಪ, ಒಂದು ಚಮಚ ತುಪ್ಪ ಎಲ್ಲವನ್ನೂ ಸೇರಿಸಿ ಒಂದು ತಿಂಗಳ ಕಾಲ ದಿನಕ್ಕೆ ಒಂದು ಬಾರಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ.
ಹಾಗೇ, ಅಶ್ವಗಂಧದ ಪುಡಿಗೆ ತುಪ್ಪ ಸೇರಿಸಿ ದಿನಕ್ಕೆ 2 ಬಾರಿ ಸೇವಿಸಿದರೆ ಸುಸ್ತು ಶಮನಗೊಂಡು ಶಕ್ತಿ ಹೆಚ್ಚುತ್ತದೆ.
ಜೊತೆಗೆ, ಕಮಲದ ಬೀಜದ ಒಳಭಾಗವನ್ನು ತುಪ್ಪ ಮತ್ತು ಸಕ್ಕರೆ ಜತೆ ಸೇವಿಸಿದರೆ ಶಕ್ತಿ ಹೆಚ್ಚಿ ಸುಸ್ತು ಕಡಿಮೆಯಾಗುತ್ತದೆ.
ಪವಿತ್ರ