• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

New Year 2026: ಹೊಸ ವರ್ಷಕ್ಕೆ ಬೆಂಗಳೂರು ಸೇರಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿಯಮಗಳು

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
New Year 2026: ಹೊಸ ವರ್ಷಕ್ಕೆ ಬೆಂಗಳೂರು ಸೇರಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿಯಮಗಳು
0
SHARES
3
VIEWS
Share on FacebookShare on Twitter
  • ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಬಂದ್; ಬಿಎಂಟಿಸಿ–ಮೆಟ್ರೋ (Strict rules for new year) ಸೇವೆ ತಡರಾತ್ರಿ ವರೆಗೆ ಲಭ್ಯ
  • ಹೊಸ ವರ್ಷಾಚರಣೆ ವೇಳೆ ಯಾವೆಲ್ಲ ಸ್ಥಳಗಳು ಬಂದ್? ಯಾವ ಸೇವೆಗಳು ತಡರಾತ್ರಿ ವರೆಗೆ ಓಪನ್? ಇಲ್ಲಿದೆ ಸಂಪೂರ್ಣ ವಿವರ
  • ಭದ್ರತೆಗಾಗಿ ನಂದಿಗಿರಿ, ಮುಳ್ಳಯ್ಯನಗಿರಿ ಸೇರಿ ಹಲವು ಪ್ರದೇಶಗಳಿಗೆ ಪ್ರವೇಶ ನಿರ್ಬಂಧ, ಸಾರಿಗೆ ಸೇವೆ ವಿಸ್ತರಣೆ

Bengaluru: ಹೊಸ ವರ್ಷ 2026ರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ (Strict rules for new year) ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಭದ್ರತಾ ವ್ಯವಸ್ಥೆಯನ್ನು ಕಠಿಣಗೊಳಿಸಲಾಗಿದೆ.

ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜ್ಯದ ಹಲವು ಪ್ರವಾಸಿ ತಾಣಗಳು, ಜನಸಂದಣಿ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.

ಅದರ ಜೊತೆಗೆ ಹೊಸ ವರ್ಷಾಚರಣೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ (BMTC) ಬಸ್ ಮತ್ತು ನಮ್ಮ ಮೆಟ್ರೋ ಸೇವೆಗಳ ಸಮಯಾವಧಿಯನ್ನು ವಿಸ್ತರಿಸಲಾಗಿದೆ.

Strict rules for new year

ಹೊಸ ವರ್ಷದ ಸಂಭ್ರಮದ ವೇಳೆ ಯಾವೆಲ್ಲ ಸ್ಥಳಗಳು ಬಂದ್ ಆಗಲಿವೆ (Strict rules for new year) ಮತ್ತು ಯಾವ ಸೇವೆಗಳು ಲಭ್ಯವಿರಲಿವೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರವಾಸಿ ತಾಣಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವಪ್ರಸಿದ್ಧ ನಂದಿಗಿರಿಧಾಮಕ್ಕೆ (Nandi Hills) ಡಿಸೆಂಬರ್ 31ರ ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ (Mullaiyanagari) , ಸೀತಾಳಯ್ಯನಗಿರಿ (Seethalayyanagiri) ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ನೀಡಲಾಗದೇ, ರಾತ್ರಿ 10 ಗಂಟೆಯ ನಂತರ ಒಳಾಂಗಣದಲ್ಲಿ ಮಾತ್ರ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷದ ಆಚರಣೆಯನ್ನು ಮಧ್ಯರಾತ್ರಿ 12.30ರೊಳಗೆ ಮುಕ್ತಾಯಗೊಳಿಸಬೇಕೆಂದು ಸೂಚಿಸಲಾಗಿದೆ.

ಅಲ್ಲದೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೀಚ್‌ಗಳ (Beach) ಬಳಿ ಅನಗತ್ಯ ಜನಸಂದಣಿ ಆಗದಂತೆ ನಿಗಾ ವಹಿಸಲಾಗಿದೆ.

ಕರಾವಳಿ ಭಾಗದ ರೆಸಾರ್ಟ್‌ಗಳು (Resorts) ಹಾಗೂ ಹೋಮ್‌ಸ್ಟೇಗಳು (Homestay) ತೆರೆಯಲ್ಪಟ್ಟಿದ್ದರೂ, ಸರ್ಕಾರ ನಿಗದಿಪಡಿಸಿದ ಸಮಯ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಹೊಸ ವರ್ಷದ ರಾತ್ರಿ ವಿಶೇಷ ಸಂಚಾರ ನಿಯಂತ್ರಣ ಜಾರಿಯಲ್ಲಿರಲಿದೆ. ಚರ್ಚ್ ಸ್ಟ್ರೀಟ್ (Church Street) , ಎಂಜಿ ರಸ್ತೆ ಹಾಗೂ ಬ್ರಿಗೇಡ್ (Brigade) ರಸ್ತೆಗಳಲ್ಲಿ ಸಂಜೆ ಬಳಿಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ಈ ಪ್ರದೇಶಗಳಿಗೆ ಒಮ್ಮೆ ಪ್ರವೇಶಿಸಿ ಹೊರಬಂದವರಿಗೆ ಮರು ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಂಜಿ ರಸ್ತೆ ಹಾಗೂ ಟ್ರಿನಿಟಿ ಮೆಟ್ರೋ (Trinity Metro) ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸಂಜೆ 6 ಗಂಟೆಯ ನಂತರ ನಗರದಲ್ಲಿನ ಉದ್ಯಾನವನಗಳನ್ನೂ ಮುಚ್ಚಲಾಗುತ್ತದೆ.

ಪ್ರಮುಖ ಫ್ಲೈಓವರ್‌ಗಳ (Flyover) ಮೇಲೂ ಸಂಚಾರ ನಿರ್ಬಂಧ ವಿಧಿಸಲಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ, ಹೊಸ ವರ್ಷಾಚರಣೆಗೆ ತೆರಳುವವರ ಅನುಕೂಲಕ್ಕಾಗಿ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಹೆಚ್ಚಿನ ಸಮಯ ನೀಡಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ತಡರಾತ್ರಿ 2 ಗಂಟೆಯವರೆಗೆ ಸಂಚರಿಸಲಿವೆ.

ನಮ್ಮ ಮೆಟ್ರೋ ರೈಲು ಸೇವೆ ಮುಂಜಾನೆ 3 ಗಂಟೆಯವರೆಗೆ ಲಭ್ಯವಿರಲಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ತಡರಾತ್ರಿ ವರೆಗೆ ಕಾರ್ಯಾಚರಣೆ ಮಾಡಲು ಅನುಮತಿ ನೀಡಲಾಗಿದೆ.

ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ರಾತ್ರಿ 1 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಪೊಲೀಸರು, ಹೋಮ್ ಗಾರ್ಡ್ ಹಾಗೂ ವಿಶೇಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಸಹ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಸುರಕ್ಷಿತವಾಗಿ ಹೊಸ ವರ್ಷವನ್ನು ಸಂಭ್ರಮಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನು ಓದಿ : https://vijayatimes.com/new-financial-rules/

Tags: guidelinesnewnewyearrules

Related News

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು
ಪ್ರಮುಖ ಸುದ್ದಿ

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು

January 22, 2026
ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌
ದೇಶ-ವಿದೇಶ

ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌

January 22, 2026
SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ
ಪ್ರಮುಖ ಸುದ್ದಿ

SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ

January 22, 2026
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

January 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.