- ಪೊಲೀಸ್, ಅಗ್ನಿಶಾಮಕ, ಅಬಕಾರಿ (Strict Rules for New Year ) ಇಲಾಖೆ ಅನುಮತಿ ಕಡ್ಡಾಯ
- ನಿಯಮ ಉಲ್ಲಂಘಸಿದ್ರೆ ಕಠಿಣ ಕ್ರಮ
- ಗೋವಾ ದುರಂತ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ
Bengaluru: ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದ್ದು ಈಗಲೇ (Strict Rules for New Year) ಬೆಂಗಳೂರಿನ ಕೆಲ ರಸ್ತೆಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ .
ಡಿಸೆಂಬರ್ ಅಂತ್ಯ ಎಂದರೆ ಸಿಲಿಕಾನ್ ಸಿಟಿಯಲ್ಲಿ (Silicone City) ಪಾರ್ಟಿಗಳ ಸಂಭ್ರಮ, ಪಬ್ (Pub) ಮತ್ತು ರೆಸ್ಟೋರೆಂಟ್‌ಗಳಲ್ಲಿ (Restaurant) ವಿಶೇಷ ಕಾರ್ಯಕ್ರಮಗಳು, ಮಧ್ಯರಾತ್ರಿ ಕೌಂಟ್‌ಡೌನ್ ಎಲ್ಲವಕ್ಕೂ ಬೆಂಗಳೂರು ನಗರ ಈಗಾಗಲೇ ಸಜ್ಜಾಗಿದೆ.

ಆದರೆ, ಕಳೆದ ಕೆಲ ದಿನಗಳ ಹಿಂದಷ್ಟೇ ಗೋವಾ ಅಲ್ಲಿ ಸಂಭವಿಸಿದ ಅಗ್ನಿ ಅವಘಡಗಳು ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆ, ಈ ಬಾರಿ ನಗರದ ಪೊಲೀಸ್ ಇಲಾಖೆ ಮುಂಚಿತವಾಗಿ ಕಠಿಣ ಗೈಡ್‌ಲೈನ್ಸ್ ಹೊರಡಿಸಿದೆ.
ನ್ಯೂ ಇಯರ್ (New Year) ಸಂಭ್ರಮ ಸುರಕ್ಷಿತವಾಗಿ ಸಾಗಬೇಕೆಂಬ ಉದ್ದೇಶದಿಂದ, ಕಾರ್ಯಕ್ರಮ (Strict Rules for New Year) ಆಯೋಜಕರಿಂದ ಸಾಮಾನ್ಯ ನಾಗರಿಕರ ತನಕ ಎಲ್ಲರ ಮೇಲೂ ನಿಯಂತ್ರಣ ಕ್ರಮಗಳನ್ನೂ ಸ್ಪಷ್ಟವಾಗಿ ವಿವರಿಸಲಾಗಿದೆ.
ಇನ್ನು ಹೊಸ ವರ್ಷಕ್ಕೆ ಇನ್ನೂ ಕೆಲವು ದಿನಗಳಿರುವಾಗಲೇ ಬೆಂಗಳೂರಿನ ಪಬ್‌ಗಳು, ಬಾರ್ (Bar) ಮತ್ತು ರೆಸ್ಟೋರೆಂಟ್‌ಗಳು ವಿಶೇಷ ನ್ಯೂ ಇಯರ್ ಈವೆಂಟ್‌ಗಳ ಸಿದ್ಧತೆಯಲ್ಲಿ ತೊಡಗಿವೆ.
ಆದರೆ, ಈ ಬಾರಿ “ಸೇಫ್ಟಿ ಫರ್ಸ್ಟ್” (Safety First) ಎಂಬ ತತ್ತ್ವಕ್ಕೆ ಹೆಚ್ಚಿನ ಆದ್ಯತೆ. ಯಾವುದೇ ಸಮಾರಂಭಕ್ಕೆ ಫೈರ್ ಡಿಪಾರ್ಟ್‌ಮೆಂಟ್‌ನ (Fire Department) ಅನುಮತಿ ಕಡ್ಡಾಯವಾಗಿದೆ.
ಬೆಂಕಿ ಅವಘಡಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಪರ್ಮಿಷನ್ (Permission) ಇಲ್ಲದ ಯಾವುದೇ ಸ್ಥಳದಲ್ಲಿ ಪಾರ್ಟಿ ನಡೆಸುವುದು ಸಂಪೂರ್ಣ ನಿಷೇಧ.
ನಿಯಮ ಉಲ್ಲಂಘನೆ ಮಾಡಿದರೆ ಪಬ್ ಅಥವಾ ಬಾರ್‌ಗಳನ್ನು ತಕ್ಷಣ ಮುಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಒಳಗೆ ಸೇರಿಸುವುದು ಕೂಡ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅನಾಹುತ ಸಂಭವಿಸಿದರೆ ಅದರ ಹೊಣೆಗಾರಿಕೆ ನೇರವಾಗಿ ಮಾಲೀಕರು ಮತ್ತು ವ್ಯವಸ್ಥಾಪಕರ ಮೇಲಿದೆ ಎಂಬ ಸೂಚನೆಯನ್ನು ನೀಡಲಾಗಿದೆ.
ಅಲ್ಲದೆ ನಗರದ ಪೊಲೀಸ್ ಇಲಾಖೆ ಈ ಬಾರಿ ಸಮಯ ನಿಯಂತ್ರಣಕ್ಕೂ ಹೆಚ್ಚಿನ ಗಮನ ಹರಿಸಿದೆ.
ನ್ಯೂ ಇಯರ್ ಈವೆಂಟ್‌ಗಳು ಎಷ್ಟು ಆರ್ಭಟದಿಂದ ನಡೆದರೂ, ನಿಗದಿತ ಸಮಯ ಮೀರಿಸಿ ಯಾವುದೇ ರೀತಿಯ ಸೇವೆ ನೀಡಲು ಅನುಮತಿ ಇರುವುದಿಲ್ಲ.
ಮಧ್ಯರಾತ್ರಿ ಸಂಭ್ರಮಕ್ಕಾಗಿ ವಿಶೇಷ ಸಡಿಲಿಕೆ ಇದ್ದರೂ, ಅದರ ಮಿತಿಯನ್ನು ಮೀರಿ ಕಾರ್ಯನಿರ್ವಹಿಸಿದರೆ ಕಾನೂನು ಕ್ರಮ ಅನಿವಾರ್ಯ.
ಜೊತೆಗೆ, CCTV ಕ್ಯಾಮರಾಗಳು ಕಡ್ಡಾಯವಾಗಿದ್ದು, ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಪ್ರಾಥಮಿಕವಾಗಿ ಗಮನಿಸಬೇಕಾಗಿದೆ.
ಪಬ್ ಹಾಗೂ ಬಾರ್‌ಗಳ ಹೊರಾಂಗಣದಲ್ಲೂ ಹೆಚ್ಚುವರಿ ಪ್ಯಾಟ್ರೋಲ್ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಇನ್ನು ನ್ಯೂ ಇಯರ್ ಸಮಯದಲ್ಲಿ ಡ್ರಗ್ಸ್ (Drugs) ದುರುಪಯೋಗ ಹೆಚ್ಚಾಗುತ್ತದೆ ಎಂಬ ಅನುಭವದ ಆಧಾರದ ಮೇಲೆ ಪೊಲೀಸರು ಈ ಬಾರಿ ಬಹಳ ಗಟ್ಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಡ್ರಗ್ ಪೆಡ್ಲರ್‌ಗಳನ್ನು ಪತ್ತೆಹಚ್ಚಲು ‘ಕನ್ಸೂಮರ್ ಟು ಪೆಡ್ಲರ್’ (Consumer to Peddler) ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ.
ನಗರದ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ನೇರ ಡ್ರಗ್ ಕನ್‍ಸಂಪ್ಷನ್ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ.
ಅನುಮಾನಾಸ್ಪದ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ತಕ್ಷಣ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಕೂಡ ಸಿದ್ಧವಾಗಿದೆ.
ಈ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಎಸಿಪಿ ಹಂತದ ಅಧಿಕಾರಿಗಳನ್ನು ವಿಶೇಷವಾಗಿ ನಿಯೋಜಿಸಲಾಗಿದೆ.
ಜೊತೆಗೆ, ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಮೇಲೆ ಪರಿಶೀಲನೆ ಮಾಡಿದ ನಂತರ 302 ಮಂದಿ ಅಕ್ರಮ ವಲಸಿಗರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ.
ಈ ಸಲದ ನ್ಯೂ ಇಯರ್ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಪ್ರಮುಖ ಗುರಿ.
ಒಂದು ತಿಂಗಳ ಮುಂಚೆಯೇ ಬಾಂಬ್ ನಿಷ್ಕ್ರಿಯ ದಳಕ್ಕೆ ವಿಶೇಷ ತರಬೇತಿ ನೀಡಲಾಗಿದೆ.
ಪ್ರಮುಖ ಜಂಕ್ಷನ್‌ಗಳಲ್ಲಿ (Junction) , ಪಾರ್ಟಿ ವಲಯಗಳಲ್ಲಿ, ವಾಣಿಜ್ಯ ಪ್ರದೇಶಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಹೆಚ್ಚುವರಿ ಕಾವಲು ಪಡೆ ನಿಯೋಜನೆ ಮಾಡಲಾಗುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಮಟ್ಟದ ಜನಸಂದಣಿ ನಿರೀಕ್ಷಿಸಲಾಗಿರುವುದರಿಂದ, ಟ್ರಾಫಿಕ್ (Traffic) ನಿಯಂತ್ರಣಕ್ಕೂ ವಿಶೇಷ ಕ್ರಮಗಳನ್ನೂ ರೂಪಿಸಲಾಗಿದೆ.
ಈ ಬಾರಿ “ಸುರಕ್ಷಿತ ನ್ಯೂ ಇಯರ್ – ಸಂತೋಷದ ನ್ಯೂ ಇಯರ್” ಎಂಬುದೇ ಪೊಲೀಸರಿಂದ ನಾಗರಿಕರಿಗೆ ನೀಡಿರುವ ಸಂದೇಶವಾಗಿದೆ.
ಇದನ್ನು ಓದಿ : ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ 2025 ಮಂಡನೆ: ಬಾಡಿಗೆದಾರರು, ಮಾಲೀಕರು ಇಬ್ಬರಿಗೂ ನಿಯಮಗಳು ಅನ್ವಯ