Bengaluru: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನವು ನಿನ್ನೆ (ಮೇ 10) ಅದ್ಧೂರಿಯಾಗಿ ನಡೆದಿದ್ದು, ಇವಿಎಂನಲ್ಲಿ (EVM) 2,615 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮೇ 13 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಬೆಂಗಳೂರಿನ (Bangalore) 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅಡಿಯಲ್ಲಿ (strong rooms in Bangalore.) ಬರುವ ಮತದಾನದ ವಿವಿಪ್ಯಾಟ್ ಗಳಿಗೆ ನಾಲ್ಕು ಭದ್ರತಾ ಕೊಠಡಿಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್ ಗಳಿಗೆ 4 ಸ್ಟ್ರಾಂಗ್ ರೂಮ್ಗಳನ್ನು ರಚನೆ ಮಾಡಲಾಗಿದೆ. ಹಾಗಾದರೆ ಎಲ್ಲೆಲ್ಲಿವೆ ಈ ಸ್ಟ್ರಾಂಗ್ ರೂಮ್(Strong Room) ? ಇಲ್ಲಿದೆ ವಿವರ :
1.ಬೆಂಗಳೂರಿನ ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು(Mount Carmel College) : ಈ ಕಾಲೇಜಿನಲ್ಲಿ ಬೆಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರಗಳಾದ ಕೆ ಆರ್ ಪುರ,
ಮಹಾಲಕ್ಷ್ಮಿ ಲೇಔಟ್(Mahalakshmi Layout), ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ ಮತ್ತು ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್ಗಳನ್ನು ಸಂಗ್ರಹಿಸಲಾಗಿದೆ.
2.ಬಸವನಗುಡಿಯ ಬಿಎಂಎಸ್ ಕಾಲೇಜು : ಈ ಕಾಲೇಜಿನಲ್ಲಿ RR ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ವಿಧಾನಸಭಾ (strong rooms in Bangalore.) ಕ್ಷೇತ್ರಗಳ ವಿವಿ ಪ್ಯಾಟ್ಗಳನ್ನು ಸಂಗ್ರಹಿಸಲಾಗಿದೆ
3.ಜಯನಗರದ ಎಸ್‌ಎಸ್‌ಎಂ ಆರ್‌ವಿ ಕಾಲೇಜು : ಜಯನಗರದಲ್ಲಿರುವ SSMRV ಕಾಲೇಜ್ನಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಾದ ಗೋವಿಂದರಾಜನಗರ,
ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಮ್ ಲೇಔಟ್(BTM Layout), ಜಯನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್ಗಳು ಭದ್ರಾವಾಗಿದೆ.

4.ವಿಠ್ಠಲ್ ಮಲ್ಯ (Vithal Mallya) ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜು (Saint Joseph College) : ಈ ಕಾಲೇಜಿನಲ್ಲಿ ಯಲಹಂಕ, ಬ್ಯಾಟರಾಯನಪುರ,
ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್ ಗಳನ್ನು ಸಂಗ್ರಹಿಸಲಾಗಿದೆ.
ಭದ್ರತೆಯನ್ನು ಸ್ಥಳೀಯ ಪೊಲೀಸರು ಮತ್ತು ಬಿಎಸ್‌ಎಫ್ ಸಿಬ್ಬಂದಿ ನಿರ್ವಹಿಸುತ್ತಿದ್ದು, ಪ್ರತಿ ಸುರಕ್ಷಿತ ಕೊಠಡಿ ಬಳಿ 100ಕ್ಕೂ ಹೆಚ್ಚು ಪೊಲೀಸ್ (Police) ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಒಬ್ಬ ಡಿಸಿಪಿ, 5 ಎಸಿಪಿಗಳು, 10 ಇನ್ಸ್‌ಪೆಕ್ಟರ್‌ಗಳು ಮತ್ತು 100 ಪೊಲೀಸ್ ಅಧಿಕಾರಿಗಳನ್ನು ಸೇರಿದಂತೆ ಕೆಎಸ್ಆರ್ಪಿ ತುಕಡಿ ಯನ್ನು ಕೂಡ ಭದ್ರತಾ ಕೊಠಡಿಗಳ ಬಳಿ ನಿಯೋಜಿಸಲಾಗಿದೆ.
ಕರ್ನಾಟಕ ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ಈಗ ವಿವಿಧ ಸ್ಟ್ರಾಂಗ್ ರೂಮ್ಗಳಲ್ಲಿ (Strong Room) ಭದ್ರವಾಗಿದೆ. ಮೇ 13ರಂದು ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂಬುದನ್ನು ಈಗ ಕಾದು ನೋಡಬೇಕಿದೆ
ರಶ್ಮಿತಾ ಅನೀಶ್