ರಷ್ಯಾ(Russia) ನಡೆಸುತ್ತಿರುವ ಆಕ್ರಮಣ ದಾಳಿಗೆ ಉಕ್ರೇನ್(Ukraine) ಸಂಪೂರ್ಣ ತತ್ತರಿಸಿ ಹೋಗಿದೆ! ಈ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಕರ್ನಾಟಕ(Karnataka) ರಾಜ್ಯದ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರು ಯುದ್ಧದ ದಾಳಿಗೆ ಬಲಿಯಾದರು. ಸದ್ಯ ಕಳೆದ ಒಂದು ವಾರಗಳಿಂದ ನವೀನ್ ಪೋಷಕರು ಸೇರಿದಂತೆ ರಾಜ್ಯ ಸರ್ಕಾರಕ್ಕೆ ಜನರು ನವೀನ್ ಮೃತದೇಹ ಕರುನಾಡಿಗೆ ತರಲು ವಿನಂತಿಸಿದೆ. ಆದರೆ, ಸದ್ಯ ರಷ್ಯಾ ಮತ್ತು ಉಕ್ರೇನ್ ಯುದ್ಧ ಘನಘೋರವಾಗುತ್ತಿರುವ ಕಾರಣ, ಯಾವುದೇ ಕಾರಣಕ್ಕೂ ನಾವು ಮಧ್ಯೆ ಪ್ರವೇಶಿಸಿ ನವೀನ್ ಮೃತದೇಹವನ್ನು ಕರ್ನಾಟಕಕ್ಕೆ ತರುವುದು ಕಷ್ಟಕರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

ಯುದ್ಧ ಭೀತಿಗೆ ಉಕ್ರೇನ್ ತತ್ತರಿಸಿ ಜೊತೆಗೆ ಈ ಸಮಯದಲ್ಲಿ ಉಕ್ರೇನ್ ನಿಂದ ಕರ್ನಾಟಕಕ್ಕೆ ನವೀನ್ ಮೃತದೇಹ ಹಸ್ತಾಂತರಿಸುವುದು ಕಷ್ಟಸಾಧ್ಯ ಎಂದು ತಿಳಿಸಲಾಗಿದೆ! ಈ ಬಗ್ಗೆ ಮೃತ ವೈದ್ಯಕೀಯ ವಿದ್ಯಾರ್ಥಿ ನವೀನ್ ಪೋಷಕರು ನಮ್ಮ ಮಗನ ಮೃತದೇಹ ನಮಗೆ ಹಸ್ತಾಂತರಿಸಿ ಎಂದು ಸಿಎಂಗೆ ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬರು ಕೂಡ ಈ ಬಗ್ಗೆ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನವೀನ್ ಮೃತದೇಹ ತರುವ ವಿಚಾರವಾಗಿ ಕೇಂದ್ರ ಸಚಿವ ಜೈಶಂಕರ್ ಅವರೊಟ್ಟಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.