ಜಪಾನಿನ(Japan) ವಿದ್ಯಾರ್ಥಿಗಳು(Students) ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದು, ಸ್ಪರ್ಧಿಗಳಿಗೆ ಕುಡಿಯಲು ಜ್ಯೂಸ್ ತಂದಿಡಲಾಗಿತ್ತು.

ಆದ್ರೆ, ಜ್ಯೂಸ್ ಬಾಟಲಿಯೊಳಗೆ ಸ್ಯಾನಿಟೈಸರ್(Sanitizer) ಮಿಶ್ರಣ ಮಾಡಿ ಇಡಲಾಗಿದೆ. ಇದನ್ನು ಅರಿಯದ ವಿದ್ಯಾರ್ಥಿಗಳು ಸೇವಿಸಿ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಓಟದ ಸಮಯದಲ್ಲಿ ಶಾಲಾ ಕ್ರೀಡಾಪಟುಗಳು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಸೇವಿಸಿದ ಮಿಶ್ರಣದ ಹಿಂದಿರುವ ಬಲವಾದ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಯಾನಿಟೈಸರ್ ಸೇವಿಸಿದ ಬೆನ್ನಲ್ಲೇ ಮೂವರು ಅಥ್ಲೀಟ್‌ಗಳು ಅಸ್ವಸ್ಥಗೊಂಡು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಬ್ಬ ಅಥ್ಲೀಟ್ ಓಟದ ಮಧ್ಯೆ ಕುಸಿದು ಬಿದ್ದರೆ, ಮತ್ತೊಬ್ಬರು ವಾಂತಿ ಮಾಡಿಕೊಂಡಿದ್ದಾರೆ. ಆದ್ರೆ, ಮತ್ತಿಬ್ಬರು ಅದನ್ನು ಕುಡಿದ ಕೂಡಲೇ ಉಗುಳಿದರು ಎಂದು ಎಎಫ್‌ಪಿ ವರದಿ ಮಾಡಿದೆ. ಒಟ್ಟು ಮೂವರು ಅಥ್ಲೀಟ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯ ಜಪಾನ್‌ನ ಯಮನಾಶಿ ಪ್ರಾಂತ್ಯದಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ಬಾಲಕಿಯರ 5,000 ಮೀಟರ್ ಓಟದ ಆಯೋಜಕರ ಗುಂಪಿನವರು ತಪ್ಪಾಗಿ ಸ್ಯಾನಿಟೈಸರ್ ಅನ್ನು ಜ್ಯೂಸ್ ಬಾಟಲಿಯೊಳಗೆ ಸುರಿದು ಜ್ಯೂಸ್ ನೀಡುವ ಜಾಗದಲ್ಲಿ ಇರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಯಮನಾಶಿಯ ಪ್ರೌಢಶಾಲಾ ಕ್ರೀಡಾ ಒಕ್ಕೂಟವು ರಟ್ಟಿನ ಪೆಟ್ಟಿಗೆಯಲ್ಲಿ ಕುಡಿಯುವ ನೀರನ್ನು ಹೊಂದಿರುವ ಪ್ಲಾಸ್ಟಿಕ್ ಬಾಟಲಿಯಲ್ಲಿ ಸ್ಯಾನಿಟೈಸರ್ ಸಂಗ್ರಹಿಸಿ ಇಡಲಾಗಿದೆ ಎಂದು ಹೇಳಿದ್ದಾರೆ. ಮೂರನೇ ವ್ಯಕ್ತಿಯ ತನಿಖೆ ನಡೆಯಲಿದೆ ಎಂದು ಯಮನಾಶಿ ಗವರ್ನರ್ ಕೊಟಾರೊ ನಾಗಸಾಕಿ ಹೇಳಿದ್ದು, ಪ್ರಿಫೆಕ್ಚರ್ ಪರವಾಗಿ, ನಾನು ಕ್ರೀಡಾಪಟು ಮತ್ತು ಅವರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ.