Job News : ಪದವಿ(Graduation) ಪಾಸಾದವರಿಗೆ ಇದೊಂದು ಭರ್ಜರಿ ಗುಡ್ನ್ಯೂಸ್. ಸಬ್ಇನ್ಸ್ಪೆಕ್ಟರ್ (Sub Inspector jobs opening) ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರಿ ಹುದ್ದೆಗಳನ್ನು
ಭರ್ತಿ ಮಾಡುವ ಸಿಬ್ಬಂದಿ ನೇಮಕಾತಿ ಆಯೋಗವು ನೋಟಿಫಿಕೇಶನ್ (Notification)ಬಿಡುಗಡೆ ಮಾಡಿದೆ. ಮುಖ್ಯವಾಗಿ ದೆಹಲಿ (Delhi) ಪೊಲೀಸ್ ಪಡೆ ಮತ್ತು ಕೇಂದ್ರ ಸಶಸ್ತ್ರ ಪಡೆಗಳಲ್ಲಿ
ಈ ಹುದ್ದೆಗಳನ್ನು ನೇಮಕ (Sub Inspector jobs opening) ಮಾಡಲಿದೆ.
ಒಟ್ಟು 1876 ಎಸ್ಐ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದ್ದು ಅದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಎಷ್ಟು ಹುದ್ದೆಗಳಿವೆ,ಯಾವ ಪಡೆಗಳಲ್ಲಿ ಎಷ್ಟು ಹುದ್ದೆಗಳ ನೇಮಕಾತಿ, ಪ್ರಮುಖ ದಿನಾಂಕಗಳು,
ಅರ್ಹತೆಯ ಪೂರ್ಣ ವಿವರಗಳು, ಅರ್ಜಿ ಶುಲ್ಕ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ. ಅರ್ಜಿ ಸಲ್ಲಿಸುವ ಪೂರ್ಣ ವಿಧಾನ ಹಾಗೂ ಲಿಂಕ್ ಅನ್ನು ಇಲ್ಲಿಯೇ ಕೊಡಲಾಗಿದೆ .

ಎಸ್ಎಸ್ಸಿ ಎಸ್ಐ ಹುದ್ದೆಗಳಿಗೆ ಹೇಗೆ ಅರ್ಜಿ ಹಾಕುವುದು ?
- ಮೊದಲು ಎಸ್ಎಸ್ಸಿ ವೆಬ್ಸೈಟ್ https://ssc.nic.in/ ಗೆ ಭೇಟಿ ನೀಡಿ.
- ಇಲ್ಲಿ ಹೋಮ್ ಪೇಜ್ನಲ್ಲಿ ನಿಮಗೆ ‘New User? Register Now’ ಎಂಬ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಮತ್ತೊಂದು ವೆಬ್ಪೇಜ್ ಓಪನ್ ಆಗುತ್ತದೆ.
- ಇಲ್ಲಿ ಮೊದಲು ನಿಮ್ಮ ವೈಯಕ್ತಿಕ ಮತ್ತು ಪ್ರಾಥಮಿಕ ಮಾಹಿತಿಗಳನ್ನು ನೀಡಿ ನಂತರ ರಿಜಿಸ್ಟ್ರೇಷನ್ ಪಡೆಯಿರಿ.
- ನಂತರ ನಿಮ್ಮ ಯೂಸರ್ನೇಮ್, ಪಾಸ್ವರ್ಡ್ ಕ್ರಿಯೇಟ್ ಆಗುತ್ತದೆ.ನಂತರ ವೆಬ್ ಮುಖಪುಟದಲ್ಲಿ ಅಂದರೆ ಇಲ್ಲಿ https://ssc.nic.in/ ‘Apply’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಆಗ ಮತ್ತೊಂದು ವೆಬ್ಪೇಜ್ ತೆರೆಯುತ್ತದೆ.
- ಪ್ರಸ್ತುತ ತೆರೆದ ವೆಬ್ಪೇಜ್ನಲ್ಲಿ ನಿಮಗೆ ‘CAPF’ ಆಯ್ಕೆ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಿ.
- ನಂತರ ಇಲ್ಲಿ ‘ Sub-Inspector in Delhi Police, CAPFs and Sub-Inspector in CISF Examination, 2023 Apply’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಪೂರ್ಣಗೊಳಿಸಿ.
- ಆನ್ಲೈನ್ ಮೂಲಕವೇ ಅಪ್ಲಿಕೇಶನ್ ಶುಲ್ಕವನ್ನು ಪಾವತಿ ಮಾಡಬಹುದು.
- ನಿಮ್ಮ ಮುಂದಿನ ರೆಫರೆನ್ಸ್ಗಾಗಿ ಅರ್ಜಿ ಪೂರ್ಣಗೊಂಡ ನಂತರ, ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಈ ಕೆಳಗಿನಂತೆಯೂ ನೀಡಲಾಗಿದೆ.
https://ssc.nic.in/Portal/Apply
ಸ್ಟಾಫ್ ಸೆಲೆಕ್ಷನ್ ಕಮಿಷನ್ ಈ ಹುದ್ದೆಗಳ ನೇಮಕಾತಿಗೆ ಯಾವ ರೀತಿಯ ಪರೀಕ್ಷೆ ನಡೆಸಲಿದೆ ಎಂದು ತಿಳಿಯಲು ಸಹ ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.
ಅರ್ಜಿ ಸ್ವೀಕಾರ ಆರಂಭ ದಿನಾಂಕ: 22-07-2023
ಅರ್ಜಿ ಸ್ವೀಕಾರ ಕೊನೆ ದಿನಾಂಕ: 15-08-2023 ರ ರಾತ್ರಿ 11 ಗಂಟೆವರೆಗೆ.
ಅರ್ಜಿ ತಿದ್ದುಪಡಿಗೆ ಕೊನೆ ದಿನಾಂಕ : ಆಗಸ್ಟ್ 16 ರಿಂದ 17, 2023
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ದಿನಾಂಕ : ಅಕ್ಟೋಬರ್, 2023
ರಶ್ಮಿತಾ ಅನೀಶ್