ಬೆಂಗಳೂರು ಸೆ 2 : ಕನ್ನಡದ ಖ್ಯಾತ ನಟರಾದ ಕಿಚ್ಚ ಸುದೀಫ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಗಣ್ಯರಿಂದ ಶುಭಾಷಯಗಳ ಮಹಾಪೂರವೇ ಹರಿಯಿತು. ಜನಪ್ರಿಯ ನಟನಿಗೆ ಅಭಿಮಾನಿಗಳು, ರಾಜಕಾರಣಿಗಳು ಹಾಗೂ ಕ್ರೀಡಾಪಟುಗಳು ಸೇರಿ ಸಾಕಷ್ಟು ಜನ ಶುಭಾಷಯವನ್ನು ಕೋರಿದ್ದಾರೆ.
ಒಲಿಂಪಿಕ್ ಜಾವಲಿನ್ ಥ್ರೋ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಕೂಡ ಕಿಚ್ಚ ಸುದೀಪ್ ಅವರ ಜನ್ಮದಿನಕ್ಕೆ ಶುಭಾಷಯ ಕೋರಿದ್ದು ವಿಶೇಷವಾಗಿತ್ತು. ನೀರಜ್ ಚೋಪ್ರಾ ಅವರು ವಿಡಿಯೋ ಮುಖೇನ ಕಿಚ್ಚ ಸುದೀಪ್ ಅವರಿಗೆ ಶುಭಾಷಯ ಕೋರಿ ಜೊತೆಗೆ ಅವರ ಮುಂದಿನ ಚಿತ್ರ ವಿಕ್ರಾಂತ್ ರೋಣಕ್ಕೂ ಶುಭಾಷಯ ತಿಳಿಸಿದ್ದಾರೆ. ಇದರ ಜೊತೆಗೆ ಸಾಕಷ್ಟು ರಾಜಕಾರಣಿಗಳು ಕೂಡ ಶುಭಾಷಯ ತಿಳಿಸಿದ್ದು,
ಸಚಿವ ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿ ”ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ತಮಗೆ ಆಯುರಾರೋಗ್ಯ ಹಾಗೂ ಸಮೃದ್ಧಿ ಕರುಣಿಸಲಿ” ಎಂದು ಹಾರೈಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟ್ವೀಟ್ ಮಾಡಿ ”ಸಿನಿಮಾ ರಂಗದ ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ದೀರ್ಘ ಆಯಸ್ಸು, ಆರೋಗ್ಯ ನೀಡಲಿ. ಇನ್ನೂ ಹೆಚ್ಚಿನ ಕಲಾತ್ಮಕ ಚಿತ್ರಗಳ ಮೂಲಕ ಜನರ ಮನ ರಂಜಿಸಲಿ ಎಂದು ಹಾರೈಸುತ್ತೇನೆ” ಎಂದರು
ಬಿ.ಶ್ರೀರಾಮುಲು ಅವರು ಟ್ವಿಟ್ ಮುಖೇನ
”ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಬಹುಭಾಷಾ ತಾರೆ ಆತ್ಮೀಯರಾದ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ಮುಂಬರುವ ಚಿತ್ರಗಳಿಗೆ ಹಾಗೂ ಸಮಾಜಕ್ಕೆ ತಮ್ಮಿಂದ ಹೆಚ್ಚು ಸೇವೆ ನೀಡಲು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ” ಎಂದು ಶುಭಾಶಯ ಕೋರಿದ್ದಾರೆ
ಗಾಯಕ ರಾಜೇಶ್ ಕೃಷ್ಣನ್ ಅವರು ಟ್ವೀಟ್ ಮುಖಾಂತರ
”ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮೆಲ್ಲ ಕನಸುಗಳು ಈಡೇರಲಿ ಎಂದು ಹಾರೈಸಿದ್ದಾರೆ.
”ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು” ಎಂದು ದೊಡ್ಡ ಗಣೇಶ್ ಹಾರೈಸಿದ್ದಾರೆ
”ಹ್ಯಾಪಿ ಬರ್ತಡೇ ಕಿಚ್ಚ ಸುದೀಪ್” ಎಂದು ನಟ ರಮೇಶ್ ಅರವಿಂದ್ ಹಾರೈಸಿದ್ದಾರೆ.