- ಹಿಂದಿ ಕಲಿಯುವುದು ತಪ್ಪಲ್ಲ, ತ್ರಿಭಾಷಾ ಸೂತ್ರ ಓಕೆ ಎಂದ ಸಂಸದೆ ಸುಧಾ ಮೂರ್ತಿ
- ನಂಗೇ ಏಳೆಂಟು ಭಾಷೆ ಬರುತ್ತೆ, ಮಕ್ಕಳು ಏಳೋ ಎಂಟೋ ಭಾಷೆ ಕಲಿಯಬಲ್ಲರು
- ತಮಿಳುನಾಡು, ತೆಲಂಗಾಣ, ಕರ್ನಾಟಕ ಸರ್ಕಾರಗಳಿಂದ ವಿರೋಧ .
Bengaluru: ರಾಷ್ಟ್ರೀಯ ಶಿಕ್ಷಣ ನೀತಿ (NEP) ಪ್ರಕಾರ ತ್ರಿಭಾಷಾ ಸೂತ್ರ ವಿವಾದಕ್ಕೀಡಾಗಿದ್ದು, ತಮಿಳುನಾಡು (Tamil Nadu) , ತೆಲಂಗಾಣ (Telangana) , ಕರ್ನಾಟಕ ಸರ್ಕಾರಗಳಿಂದ (Karnataka Government) ವಿರೋಧ ವ್ಯಕ್ತವಾಗಿದೆ. ತ್ರಿಭಾಷಾ ಸೂತ್ರದ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಇದು ಸಂಸತ್ತಿನ ಅಧಿವೇಶನದಲ್ಲೂ ಪ್ರಸ್ತಾಪವಾಗಿದೆ. ರಾಜ್ಯಸಭಾ ಸದಸ್ಯೆ (Member of Rajya Sabha) ಸುಧಾ ಮೂರ್ತಿ ರಾಷ್ಟ್ರೀಯ ಶಿಕ್ಷಣ (National education) ನೀತಿಯ ತ್ರಿಭಾಷಾ ಸೂತ್ರದ ಪರ ಬೆಂಬಲಕ್ಕೆ ನಿಂತಿದ್ದು (Standing in support) , ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ದೇಶದಲ್ಲಿ ತ್ರಿಭಾಷಾ ಸೂತ್ರ (Trilingual formula) ಬೇಡ ಎನ್ನುವ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆದಿವೆ. ಈ ರೀತಿ ಇರುವಾಗಲೇ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ (Rajya Sabha MP Sudha Murthy) ಅವರು ತ್ರಿಭಾಷಾ ಸೂತ್ರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಯಾರು ಬೇಕಾದರೂ ಬಹು ಭಾಷೆಗಳನ್ನು (Multiple languages) ಕಲಿಯಬಹುದು. ನನಗೆ 7ರಿಂದ 8 ಭಾಷೆಗಳು ಬರುತ್ತವೆ. ಹೀಗಾಗಿ ನಾನು ಕಲಿಯುವುದನ್ನು ಆನಂದಿಸುತ್ತೇನೆ. ಬಹುಭಾಷೆಗಳಿಂದ ವಿದ್ಯಾರ್ಥಿಗಳು ಸಹ ಸಾಕಷ್ಟು ಕಲಿಯುವುದಕ್ಕೆ ಅವಕಾಶಗಳು ಇವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ (ANI news agency) ಜತೆಗೆ ಮಾತನಾಡುತ್ತ ಹೇಳಿದ್ದಾರೆ.

ಆದರೆ ಕರ್ನಾಟಕವೂ ಸೇರಿದಂತೆ (Including Karnataka) ದಕ್ಷಿಣ ಭಾರತದಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಹಿಂದಿ ಹೇರಿಕೆಯನ್ನು ನಿಲ್ಲಿಸುವಂತೆ ತಮಿಳುನಾಡು (Tamil Nadu) ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು (South Indian states) ಆಗ್ರಹಿಸಿವೆ. ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ (Central Government) ಈ ವಿಚಾರದಲ್ಲಿ ಉಗ್ರ ಹೋರಾಟವನ್ನೇ ಮಾಡಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಮಾತ್ರ ತ್ರಿಭಾಷಾ ಸೂತ್ರ (Trilingual formula) ಇಲ್ಲ. ತ್ರಿಭಾಷಾ ಸೂತ್ರ ಎಂದರೆ ಶಾಲಾ ಮಕ್ಕಳು ವಿದ್ಯಾಭ್ಯಾಸದಲ್ಲಿ ಕನ್ನಡ, ಇಂಗ್ಲಿಷ್ (English, Kannada) ಹಾಗೂ ಹಿಂದಿಯನ್ನು (Hindi) ಕಲಿಯಬೇಕು. ಆದರೆ ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ದ್ವಿಭಾಷಾ ನೀತಿ (Bilingual policy) ಅನುಸರಿಸಲಾಗುತ್ತಿದೆ ಅಂದರೆ ಇಲ್ಲಿನ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಇದೀಗ ಸಂಸದೆ ಸುಧಾ ಮೂರ್ತಿ ಅವರು ತ್ರಿಭಾಷಾ ಸೂತ್ರ ಇರಲಿ ಎಂದು ಹೇಳಿದ್ದಾರೆ.