- ಸರ್ಕಾರದ ನಿರ್ಧರಕ್ಕೆ ಒಮ್ಮತ ಸೂಚಿಸದ ಕಬ್ಬು ಬೆಳೆಗಾರರು
- ಸಮಿರವಾಡಿ ಕಾರ್ಖಾನೆ ಬಳಿ ಗಲಭೆ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಕಿಗೆ ಆಹುತಿ
- ಜಮಖಂಡಿ–ಮುಧೋಳ ರೈತರ ನಡುವೆ ಮುಂದುವರೆದ ಒಳ ಜಗಳ
Bagalkot: ಬಾಗಲಕೋಟೆಯ ಮುಧೋಳ–ಸಮಿರವಾಡಿ ಪ್ರದೇಶಗಳಲ್ಲಿ ಕಬ್ಬಿನ ದರ ಹೆಚ್ಚಳದ (Sugarcane tractor on fire) ಬೇಡಿಕೆ ಹಿನ್ನೆಲೆ ರೈತರ ಆಕ್ರೋಶ ಮುಗಿಲು ಮುಟ್ಟಿದೆ .
ಸರ್ಕಾರದ ನಿರ್ಧಾರಗಳು ತಮ್ಮ ಹಿತಕ್ಕೆ ವಿರೋಧವಾಗಿವೆ ಹಾಗೂ ಕೇಳಿದಂತೆ ಬೆಲೆ ನಿಗದಿಯಾಗಿಲ್ಲವೆಂಬ ಕಾರಣಕ್ಕೆ ರೈತರು ಕಾವೇರಿದರೆ, ಪರಿಸ್ಥಿತಿ ಕೆಲ ಗಂಟೆಗಳಲ್ಲೇ ನಿಯಂತ್ರಣ ತಪ್ಪುವ ಸ್ಥಿತಿ ನಿರ್ಮಾಣವಾಯಿತು.

ಸೈದಾಪುರ, ಸಮಿರವಾಡಿ ಹಾಗೂ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಗಳ ಸುತ್ತಮುತ್ತ (Sugarcane tractor on fire) ಸಾವಿರಾರು ರೈತರು ಜಮಾಯಿಸಿ ತಮ್ಮ ಬೇಡಿಕೆಗಳ ಪರ ಕೂಗಾಟ, ಘೋಷಣೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ರೈತರ ನಡುವೆ ಮಾತಿಗೆ ಮಾತು ಬೆಳೆದು ಜಗಳ–ತಂಟೆಗಳು ಉಂಟಾಗಿ, ಘಟನೆಗಳು ಅತಿರೇಕಕ್ಕೆ ತಿರುಗಿದವು.
ಪ್ರತಿಭಟನೆಯ ತೀವ್ರತೆಯ ಕ್ಷಣದಲ್ಲಿ ಸಮಿರವಾಡಿ ಗೋದಾವರಿ ಕಾರ್ಖಾನೆ ಬಳಿ ಎರಡು ಗುಂಪಿನ ರೈತರು ಮುಖಾಮುಖಿ ಅದಾಗ ಪರಿಸ್ಥಿತಿ ನಿಯಂತ್ರಣ ತಪ್ಪುವಂತಾಯಿತು.
ಇಂದರಿಂದಾಗಿ ಬೈಕ್‌ಗಳ ಸುಡಿಸುವಿಕೆ, ಕಲ್ಲು ತೂರಾಟ, ಬ್ಯಾರಿಕೇಡ್ ಒಡೆದು ಒಳನುಗ್ಗಲು ಪ್ರಯತ್ನ ನಡೆದು ಪ್ರತಿಭಟನೆಯ ವಿಕೋಪಕ್ಕೆ ತಿರುಗಿತು.
ಪೊಲೀಸರ ಹಸ್ತಕ್ಷೇಪ ಇದ್ದರೂ ಆಕ್ರೋಶಿತ ಜನಸಮೂಹವನ್ನು ನಿಯಂತ್ರಿಸುವುದು ಕಷ್ಟವಾಯಿತು.
ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಸುಟ್ಟು ಭಸ್ಮವಾಗಿದೆ .
ಕಲ್ಲು ತೂರಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಂತೆ ಜನರಲ್ಲಿ ಆತಂಕ, ಕಾರ್ಖಾನೆಗಳ ಬಳಿ ಗಲಭೆ ತೀವ್ರಗೊಂಡಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಸ್ಥಿತಿಯನ್ನು ತಿಳಿದುಕೊಂಡರು. ಉಸ್ತುವಾರಿ ಸಚಿವರೊಂದಿಗೆ ಸಲಹೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ.
ಇದೇ ವೇಳೆ, ಜಮಖಂಡಿ ತಲೂಕಿನ ಹಿಪ್ಪರಗಿ ಹಾಗೂ ಸಾಯಿ ಪ್ರಿಯಾ ಕಾರ್ಖಾನೆ ಪ್ರದೇಶಗಳಲ್ಲಿ ರೈತರು 2 ಗುಂಪಾಗಿದ್ದರು. ಯಾರಾದರೂ ಹೊರಗಿನ ಗುಂಪು ಬಂದು ಹಾನಿ ಮಾಡಬಾರದೆಂದು ಕಟ್ಟಿಗೆ–ಕೋಲು ಹಿಡಿದು ಕಾರ್ಖಾನೆಗಳ ಬಳಿ ಕಾವಲು ಕಾಯುತ್ತಿದ್ದ ದೃಶ್ಯಗಳು ಕಂಡುಬಂದವು.
ಸರ್ಕಾರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ, ನಮ್ಮ ಕಾರ್ಖಾನೆಗೆ ಬರುತ್ತೀರಾ ಎಂದರೆ ಸುಮ್ಮನಿರೋದು ಇಲ್ಲ ಎಂಬ ಎಚ್ಚರಿಕೆ ಜಮಖಂಡಿ ರೈತರಿಂದ ಮುಧೋಳ ರೈತರಿಗೆ ಕೇಳಿಬಂದಿದೆ.
ಇದರಿಂದ ರೈತರ ಮಧ್ಯೆ ಕ್ಷಣಕ್ಷಣಕ್ಕೂ ಉದ್ವಿಗ್ನತೆ ಹೆಚ್ಚಿದೆ.ಸಮೀರವಾಡಿ ಸಕ್ಕರೆ ಕಾರ್ಖಾನೆ ಯಾವಾಗಲೂ ಗಡಿ ವಿವಾದ, ರೈತರ ಸಂಘರ್ಷಗಳ ಹಿನ್ನೆಲೆ ಹೊಂದಿರುವುದು ಈ ಬಾರಿ ಮತ್ತಷ್ಟು ಜಟಿಲ ವಾತಾವರಣ ನಿರ್ಮಾಣವಾಗಿದೆ.
ರೈತರು 3,500 ರೂ. ಆಗಿರಬೇಕು ಎಂದು ಪಟ್ಟು ಹಿಡಿದಿರುವುದರಿಂದ ಸಮಸ್ಯೆ ಇನ್ನೂ ಬಗೆಹರಿಯದೆ ಉಳಿದಿದೆ.
ಬಾಗಲಕೋಟೆ–ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ತಡೆದು, ಕಾರ್ಖಾನೆಗಳಿಗೆ ಒತ್ತಡ ಹಾಕುವ ಚಟುವಟಿಕೆಗಳು ಮುಂದುವರೆದಿದೆ.
ಇದನ್ನು ಓದಿ : ಸುಪ್ರೀಂ ಕೋರ್ಟ್‌ನಲ್ಲಿ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ: ತಮಿಳುನಾಡಿಗೆ ಮುಖಭಂಗ