• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸಿನಿಮಾದವರ ಸೂಸೈಡ್‌ ಸಹವಾಸಕ್ಕೆ ಕಾರಣಗಳೇನು…?

Kiran K by Kiran K
in ಪ್ರಮುಖ ಸುದ್ದಿ, ಮನರಂಜನೆ
ಸಿನಿಮಾದವರ ಸೂಸೈಡ್‌ ಸಹವಾಸಕ್ಕೆ ಕಾರಣಗಳೇನು…?
0
SHARES
0
VIEWS
Share on FacebookShare on Twitter

ಕೋವಿಡ್ 19 ಕಾರಣದಿಂದ ಮಾಡಲಾದ ಲಾಕ್ಡೌನ್ ಎಲ್ಲರ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಯಿತು. ರೋಗಿಗಳು ಚಿಕಿತ್ಸೆ ಇರದೆ ಸತ್ತದ್ದು ಒಂದೆಡೆಯಾದರೆ, ಬಡವರು ಹೊಟ್ಟೆಗಿಲ್ಲದೆ ಸತ್ತರು. ಉದ್ಯಮಿಗಳು ನಷ್ಟಬಾಧೆಯಿಂದ ಸತ್ತರು. ಆದರೆ ಸಿನಿಮಾ ಮಂದಿ ಕೊರೊನಾಗಿಂತಲೂ ಹೆಚ್ಚಾಗಿ ಡಿಪ್ರೆಶನ್ ಹೆಸರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿನಿಮಾ ವಿಭಾಗದ ಮಂದಿ ಹೀಗೆ ಸರದಿಯಾಗಿ ಆತ್ಮಹತ್ಯೆಯತ್ತ ಚಿತ್ತ ಮಾಡಲು ಕಾರಣವೇನಿರಬಹುದು? ಇದೇ ವಿಚಾರವನ್ನು ಚಂದನವನದ ದಿಗ್ಗಜರ ಜತೆ ಮಾತನಾಡಿದಾಗ ಅವರು `ವಿಜಯ ಟಾಕೀಸ್’ ಗೆ ನೀಡಿದ ವಿಶೇಷ ಪ್ರತಿಕ್ರಿಯೆಗಳು ಇಲ್ಲಿವೆ.


ಶಶಿಕರ ಪಾತೂರು

`ಕುಟುಂಬದ ಬಗ್ಗೆ ಯೋಚಿಸಿ; ಕೆಟ್ಟ ನಿರ್ಧಾರ ಕೈ ಬಿಡಿ’

ಸಿನಿಮಾ ಎಂದಷ್ಟೇ ಅಲ್ಲ; ಎಲ್ಲ ಕಡೆ ಸಂಸ್ಥೆಗಳು ಮುಚ್ಚಿ ಹೋಗುತ್ತಿದೆ. ಮಿಲಿಯನ್ಸ್ ಕೆಲಸ ಕಳೆದುಕೊಂಡಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲ; ವಿದೇಶಗಳಲ್ಲಿಯೂ ನಡೆದಿದೆ. ಅವರಿಗೂ ಹೀಗೆಯೇ ಆಗಿದೆ. ಯುಎಸ್ ನಲ್ಲಿ, ಯು.ಕೆಯಲ್ಲಿ ಇರುವವರಿಗೂ ನಷ್ಟವಾಗಿದೆ. ಆದರೆ ಏನೂ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಇದು. ಇಲ್ಲಿಂದ ನಾವು ಚೇತರಿಸಬೇಕಾಗಿದೆ. ಆದರೆ ಅದಕ್ಕೆ ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ಧೈರ್ಯ ಒಂದು ಕಳೆದುಕೊಳ್ಳಬಾರದು ಎಂದೇ ನಾನು ಹೇಳುವುದು. ಏನೇ ಇದ್ದರೂ ಇದನ್ನು ಒಂದು ಚಾಲೆಂಜಾಗಿ ನೋಡೋಣ ಎನ್ನುವ ಮನಸ್ಥಿತಿ ನಮ್ಮಲ್ಲಿರಬೇಕು. ಒಳ್ಳೆಯ ದಿನಗಳು ಬರಲಿವೆ ಎನ್ನುವ ಆಶಯ ನಮಗೆ ಇಲ್ಲದೆ ಹೋದರೆ ನಿಜಕ್ಕೂ ಕಷ್ಟ. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಆತ್ಮಹತ್ಯೆ ಮಾಡುವವರು ಒಂದನ್ನು ಯೋಚಿಸಲೇಬೇಕು, ಅವರು ಬಿಟ್ಟು ಹೋಗುವ ಕುಟುಂಬ ಇದೆಯಲ್ಲ? ಅವರ ಇಡೀ ಬದುಕು ಎಷ್ಟೊಂದು ನರಕ ಆಗುತ್ತದೆ ಎನ್ನುವುದನ್ನು ಯೋಚಿಸಿಯಾದರೂ ಅಂಥ ನಿರ್ಧಾರಗಳಿಂದ ಹೊರಗೆ ಬರಬೇಕು.
                                                                                                                                                                                                ಸುಮಲತಾ ಅಂಬರೀಷ್  (ಚಿತ್ರನಟಿ, ಸಂಸದೆ)

 ಜೀವನದಲ್ಲಿ ಎಂದಿಗೂ ಭರವಸೆ ಕಳೆದುಕೊಳ್ಳಬಾರದು

ಭೂಮಿಯಲ್ಲಿ ಹುಟ್ಟಿದ ಮೇಲೆ ಎಲ್ಲವನ್ನು ಫೇಸ್ ಮಾಡಬೇಕು. ಬದುಕು ಅಂದರೆ ಅದೇನೆ. ಇಲ್ಲಿ ಯಾರಿಗೂ ಆರಾಮ ಇಲ್ಲ, ವಿರಾಮ ಇಲ್ಲ. ಹೋರಾಟದಲ್ಲೇ ಖುಷಿ ಕಾಣಬೇಕು. ಆಗಲೇ ಸಣ್ಣಪುಟ್ಟ ಖುಷಿ ಕೂಡ ದೊಡ್ಡದಾಗಿ ಕಂಡು, ಬದುಕು ಚೆನ್ನಾಗಿದೆ ಅನಿಸಲು ಶುರುವಾಗುತ್ತದೆ. ಇನ್ನು ಚಿತ್ರರಂಗದ ಕಷ್ಟದ ಬಗ್ಗೆ ಎಲ್ಲರಿಗೂ ಗೊತ್ತು. ಪರಸ್ಪರ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಮಾನವೀಯ ನೆಲೆಯಲ್ಲಿ ಸಹಾಯ ನೀಡುವುದು ಮುಖ್ಯ. ಆಗಲೇ ಬದುಕಿನಲ್ಲಿ ಹೊಸ ಹೊಸ ಭರವಸೆಗಳು ಮೂಡಲು ಸಾಧ್ಯ. ಕೆಲವೊಮ್ಮೆ ಕಷ್ಟಗಳು ಸಾಲು ಸಾಲಾಗಿ ಬರುತ್ತವೆ. ನಾವು ಅವುಗಳನ್ನು ದಾಟಿ ಹೋಗಲು ತೀರ್ಮಾನ ಮಾಡಬೇಕು. ಕಷ್ಟ ಬರುತ್ತಿದೆ ಎಂದು ನಾವು ನಮ್ಮ ಪ್ರಯತ್ನ ಬಿಟ್ಟು ನಿಂತರೆ ಅವುಗಳೇ ನಮ್ಮನ್ನು ಓವರ್‌ಟೇಕ್ ಮಾಡಿ ಬಿಡುತ್ತವೆ. ಅದು ಆಗಲು ಬಿಡಬಾರದು. ಚಿತ್ರರಂಗದ ವಿಚಾರದಲ್ಲಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಸಮಸ್ಯೆ ಕಂಡವರಿಗೆ ನಾನು ಸೇರಿದಂತೆ ಚಿತ್ರರಂಗದಿಂದ ಹಲವಾರು ಮಂದಿ ವೈಯಕ್ತಿಕವಾಗಿ ಒಂದಷ್ಟು ಸಹಾಯ ಮಾಡಿದ್ದೇವೆ. ಒಳ್ಳೆಯ ದಿನಗಳು ಮುಂದೆಯೂ ಬರಲಿವೆ. ಬರುವುದಿಲ್ಲ ಎನ್ನಲು ನಮಗೆ ಯಾರಿಗೂ ಅದರ ಬಗ್ಗೆ ಗೊತ್ತಿಲ್ಲ. ಇದೀಗ ರಾಜ್ಯದ ಮುಖ್ಯಮಂತ್ರಿಯವರ ಬಳಿಗೂ ಹೋಗಿ ನಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲಿದ್ದೇವೆ. ಅವರು ಕೂಡ ಖಂಡಿತವಾಗಿ ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ಇದೆ. ಭರವಸೆಯೇ ಜೀವನ. ಅದನ್ನು ಕಳೆದುಕೊಳ್ಳಬಾರದು.

                                                                                                                                                                                           ಡಾ. ಶಿವರಾಜ್ ಕುಮಾರ್ (ಹಿರಿಯ ನಟರು)

ಬದುಕಿನಲ್ಲಿ ಆತ್ಮಕತೆ ಬರೆಯಬೇಕೇ ಹೊರತು ಆತ್ಮಹತ್ಯೆ ಮಾಡಬಾರದು

ನನಗೆ ಈಗ ಎಪ್ಪತ್ತು ವರ್ಷ. ನೂರಾರು ಸಿನಿಮಾಗಳಲ್ಲಿ ನಟಿಸಿದ್ದೀನಿ. ಇದೇ ಪಾತ್ರ ಬೇಕು ಎಂದು ಯಾವತ್ತೂ ಮುನಿಸಿಕೊಂಡಿಲ್ಲ. ಸಿಕ್ಕ ಪಾತ್ರವನ್ನು ದೇವರ ಆಶೀರ್ವಾದ ಎನ್ನುವಂತೆ ಮಾಡಿದ್ದೀನಿ. ಈಗಲೂ ಆರೋಗ್ಯವಾಗಿದ್ದೀನಿ. ಹಾಗಂತ ಅವಕಾಶಗಳು ಹಿಂದಿನ ಹಾಗೆ ಬರುತ್ತಿಲ್ಲ. ಹೊಸದಾಗಿ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ನಾನು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ಚೆನ್ನಾಗಿ ತಿನ್ನಬೇಕು, ಚೆನ್ನಾಗಿ ದುಡಿಯಬೇಕು, ಒಳ್ಳೆಯದನ್ನೇ ನೆನೆಯಬೇಕು. ಅಷ್ಟಿದ್ದರೆ ಮುಕ್ಕಾಲು ಪಾಲು ಚಿಂತೆಗಳು ದೂರವಾದ ಹಾಗೆ. ನಾನಂತೂ ಮುಂಚಿನಿಂದಲೂ ಓದುವ ಹವ್ಯಾಸ ಇರಿಸಿಕೊಂಡಿದ್ದೇನೆ. ನನ್ನ ಮನೆಯಲ್ಲಿ ಒಂದು ಗ್ರಂಥಾಲಯವೇ ಇದೆ. ಓದಿನಲ್ಲಿ ತೊಡಗಿಸಿಕೊಂಡರೆ ಇನ್ನಷ್ಟು ಕ್ರಿಯಾಶೀಲವಾಗುವ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ನಾನಂತೂ ಆತ್ಮಕತೆ ಬರೆಯುವ ಹುಮ್ಮಸ್ಸಿನಲ್ಲಿದ್ದೇನೆ. ಎಲ್ಲರೂ ಅಷ್ಟೇ; ಆತ್ಮಕತೆ ಬರೆಯಬಹುದಾದ ಬದುಕನ್ನು ರೂಪಿಸಿಕೊಳ್ಳಬೇಕೇ ಹೊರತು, ಆತ್ಮಹತ್ಯೆಯ ಬಗ್ಗೆ ಯೋಚಿಸಬಾರದು.

 ದೊಡ್ಡಣ್ಣ (ಚಿತ್ರನಟ)

ಡಾ. ರಾಜ್ ಕುಮಾರ್ ಅವರ ಆದರ್ಶ ಪಾಲಿಸಿದರೆ ಖಂಡಿತವಾಗಿ ನೆಮ್ಮದಿ ಸಿಗಬಹುದು

ಎಲ್ಲ ವೃತ್ತಿರಂಗದಲ್ಲಿಯೂ ತಮ್ಮ ಫೇವರಿಟ್ ಮಂದಿಯನ್ನು ಪ್ರೋತ್ಸಾಹಿಸುವ ಮತ್ತು ಆ ಕಾರಣಕ್ಕಾಗಿ ಕೆಲವೊಮ್ಮೆ ಇತರರನ್ನು ತುಳಿಯುವ ಕೆಲಸಗಳು ನಡೆಯುತ್ತವೆ. ಸಿನಿಮಾರಂಗದಲ್ಲಂತೂ ಈ ಒತ್ತಡ ಇನ್ನಷ್ಟು ಹೆಚ್ಚು! ಯಾಕೆಂದರೆ ನಿಮ್ಮನ್ನು ಸಾವಿರಾರು ಮಂದಿ ನೋಡುತ್ತಿರುತ್ತಾರೆ. ಉದಾಹರಣೆಗೆ ಒಂದು ಕಚೇರಿಯೊಳಗೆ ನಡೆಯುವ ತಾರತಮ್ಯ ಅದು ಕಚೇರಿಯಿಂದ ಆಚೆಗೆ ಗೊತ್ತಿರುವುದಿಲ್ಲ. ಆದರೆ ಸಿನಿಮಾ ಹಾಗಲ್ಲ; ಒಬ್ಬನ ವೃತ್ತಿ ಬದುಕಿನಲ್ಲಾಗುವ ಏರಿಳಿತಗಳು ಪ್ರತಿಯೊಬ್ಬರಿಗೂ ತಿಳಿಯುತ್ತಿರುತ್ತವೆ. ಬಹುಶಃ ಇದನ್ನೇ ಗಂಭೀರವಾಗಿ ತೆಗೆದುಕೊಂಡಾಗ ಕಲಾವಿದರಲ್ಲಿ ಒತ್ತಡ ಹೆಚ್ಚಾಗಬಹುದು. ಕನಸುಗಳನ್ನು ಕಟ್ಟಬೇಕು ನಿಜ. ಆದರೆ ಯಾವಾಗಲೂ ಅದಕ್ಕೊಂದು ಬ್ಯಾಕಪ್ ಪ್ಲ್ಯಾನ್ ಎನ್ನುವುದನ್ನು ಮಾಡಿಕೊಂಡಿರಬೇಕು ಅಲ್ವಾ? `ಹಾಗಾದರೆ ಹೀಗೆ ಮಾಡಬಲ್ಲೆ’ ಎನ್ನುವ ಪರ್ಯಾಯ ಯೋಜನೆಗಳು ತಯಾರಾಗಿರಬೇಕು. ತನ್ನ ಕನಸಿನ ವಿಚಾರದಲ್ಲಿ ತಾನು ಎಷ್ಟರ ಮಟ್ಟಿಗೆ ಕಾಂಪ್ರಮೈಸ್ ಆಗಬಲ್ಲೆ? ಎನ್ನುವುದನ್ನು ಅರಿತಿರಬೇಕು. ತಮ್ಮ ಕನಸುಗಳನ್ನು ಕುಟುಂಬದ ಜತೆ ಹಂಚಿರಬೇಕು. ಅದರ ಸೋಲು ಗೆಲುವಿನ ವೇಳೆ ಕುಟುಂಬ ಕೂಡ ಅವರಿಗೆ ಬೆಂಬಲವಾಗಿರಬೇಕು.

ಸೆಲೆಬ್ರಿಟಿ ಆಗಿದ್ದೀನಿ ಅಂದ ಕೂಡಲೇ ನಮಗೇ ನಾವು ಒತ್ತಡಗಳನ್ನು ಹಾಕಿಕೊಳ್ಳಬಾರದು. ಉದಾಹರಣೆಗೆ ತುಂಬ ಮಂದಿಗೆ ತಾವು ಒಮ್ಮೆ ಪರದೆಯ ಮೇಲೆ ಸ್ಟಾರ್ ಆಗಿದ್ದೇವೆ ಎಂದೊಡನೆ, ಬ್ರ್ಯಾಂಡೆಡ್ ಬಟ್ಟೆಗಳನ್ನೇ ಧರಿಸಬೇಕು; ಮರ್ಸಿಡಿಸ್ ಕಾರಲ್ಲೇ ಬಂದು ಇಳಿಯಬೇಕು ಎನ್ನುವ ಮನಸ್ಥಿತಿ ಬಂದು ಬಿಡುತ್ತದೆ. ಆದರೆ ನೀವು ನಮ್ಮದೇ ನೆಲದ ಅತಿದೊಡ್ಡ ಸ್ಟಾರ್ ರಾಜ್ ಕುಮಾರ್ ಅವರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಪ್ರಪಂಚದಲ್ಲೇ ಅವರಷ್ಟು ದೊಡ್ಡ ಸ್ಟಾರ್ ಇರಲಿಲ್ಲ. ಆದರೆ ಅವರು ಯಾವತ್ತೂ ನಿಜ ಜೀವನದಲ್ಲಿ ಬ್ರ್ಯಾಂಡ್‌ ವಸ್ತುಗಳ ಹಿಂದೆ ಹೋಗಲಿಲ್ಲ. ಸರಳವಾಗಿ ಬಿಳಿ ಅಂಗಿ, ಪಂಚೆ ತೊಟ್ಟು ತಾವೇ ಬ್ರ್ಯಾಂಡ್ ಆದರು. ಅವರು ತಮ್ಮಿಂದ ಸಾಧ್ಯವಿದ್ದರೂ ಯಾವುದೇ ದುಬಾರಿ ವಸ್ತುಗಳನ್ನು ಕೊಳ್ಳುವ ಮೂಲಕ ತಮ್ಮ ಸ್ಟಾರ್ ತನವನ್ನು ತೋರಿಸಲಿಲ್ಲ. ಎಲ್ಲರಿಗೂ ರಾಜ್ ಕುಮಾರ್ ಆಗಲು ಸಾಧ್ಯವಿಲ್ಲ ನಿಜ. ಆದರೆ ತಮಗೇನು ಅಗತ್ಯ ಅದನ್ನು ಮಾತ್ರ ಹೊಂದುವ ಅವರ ಕ್ಲ್ಯಾರಿಟಿ ಎಲ್ಲರಿಗೂ ಅಗತ್ಯ. ನಾವು ಒಂದು ವಿಚಾರದಲ್ಲಿ ಸಂಪೂರ್ಣವಾಗಿ ಸೋತರೆ, ಅದನ್ನು ಬಿಟ್ಟು ಇನ್ನೊಂದು ಕಡೆ ಅದಕ್ಕಿಂತ ಚೆನ್ನಾಗಿ ಬದುಕಬಲ್ಲ ಛಾತಿ ನಮ್ಮಲ್ಲಿರಬೇಕು.

ಮಾತಲ್ಲಿ ಹೇಳುವುದು ಸುಲಭ ಎಂದು ನೀವು ಅಂದುಕೊಂಡಿರಬಹುದು. ಆದರೆ ಹಾಗಲ್ಲ; ಇಂಥದೊಂದು ಫೀಲ್ಡಿಗೆ ಎಂಟ್ರಿ ಕೊಡುವಾಗ ಹತ್ತರಲ್ಲಿ ಒಂಬತ್ತು ಜನ ಕಲ್ಲೇ ಎಸೆಯುತ್ತಾರೆ. ಆ ಎಸೆದಿರುವ ಕಲ್ಲನ್ನು ಇಟ್ಕೊಂಡು ನಮ್ಮ ಸಮಾಧಿ ಮಾಡ್ಕೊಳ್ಳೋದಲ್ಲ; ಮುಂದೆ ಬೆಳೆಯೋದಕ್ಕೆ ಬುನಾದಿ ಮಾಡ್ಕೋಬೇಕು ಎನ್ನುವುದು ನಮಗೆ ಗೊತ್ತಿರಬೇಕು.

                                                                                                                                                                                                                          ಸುಧಾರಾಣಿ, ಚಿತ್ರನಟಿ

ಸ್ವಲ್ಪ ತಾಳ್ಮೆ ತೋರಿಸಿ; ಎಲ್ಲವೂ ಸರಿ ಹೋಗುತ್ತದೆ

“ಸಮಸ್ಯೆ ಎಲ್ಲರಂಗಕ್ಕೂ ಬಂದಿದೆ. ಅದರಲ್ಲಿಯೂ ಸಿನಿಮಾ ರಂಗದವರಿಗೆ ಇದು ತುಂಬ ಅನಿರೀಕ್ಷಿತ. ನಾನಂತೂ ಚಿತ್ರರಂಗಕ್ಕೆ ಇಂಥದೊಂದು ದಿನ ಬರುವುದಾಗಿ ಕನಸು ಮನಸಲ್ಲಿಯೂ  ಅಂದುಕೊಂಡಿರಲಿಲ್ಲ. ಆದರೂ ಹೊಂದಿಕೊಂಡಿದ್ದೇನೆ. ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಿನಿಮಾವನ್ನೇ ನಂಬಿಕೊಂಡಿರುವವರು. ಈ ಮೂರು ತಿಂಗಳಲ್ಲಿಅದೆಷ್ಟೋ ಯೋಜನೆಗಳು ಕಾರ್ಯಗತವಾಗಬೇಕಿತ್ತು. ಇತಿಹಾಸ ನೋಡಿದರೆ ಯಾವತ್ತೂ ಸಿನಿಮಾ ಸತ್ತಿಲ್ಲ. ಹಾಗಾಗಿಯೂ ಈ ಬಾರಿ ಮತ್ತೆ ಚಿತ್ರರಂಗ ಪುನಶ್ಚೇತನ ಪಡೆಯಲಿದೆ. ಆದರೆ ಈ ಅನಿಶ್ಚಿತತೆ ಎಷ್ಟು ದಿನಗಳ ಬಳಿಕ ಮುಂದುವರಿಯುತ್ತದೆ ಎಂದು ನಮಗೆ ಈಗಲೇ ಹೇಳಲು ಸಾಧ್ಯವಿಲ್ಲ. ಅದುವರೆಗೆ ಒಟಿಟಿಯಲ್ಲಿ ಸಿನಿಮಾ ನೋಡಬಹುದು. ಹಾಗಂತ ಥಿಯೇಟರ್ ಅನುಭವ ಯಾವತ್ತಿಗೂ ಒಟಿಟಿ ನೀಡಲು ಸಾಧ್ಯವಿಲ್ಲ. ನನಗಂತೂ ಥಿಯೇಟರ್ ಅನುಭವ ಬೇಕೇಬೇಕು. ಥಿಯೇಟರಲ್ಲಿ ಬರಬೇಕಿದ್ದ ನಮ್ಮ ಸಿನಿಮಾ ಒಟಿಟಿಯಲ್ಲಿ ಬಂತು ಎನ್ನುವ ಕಾರಣಕ್ಕೆ ನಿರ್ದೇಶಕರು, ಕಲಾವಿದರು ಕುಗ್ಗಬೇಕಿಲ್ಲ. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸುವುದಷ್ಟೇ ನಮ್ಮ ಕೆಲಸ. ನಮ್ಮ ನೋವನ್ನು ನಮಗೆ ನಿಯಂತ್ರಿಸಲು ಕಷ್ಟ ಅನಿಸುತ್ತಿದೆಯಾ? ಆತ್ಮೀಯರಲ್ಲಿ ಹಂಚಿಕೊಳ್ಳಿ. ಯಾರು ನಿಜವಾದ ಆತ್ಮೀಯರು ಎನ್ನುವುದು ಈ ಸಂದರ್ಭದಲ್ಲಿ ಚೆನ್ನಾಗಿ ಅರ್ಥವಾಗಿರುತ್ತದೆ. ನಾವು ಅವರೊಂದಿಗೆ ಜೊತೆ ಜೊತೆಯಾಗಿರಬೇಕು. ಎಲ್ಲವನ್ನೂ ಹಂಚಿಕೊಳ್ಳಬೇಕು.

                                                                                                                                                                                              ವಿಜಯಲಕ್ಷ್ಮೀ ಸಿಂಗ್  ನಟಿ, ನಿರ್ದೇಶಕಿ

ಸದಾ ಏನಾದರೊಂದು ಒಳ್ಳೆಯ ಕೆಲಸ ಮಾಡುತ್ತಿರಿ; ಅದೇ ಆತ್ಮತೃಪ್ತಿ ನೀಡುತ್ತದೆ.

ಇಷ್ಟು ದಿನಗಳ ಲಾಕ್ಡೌನ್ ನಮಗೆಲ್ಲ ಮೊದಲ ಅನುಭವ.  ಇಲ್ಲಿ ಆರ್ಥಿಕ ನಷ್ಟವನ್ನಾದರೂ ಒಂದು ಹಂತಕ್ಕೆ ಸಹಿಸುವವರು ಇರಬಹುದು. ಆದರೆ ಸಿನಿಮಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಕೂಡ ಆತ್ಮಹತ್ಯೆಗೈದ, ಆತ್ಮಹತ್ಯೆಗೆ ಪ್ರಯತ್ನಿಸಿದ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟು ಇವೆ. ದುರಭ್ಯಾಸಗಳು ಮಾತ್ರವಲ್ಲ, ಒಳ್ಳೆಯ ಅಭ್ಯಾಸಗಳೇ ನಮ್ಮನ್ನು ಎಷ್ಟೋ ಬಾರಿ ಕೆಟ್ಟದಾಗಿ ಕಾಡುತ್ತವೆ. ಅದರಲ್ಲಿಯೂ ಸಿನಿಮಾದಂಥ ಜನಪ್ರಿಯ ರಂಗದಲ್ಲಿರುವ ಒಬ್ಬ ಕಲಾವಿದ ಅಥವಾ ನಟಿಗೆ ಸರಿಯಾಗಿ ಜಿಮ್ ಅಥವಾ ಸ್ವಿಮ್ ಮಾಡಲು ಅವಕಾಶ ಸಿಗದಿರುವುದು ಕೂಡ ಡಿಪ್ರೆಶನ್ ಗೆ ಕಾರಣವಾಗಬಹುದು! ಜನ ನಮ್ಮನ್ನು ಇಷ್ಟಪಡುತ್ತಿಲ್ಲ, ಫೇಸ್ಬುಕ್ ಪೋಸ್ಟ್ ಗೆ ಲೈಕ್ ಕಡಿಮೆ ಬಿದ್ದಿವೆ ಮೊದಲಾದವುಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಹಾಗಂತ ಅವರ ಸಮಸ್ಯೆ ಚಿಕ್ಕದಾಗಿದ್ದರೂ, ಅವರು ಅನುಭವಿಸುವ ಮಾನಸಿಕ ಕಷ್ಟ ಕಡಿಮೆಯದ್ದೇನೂ ಆಗಿರುವುದಿಲ್ಲ. ಇಲ್ಲವಾದರೆ ಜೀವನ ಕೊನೆಗೊಳಿಸಬೇಕು ಎನ್ನುವ ನಿರ್ಧಾರವನ್ನುಯಾರು ಕೂಡ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡುವವರನ್ನೆಲ್ಲ ಹೇಡಿಗಳು ಎಂದು ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿದವರು ಪ್ರಚಾರ ಪ್ರಿಯರು ಎಂದು ಜಡ್ಜ್ ಮಾಡುವುದು ಖಂಡಿತಾ ತಪ್ಪು. ಸೂಸೈಡ್ ಎನ್ನುವುದು ಕಾನೂನು ಪ್ರಕಾರ ಅಪರಾಧ ನಿಜ. ಆದರೆ ಅಂಥ ಸನ್ನಿವೇಶವನ್ನು ಸೃಷ್ಟಿಸುವ ನಾವು ಕೂಡ ಅಪರಾಧಿಗಳಾಗಬೇಕಾಗುತ್ತದೆ. ನಾವು ಮತ್ತೊಬ್ಬರ ಬಗ್ಗೆ ನೈಜ ಕಾಳಜಿ ತೋರಿಸದಿದ್ದರೂ ಪರವಾಗಿಲ್ಲ, ಆದರೆ ಕೇರ್‌ಲೆಸ್ ಮನಸ್ಥಿತಿ ಇಟ್ಟುಕೊಳ್ಳಬಾರದು. ಅದೇ ಸಂದರ್ಭದಲ್ಲಿ ನಮಗೇನೇ ಡಿಪ್ರೆಶನ್ ರೀತಿ ಅನಿಸುವ ಹಾಗಿದ್ದರೆ ಹೆಚ್ಚು ಹೆಚ್ಚು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಲಾಕ್ಡೌನ್ ಸಂದರ್ಭಗಳಲ್ಲಿ ಕೆಲಸ ಇರಲಿಲ್ಲ ನಿಜ. ಆದರೆ ನಮ್ಮ ಬಟ್ಟೆಗಳನ್ನು ನಾವೇ ಮಡಚಿ ಇರಿಸುವುದು ಕೂಡ ನಮ್ಮನ್ನು ಎಂಗೇಜ್ ಆಗಿ ಇರಿಸುತ್ತದೆ. ಸುಮ್ಮನೆ ಕುಳಿತಷ್ಟು ಕೆಟ್ಟ ಯೋಚನೆಗಳು ಕಾಡುವುದು ಸಹಜ. ಎಲ್ಲರ ಜತೆ ಬೆರೆಯೋಣ. ಕೆಟ್ಟದ್ದನ್ನು ಮರೆಯೋಣ.

                                                                                                                                                                                                ರಮೇಶ್ ಅರವಿಂದ್ ಚಿತ್ರನಟ, ನಿರ್ದೇಶಕ

ಖಿನ್ನತೆಗೆ ಕೂಡ ನೆಗಡಿಯಂಥ ಸಣ್ಣ ಖಾಯಿಲೆ

ಇತರರ ಮಾನಸಿಕ ಖಿನ್ನತೆಗೆ ಕಾರಣ ಹೇಳಬಲ್ಲಷ್ಟು, ಅದನ್ನು ನಿವಾರಿಸಲು ಸಲಹೆ ನೀಡುವಷ್ಟು ದೊಡ್ಡವಳು ನಾನಲ್ಲ. ಆದರೆ ನನಗೆ ಅನಿಸಿದ್ದನ್ನು ಹೇಳುತ್ತೀನಿ ಕೇಳಿ. ನೆಗಡಿ, ಜ್ವರದಂತೆ ಮಾನಸಿಕ ಖಿನ್ನತೆ ಕೂಡ ಪ್ರತಿಯೊಬ್ಬರಿಗೂ ಜೀವನದ ಒಂದು ಹಂತದಲ್ಲಿ ಬಂದಿರುತ್ತದೆ. ಹೇಗೆ ನೆಗಡಿ, ಜ್ವರಕ್ಕೆ ಔಷಧಿ ಇದೆಯೋ ಡಿಪ್ರೆಷನ್‌ಗೂ ಔಷಧಿ ಇದೆ. ಅದು ಯಾರಿಗೂ ಬಾರದ ವಿಚಾರಗಳೇನಲ್ಲ. ಮಾನಸಿಕ ಖಿನ್ನತೆ ಇದೆ ಎಂದಾಕ್ಷಣ ಅದಕ್ಕೆ ಬೇರೆ ಹೆಸರು ಕೊಡಬೇಕಿಲ್ಲ. ಅಂಥ ಸಂದರ್ಭ ನಾವು ಮಾಡಿಕೊಟ್ಟಾಗ ಖಿನ್ನತೆಗೊಳಗಾದವರಿಗೆ ನಮ್ಮೊಂದಿಗೆ ಹೇಳಿಕೊಳ್ಳುವ ಅವಕಾಶ ಸಿಗುತ್ತದೆ. ಚಿಕಿತ್ಸೆ ಪಡೆದುಕೊಂಡರೂ ಅದು ದೊಡ್ಡ ವಿಚಾರವೇನಲ್ಲ. ಬಾಲಿವುಡ್ಡಲ್ಲಿ ದೀಪಿಕಾನಂಥ ನಾಯಕಿಯೇ ಡಿಪ್ರೆಶನ್ ಆಗಿದ್ದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದನ್ನು ಹೇಳಿಕೊಂಡಿದ್ದಾರೆ.

                                                                                                                                                                -ಶ್ರುತಿ ಕೃಷ್ಣ ನಟಿ, ಭಾ.ಜ.ಪ ಮಹಿಳಾ ವಿಭಾಗದ ಮುಖ್ಯ ಕಾರ್ಯದರ್ಶಿ

Related News

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

March 20, 2023
ಮದುವೆ ಬರೀ ಲೈಂಗಿಕ ಸಂತೋಷದ ಸಾಧನವಲ್ಲ, ಅದು ಒಂದು ಸಂಸ್ಕಾರ: ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ
ಪ್ರಮುಖ ಸುದ್ದಿ

ಮದುವೆ ಬರೀ ಲೈಂಗಿಕ ಸಂತೋಷದ ಸಾಧನವಲ್ಲ, ಅದು ಒಂದು ಸಂಸ್ಕಾರ: ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ

March 15, 2023
ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?
ಪ್ರಮುಖ ಸುದ್ದಿ

ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?

March 15, 2023
ಮತ್ತೆ ಜಾಬ್‌ ಶಾಕ್‌ ! ಫೇಸ್‌ಬುಕ್‌ ಒಡೆತನದ ಮೆಟಾದಿಂದ 10,000 ಸಾವಿರ ಉದ್ಯೋಗಿಗಳ ವಜಾಕ್ಕೆ ತಯಾರಿ
ಪ್ರಮುಖ ಸುದ್ದಿ

ಮತ್ತೆ ಜಾಬ್‌ ಶಾಕ್‌ ! ಫೇಸ್‌ಬುಕ್‌ ಒಡೆತನದ ಮೆಟಾದಿಂದ 10,000 ಸಾವಿರ ಉದ್ಯೋಗಿಗಳ ವಜಾಕ್ಕೆ ತಯಾರಿ

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.