Mumbai : ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez) ಅವರಿಗೆ ಆರೋಪಿ ಸುಕೇಶ್ ಚಂದ್ರಶೇಖರ್(Sukesh Chandrashekhar) ನ್ಯಾಯಾಲಯದ ತನಿಖೆಯ ಮಧ್ಯೆಯೇ ಪ್ರೇಮಿಗಳ ದಿನದ (Sukesh’s Valentine’s wishes Jacqueline) ಶುಭಾಶಯಗಳನ್ನು ತಿಳಿಸಿದ್ದಾರೆ.
ಕೋಟ್ಯಂತರ ಹಣ ಹಗರಣ ಮತ್ತು ಉದ್ಯಮಿಯ ಪತ್ನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಚಂದ್ರಶೇಖರ್ ಅವರನ್ನು ಮಂಗಳವಾರ ಎಂಸಿಒಸಿಎಯ(MCOCA) ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ರಾಷ್ಟ್ರೀಯ ತನಿಖಾ ಸಂಸ್ಥೆ(NIA) ನ್ಯಾಯಾಲಯದಿಂದ ಹೊರ ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರೇಮಿಗಳ ದಿನಾಚರಣೆಯ(Valentin Day) ಶುಭಾಶಯಗಳನ್ನು ತಿಳಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ.
ಆಡಂಬರದ ಜೀವನ ಶೈಲಿಗಾಗಿ ಮಾಜಿ ಫೋರ್ಟಿಸ್ ಪ್ರವರ್ತಕರ ಪತ್ನಿಯಿಂದ 217 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪಿ ಸುಕೇಶ್ ಚಂದ್ರಶೇಖರ್ ಮಂಗಳವಾರ ನಟಿ
ಜಾಕ್ವೆಲಿನ್ ಫರ್ನಾಂಡಿಸ್ ಪ್ರೇಮಿಗಳ ದಿನದ ಶುಭಾಶಯ ಕೋರಿದ ಸಂಗತಿ ಇದೀಗ ಸಾಮಾಜಿಕ ಜಾಲತಾಣವನ್ನು ಸುತ್ತುವರಿದಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದುಕೊಂಡು ಹೋಗುವಾಗ ಸುಕೇಶ್‌ನ ಆಶಯದ ಬಗ್ಗೆ ತಿಳಿದುಬಂದಿದೆ.
ಇದನ್ನೂ ಓದಿ: ಆರ್‌ಸಿಬಿ ತಂಡಕ್ಕೆ ಬರುತ್ತಿದ್ದಂತೆ ‘ನಮಸ್ಕಾರ ಬೆಂಗಳೂರು’ ಎಂದು ಕೂಗಿದ ಸ್ಮೃತಿ ಮಂದಾನ
ನನ್ನ ಕಡೆಯಿಂದ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿ. ಅವರ ಬಗ್ಗೆ ಹೆಚ್ಚಿಗೆ ನಾನು ಏನೂ ಪ್ರತಿಕ್ರಿಯಿಸಲು ಬಯಸುವುದಿಲ್ಲ.
ನೀವು ಯಾರನ್ನಾದರೂ ಪ್ರೀತಿಸಿದಾಗ, ನೀವು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತೀರಿ ಅಲ್ಲವೇ? ಎಂದು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಸುಕೇಶ್ ಹೇಳಿದ್ದಾರೆ.
ಈ ಮಧ್ಯೆ ಬಾಲಿವುಡ್(Bollywood) ನಟಿ ನೋರಾ ಫತೇಹಿ(Nora Fatehi) ಅವರಿಗೂ ನೀವು ಹಣ ನೀಡಿದ್ದೀರಾ ಎಂದು ಸುಕೇಶ್ ಅವರನ್ನು ಪ್ರಶ್ನಿಸಿದಾಗ ಸುಕೇಶ್ ಉತ್ತರಿಸಿದ್ದು ಹೀಗೆ,
ನಾನು ಗೋಲ್ಡ್ ಡಿಗ್ಗರ್ಸ್‌ಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಕೋಟ್ಯಂತರ ಹಣ ವಸೂಲಿ ಮತ್ತು ಉದ್ಯಮಿಯ ಪತ್ನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಕೇಶ್ (Sukesh’s Valentine’s wishes Jacqueline) ಚಂದ್ರಶೇಖರ್ ಅನ್ನು ಮಂಗಳವಾರ MCOCA ನಲ್ಲಿರುವ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಪ್ರಕರಣದಲ್ಲಿ ಜಪ್ತಿ ಮಾಡಿರುವ ಅವರ ಆಸ್ತಿ ಹರಾಜು ವಿಚಾರವನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತು.
ಬುಧವಾರ ದೆಹಲಿ ನ್ಯಾಯಾಲಯವು ಮೂವರು ತಿಹಾರ್ ಜೈಲು ಅಧಿಕಾರಿಗಳನ್ನು ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇಡಿ)(ED) ಕಸ್ಟಡಿಗೆ ಕಳುಹಿಸಿದೆ.
ಸುಕೇಶ್ ಚಂದ್ರಶೇಖರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ಪ್ರಧಾನ ಕೇಂದ್ರ ತನಿಖಾ ಸಂಸ್ಥೆಯಾದ ಇಡಿ ಅಧಿಕಾರಿಗಳನ್ನು ಬಂಧಿಸಿದೆ.