Karwar : ಉತ್ತರಕನ್ನಡ ಜಿಲ್ಲೆಯ (Uttara Kannada distric) ಅಂಕೋಲಾ ತಾಲ್ಲೂಕಿನ ಪದ್ಮಶ್ರೀ ಪುರಸ್ಕೃತ ಜಾನಪದ ಕೋಗಿಲೆ, 82ರ ಹರೆಯದ ಸುಕ್ರಿ ಬೊಮ್ಮಗೌಡ (ಸುಕ್ರಜ್ಜಿ) (Sukri Bommagowda) ಇಂದು ಮತಗಟ್ಟೆಗೆ ವ್ಹೀಲ್ ಚೇರ್‌ನಲ್ಲೇ ಬಂದು ತಮ್ಮ ಹಕ್ಕು ಚಲಾಯಿಸಿದರು.
ಸುಕ್ರಿಜ್ಜಿ ಸೊಂಟದ ನೋವಿನಿಂದ ಬಳಲುತ್ತಿದ್ದಾರೆ, ಆದರೂ ನಡೆಯಲು ಕಷ್ಟವಾಗಿರುವ ಸಂದರ್ಭದಲ್ಲಿ ಸಹ ವೀಲ್ ಚೇರ್ ಮೂಲಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಂಕೋಲಾ ತಾಲ್ಲೂಕಿನಲ್ಲಿ ಬಡಗೇರಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸುಕ್ರಜ್ಜಿ ಮತದಾನ ಮಾಡಿದ್ದಾರೆ.
ಇಷ್ಟು ಇಳಿವಯಸ್ಸಿನಲ್ಲೂ ಅವರು ಮನೆಯಿಂದ ಮತದಾನ (Polling) ಮಾಡದೇ ಮತಗಟ್ಟೆಗೇ ತೆರಳಿ ಮತದಾನ ಮಾಡಿದರು ಈ ಮೂಲಕ ಪ್ರಜಾಪ್ರಭುತ್ವದ ಮಹತ್ವದ ಜವಾಬ್ದಾರಿಯ ಪ್ರಾಮುಖ್ಯತೆಯನ್ನ ಶುಕ್ರಜ್ಜಿಯವರು ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ : https://vijayatimes.com/karnataka-election-2023/
ಕಡ್ಡಾಯ ಮತದಾನಕ್ಕೆ ಕರೆ ನೀಡಿದ ಸುಕ್ರಜ್ಜಿ:
ಮತದಾನ ಮಾಡಿದ ನಂತರ ಮಧ್ಯಮಗಳ (Media) ಜೊತೆ ಮಾತನಾಡಿದ ಸುಕ್ರಜ್ಜಿ ಹಣದ ಆಮಿಷಕ್ಕೆ ಒಳಗಾಗದೇ ಎಲ್ಲರೂ ಜವಾಬ್ದಾರಿಯುತವಾಗಿ ಮತದಾನವನ್ನು ಮಾಡಿ, ಎಲ್ಲರೂ ಕೂಡ ಕಡ್ಡಾಯವಾಗಿ ಮತದಾನ ಮಾಡಬೇಕು. ಇಷ್ಟು ಹೋರಾಟದ ನಂತರವೂ ಹಾಲಕ್ಕಿ ಸಮುದಾಯವನ್ನ (Halakki community) ಎಸ್ಟಿ ಪಂಗಡಕ್ಕೆ ಸೇರಿಸಿಲ್ಲ,
ಮತದಾನ ಮಾಡುವ ಮೂಲಕ ಜನಪರ ಸರ್ಕಾರವನ್ನ ಆಯ್ಕೆ ಮಾಡಿದಲ್ಲಿ ಮಾತ್ರ ಜನರಿಗೆ ಅಗತ್ಯವಿರುವ ಕಾರ್ಯಗಳು ಕೈಗೊಳ್ಳಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ (Democracy) ಜನರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ, ಎಲ್ಲರೂ ಯೋಚಿಸಿ ಮತದಾನ ಮಾಡಿ ಎಂದು ಸುಕ್ರಜ್ಜಿ ಈ ಮೂಲಕ ಮನವಿ ಮಾಡಿಕೊಂಡರು.
ಇದನ್ನೂ ಓದಿ : https://vijayatimes.com/assembly-election/
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.54.92 ಮತದಾನ :
ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಂದ ಕೂಡಿದೆ, ಇಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.54.94,ರಷ್ಟು ಮತದಾನವಾಗಿತ್ತು.
- ರಶ್ಮಿತಾ ಅನೀಶ್