ಮಂಡ್ಯ, ಜು. 08: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆಯನ್ನ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ರು.
ಜಿಲ್ಲೆಯಲ್ಲಿ ನಡೆಯುತ್ತಿರೋ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕೋ ಸಲುವಾಗಿ ಖುದ್ದು ಫೀಲ್ಡ್ಗಿಳಿದ ಸುಮಲತಾ, ಗಣಿ ಪ್ರದೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಬಳಿಕ ಮಾತನಾಡಿದ ಅವ್ರು, ಅಕ್ರಮ ಗಣಿಗಾರಿಕೆ ನೋಡಿ ತಮಗಾದ ಶಾಕ್ ನನ್ನ ಜೀವನದಲ್ಲಿ ನೋಡಿಲ್ಲ. ಡಿಸಿ ಜಿಲ್ಲೆಯ ಸುಪ್ರಿಂ, ಸಂಸದೆಯಾಗಿ ನಾನು, ಎಸಿ, ತಹಶೀಲ್ದಾರ್ ಹೋದರೂ ಒಳ ಹೋಗದಂತೆ ಬದು ನಿರ್ಮಾಣ ಮಾಡಿದ್ದಾರೆ.
ಇಲ್ಲಿ ಕೆಲವರು ಗೂಂಡಾ ಸಾಮ್ರಾಜ್ಯ ಕಟ್ಕೊಂಡಿದಾರೆ. ಇಂಡಿಯಾ- ಪಾಕಿಸ್ಥಾನ ಬಾರ್ಡರ್ನಲ್ಲೂ ಈ ರೀತಿ ಬ್ಲಾಕೇಜ್ ನಿರ್ಮಿಸಿರೋದನ್ನ ನಾನು ನೋಡಿಲ್ಲ ಎಂದು ಕಿಡಿಕಾರಿದ್ರು.
ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಕ್ರಮ ಗಣಿಗಾರಿಕೆಯನ್ನ ಓಪನ್ ಎಕ್ಸ್ಪೋಸ್ ಮಾಡಿದ್ದೇನೆ. ಸ್ಥಳೀಯರ ಮಾಹಿತಿ, ಮನವಿ ಪ್ರಕಾರ ಖುದ್ದು ಪರಿಶೀಲನೆ ನಡೆಸಿದ್ದೇನೆ. ಸ್ಥಳೀಯರ ಸಮಸ್ಯೆ ನೋವು ಕೇಳಿ ಶೇಕ್ ಆದೆ, ಸ್ಪೋಟದಿಂದ ಬಿರುಕಿನಿಂದ ಗೋಡೆಗಳು ಒಡೆದಿವೆ.
ಅಕ್ರಮ ಗಣಿಗಾರಿಕೆಯಿಂದ ಆರೋಗ್ಯದಲ್ಲಿ ಏರುಪೇರು, ಹೃದಯಾಘಾತ, ಉಸಿರಾಟದ ಸಮಸ್ಯೆ ಆಗ್ತಿದೆ ಅಂತಾ ಗಣಿಗಾರಿಕೆಯಿಂದ ಆಗುತ್ತಿರೋ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ರು.
ಇದೇ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಮ್ಮನ್ನ ಸಿನಿಮಾದವ್ರು ಅಂತೀರಲ್ಲಾ, ರಾಜಕಾರಣದಲ್ಲಿ ನೀವ್ ಇವತ್ತು ಸಿನಿಮಾ ತೋರ್ಸಿದ್ದೀರಾ. ಜಿಲ್ಲೆಯಲ್ಲಿ ನಡೆಯುತ್ತಿರೋ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ರು.
ತಮ್ಮ ಕ್ಷೇತ್ರದಲ್ಲಿ ಇಷ್ಟೆಲ್ಲಾ ಅಕ್ರಮ ಗಣಿಕಾರಿಕೆ ಆಗ್ತಿದ್ರೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೀರಾ. ಹಂಗರಹಳ್ಳಿಯಲ್ಲಿ ಎಷ್ಟೋ ವರ್ಷದಿಂದ ಲೈಸೆನ್ಸ್ ಇಲ್ಲದೆ ಮೈನಿಂಗ್ ನಡೆಸುತ್ತಿದ್ದಾರೆ. ನಿತ್ಯ 500 ಲೋಡ್ ಕಲ್ಲು ದಿಮ್ಮಿಗಳನ್ನ ಸಾಗಾಣಿಕೆ ಮಾಡ್ತಿದ್ದಾರೆ. ಪ್ರಭಾವಿಗಳು ಇದಕ್ಕೆಲ್ಲಾ ಕುಮ್ಮಕ್ಕು ನೀಡ್ತಿದ್ದಾರೆ ಅಂತಾ ಕಿಡಿಕಾರಿದ್ರು.
ಮಾತಿಗೆ ಮುನ್ನ ನಮ್ಮನ್ನ ಪ್ರಶ್ನೆ ಮಾಡ್ತೀರಲ್ಲ, ನಾನು ಕೇಳ್ತೀನಿ ಇದೇನಾ ನಿಮ್ಮ ಕೊಡುಗೆ ರವಿಂದ್ರ ಅವರೆ ಅಂದು ಪ್ರಶ್ನಿಸಿದ್ರು. ಅಕ್ರಮ ಗಣಿಗಾರಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ, ಸರಿಯಾಗಿ ರಾಯಲ್ಟಿ, ಪೆನಾಲ್ಟಿ ವಸೂಲಿ ಮಾಡಿದ್ರೆ ಜಿಲ್ಲಾ ಖಜಾನೆಗೆ ಹಣ ಬರುತ್ತೆ.
ಆದ್ರೆ ಈಗ ಆ ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಜೇಬು ಸೇರುತ್ತಿದೆ? ಅಕ್ರಮ ಗಣಿಗಾರಿಕೆಗೆ ಯಾರ ಬೆಂಬಲ ಇದೆ?. ಹಂಗರಹಳ್ಳಿ ಕ್ವಾರೆ ನಿಮ್ಮದೇನ ಇದು, ನಿಮ್ಮವರಿಗೆ ಸೇರಿದ್ದ. ಜನರಿಗೆ ನೀವೆ ಉತ್ತರ ಕೊಡಬೇಕು ಎಂದ ಸುಮಲತಾ, ಇವತ್ತಿನ ಘಟನೆಗಳನ್ನ ನೋಡಿ ನೀವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ಒತ್ತಾಯಿಸಿದರು.