Mandya : ಮಂಡ್ಯದಲ್ಲಿ ಮುಗಿಯಿತಾ ಅಂಬರೀಷ್ (Ambarish) ಕುಟುಂಬ ರಾಜಕಾರಣ? ಮಂಡ್ಯದ ಜನತೆ ಅಂಬರೀಷ್ ಅವರ ಮೇಲೆ ಇಟ್ಟ ಪ್ರೀತಿಗೆ ದ್ರೋಹ ಬಗೆದ್ರಾ ಸುಮಲತಾ? ಸ್ವಾಬಿಮಾನದ ರಾಜಕೀಯಕ್ಕೆ ಎಳ್ಳು (Sumalta Ambarish supports BJP) ನೀರು ಬಿಟ್ರಾ ಮಂಡ್ಯ ಸಂಸದೆ? ಈ ಎಲ್ಲಾ ಪ್ರಶ್ನೆಗಳು ಈಗ ರಾಜಕೀಯ ವಲಯದಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಈ ಎಲ್ಲಾ ಪ್ರಶ್ನೆಗಳು ಉದ್ಭವಿಸಲು ಕಾರಣ ಮಂಡ್ಯದ ಸಂಸದೆ, ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಸುಮಲತಾ ಅಂಬರೀಷ್ (Sumalatha Ambarish) ಅವರು ಬಿಜೆಪಿಗೆ ಅಧಿಕೃತವಾಗಿ ಬೆಂಬಲವನ್ನು ಘೋಷಿಸಿದ್ದು.
ಮಂಡ್ಯದಲ್ಲಿ ಸುದ್ದಿ ಗೋಷ್ಠಿ ಕರೆದು ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು ಮೋದಿ ನೇತೃತ್ವದ ಬಿಜೆಪಿ (BJP) ಪಕ್ಷಕ್ಕೆ ಬೆಂಬಲ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದೆ ವೇಳೆ ತನ್ನ ಮಗ ತಾನು ಇರುವವರೆಗೆ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬುದನ್ನು ಸ್ಪಷ್ಪಡಿಸಿ (Sumalta Ambarish supports BJP) ಕುಟುಂಬ ರಾಜಕೀಯಕ್ಕೆ ತೆರೆ ಎಳೆದಿದ್ದಾರೆ .
ಈ ಹಿಂದೆಯೇ ಮೋದಿಯವರು ಮಂಡ್ಯ ಜಿಲ್ಲೆಯಲ್ಲಿ ನಾನು ಚುನಾವಣೆಗೆ ನಿಂತಾಗ ಬಾಹ್ಯ ಬೆಂಬಲವನ್ನು ನೀಡಿದ್ದರು. ಆದರೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಪ್ರಬಲ ಅಭ್ಯರ್ಥಿಯ ಮುಂದೆ ಜಯಗಳಿಸಿದೆ ,
ಅದು ಅಂಬರೀಷ್ ಅಭಿಮಾನಿಗಳು ಹಾಗೂ ಮಂಡ್ಯ ಜನತೆಯ ಗೆಲುವಾಗಿತ್ತು.
ಇದನ್ನೂ ಓದಿ : https://vijayatimes.com/siddaramaiah-question-to-modi/
ಅಂಬರೀಷ್ ಅವರು ಬದುಕಿದ್ದಾಗ ಅವರ ಅಭಿಮಾನಿಗಳು ಸಾಕಿ ಸಲಹಿ ಅವರ ಅಂತಿಮ ಕ್ಷಣದಲ್ಲಿ ರಾಜನಂತೆ ಕಳುಹಿಸಿ ಕೊಟ್ಟಿದ್ದೀರಿ,
ಇದಕ್ಕೆಲ್ಲ ಬೆಲೆ ಕೊಟ್ಟು ಅವರ ಅಭಿಮಾನಿಗಳು ಮತ್ತು ಮಂಡ್ಯ ಜನತೆಗೋಸ್ಕರ ನಾನು ಚುನಾವಣೆಗೆ ಸ್ಪರ್ಧಿಸಿ ಕಾರ್ಯಕರ್ತರ ಸಹಾಯದಿಂದ ಗೆಲುವಿನ ರುವಾರಿಯಾಗಿ ಹೊರ ಹೊಮ್ಮಿದೆ
ಇದೆ ಹೊತ್ತು ಮಾತನಾಡಿದ ಸುಮಲತಾ ಅವರು ರಾಜಕೀಯ ನನ್ನ ಸ್ವಾರ್ಥಕ್ಕಾಗಿ ಅಲ್ಲ ಬದಲಾಗಿ ನನ್ನ ಮತ್ತು ಅಂಬರೀಷ್ ಅವರನ್ನು ನಂಬಿದ ಮಂಡ್ಯ ಜನತೆಗೋಸ್ಕರ,
ನನ್ನ ಸ್ವಾರ್ಥಕ್ಕಾಗಿ ಚುನಾವಣೆಗೆ ನಿಲ್ಲುವುದಾದರೆ ನನಗೆ ಬೆಂಗಳೂರಿನಲ್ಲಿ ನಿಲ್ಲಲು ಓಪನ್ ಆಫರ್ ಕೂಡ ಬಂದಿತ್ತು ಆದರೆ
ನಾನು ಮಂಡ್ಯದ ಜನತೆ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ದಿಗಾಗಿ ಇಲ್ಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ ಹಾಗೆ ನನ್ನ ಗೆಲುವಿಗೆ ಬಿಜೆಪಿ ಸೇರಿ ಹಲವರು ಸಹಕಾರಿಯಾದರು.
ಇದನ್ನೂ ಓದಿ : https://vijayatimes.com/salary-received-by-priyanka-in-citadel/
ನನ್ನ ಜೊತೆ ನಡೆದರೆ ಏನಾಗಬಹುದು ಎಂಬ ಭಯ ಬೇಡ, ಯಾರನ್ನು ದ್ವೇಷಿಸುವ ಕುಟುಂಬ ಅಂಬರೀಷ್ ಅವರದಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ ಮತ್ತು ನನಗೆ ಶಕ್ತಿಯ ಅಗತ್ಯವಿದೆ ಬದಲಾವಣೆ ಆಗಬೇಕು ಎಂದರೆ ಉತ್ತಮ ಆಡಳಿತ ನೀಡುತ್ತಿರುವ
ನರೇಂದ್ರ ಮೋದಿ (Narendra Modi) ನೇತತ್ವದ ಸರಕಾರದೊಂದಿಗೆ ಮುನ್ನಡೆಯಬೇಕು ಮತ್ತು ಮಂಡ್ಯ ಜಿಲ್ಲೆಯ ರಾಜಕಾರಣವನ್ನು ಶುಚಿಗೊಳಿಸುವ ಕಾರ್ಯ ನಡೆಯಬೇಕು ಎಂದು ಈ ವೇಳೆ ಹೇಳಿದರ