Visit Channel

ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಂತಿಯುತವಾಗಿ ಹೊಳೆಯಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ!

summer

ಸಾಮಾನ್ಯವಾಗಿ ಸೌಂದರ್ಯದ ವಿಷ್ಯಕ್ಕೆ ಬಂದಾಗ ಚಳಿಗಾಲಕ್ಕಿಂತ, ಬೇಸಿಗೆ ಕಾಲ ನಮಗೆ ಹೆಚ್ಚು ಸಹಕಾರಿ ಅಂತ ಹೇಳಬಹುದು. ನಮ್ಮ ತ್ವಚೆಗೆ ರಕ್ಷಣೆಯನ್ನು ಕೂಡ ಈ ಸಮಯದಲ್ಲಿ ನಮ್ಮ ಅನುಕೂಲತೆಗೆ ತಕ್ಕಂತೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

summer

ಬೆಳಗಿನ ಸೂರ್ಯನ ಎಳೆಬಿಸಿಲಿನಲ್ಲಿ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಂಡರೆ ವಿಟಮಿನ್ ಡಿ ಅಂಶ ನಮಗೆ ಹೆಚ್ಚಾಗಿ ಸಿಗುತ್ತದೆ.
ಇದರಿಂದಲೂ ಸಹ ನಮ್ಮ ತ್ವಚೆಗೆ ಹೆಚ್ಚು ಅನುಕೂಲ ಇದೆ. ಮಟಮಟ ಮಧ್ಯಾಹ್ನದ ವಿಪರೀತ ಬಿಸಿಲನ್ನು ಸ್ವಲ್ಪ ಅವಾಯ್ಡ್ ಮಾಡಿದರೆ ಸಾಕು. ಎನ್ನಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನಮ್ಮ ಚರ್ಮದ ಭಾಗದಲ್ಲಿ ಮರ್ಕ್ಯೂರಿ ಅಂಶ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ಬಿಸಿಲಿನ ಸಮಯದಲ್ಲಿ ನಮ್ಮ ಚರ್ಮದ ಭಾಗದಿಂದ ಹೆಚ್ಚು ನೀರಿನ ಅಂಶ ಆವಿಯಾಗುವುದರಿಂದ, ನಮ್ಮ ತ್ವಚೆಯ ಭಾಗಕ್ಕೆ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ.


ಹಾಗಾಗಿ ಪ್ರತಿದಿನ ಸುಮಾರು ಹತ್ತರಿಂದ ಹನ್ನೆರಡು ಗ್ಲಾಸ್ ನೀರು ಕುಡಿಯಬೇಕು ಜೊತೆಗೆ ತಾಜಾ ಹಣ್ಣಿನ ರಸಗಳನ್ನು ಸೇವನೆ ಮಾಡಬೇಕು. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಚರ್ಮದ ಆರೈಕೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.
ಸರಿ ಸುಮಾರು ನಾಲ್ಕರಿಂದ ಐದು ಬಾದಾಮಿ ಬೀಜಗಳನ್ನು ಪುಡಿಮಾಡಿಕೊಳ್ಳಿ ಜೊತೆಗೆ ಒಂದು ಟೀ ಚಮಚ ಹಾಲು, ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಕಡಲೆಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ತುಂಬಾ ದೀರ್ಘಕಾಲದವರೆಗೆ ಈ ಫೇಸ್ ಪ್ಯಾಕ್ ತ್ವಚೆಯ ಮೇಲೆ ಹಾಗೆ ಬಿಡುವುದರಿಂದ ಅತ್ಯಂತ ಪರಿಣಾಮಕಾರಿಯಾದ ಫಲಿತಾಂಶಗಳು ನಿಮ್ಮದಾಗಲಿವೆ.

summer hot

ಕನಿಷ್ಠ ಪಕ್ಷ ಅರ್ಧ ಮುಕ್ಕಾಲು ಗಂಟೆ ಈ ಫೇಸ್ ಪ್ಯಾಕ್ ನ್ನು ತ್ವಚೆಯ ಮೇಲೆ ಹಾಗೆಯೇ ಒಣಗಲು ಬಿಡಬೇಕು. ಟೊಮೆಟೊವನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಇದರ ಒಂದು ಭಾಗದ ರಸ ತೆಗೆದು ಬೌಲ್ ಗೆ ಹಾಕಿಕೊಳ್ಳಿ. ಇನ್ನು ಇದಕ್ಕೆ, ಎರಡು ಹನಿ ಆಲೀವ್ ಎಣ್ಣೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ, ಪೇಸ್ಟ್ ರೀತಿ ಮಾಡಿಕೊಂಡು, ಮುಖಕ್ಕೆ ಹಚ್ಚಿಕೊಳ್ಳಿ. ನೆನಪಿಡಿ ಈ ಮಿಶ್ರಣವನ್ನು ಸುಮಾರು 15-20 ನಿಮಿಷ ಕಾಲ ಹಾಗೆ ಬಿಡಿ. ನಂತರ ಉಗುರು ಬೆಚ್ಚಗಿನ ಬಿಸಿ ನೀರಿನಿಂದ ಮುಖ ತೊಳೆಯಿರಿ.

ಈ ಫೇಸ್‌ಪ್ಯಾಕನ್ನು ವಾರದಲ್ಲಿ ಎರಡು ಸಲ ಬಳಸುವುದರಿಂದ, ಡ್ರೈ ಸ್ಕಿನ್ ಸಮಸ್ಯೆ ನಿವಾರಣೆಯಾಗಿ, ಮುಖದ ಕಾಂತಿ ಹೆಚ್ಚುತ್ತದೆ. ಇನ್ನು ಒಂದು ಸೌತೆಕಾಯಿಯನ್ನು ಸಿಪ್ಪೆ ತೆಗೆದು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಇನ್ನು ಒಂದು ಬೌಲ್ ನಲ್ಲಿ ಎರಡು ಟೇಬಲ್ ಚಮಚ ಹಾಲು, ಅರ್ಧ ಟೇಬಲ್ ಚಮಚ ನಿಂಬೆ ರಸ ಮತ್ತು ಎರಡು ಟೇಬಲ್ ಚಮಚ ಸೌತೆಕಾಯಿ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
ಚೆನ್ನಾಗಿ ರುಬ್ಬಿಕೊಂಡಿರುವ ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ, ಸುಮಾರು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ.

beauty

ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ
ವಾರದಲ್ಲಿ ಮೂರು ಬಾರಿ ಈ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ. ಡ್ರೈ ಸ್ಕಿನ್, ತ್ವಚೆಯ ತುರಿಕೆ ಸಮಸ್ಯೆ ತುರಿಕೆ, ಸಮಸ್ಯೆಗಳು ನಿವಾರಿಸುತ್ತದೆ ಜೊತೆಗೆ ಮುಖದ ಕಾಂತಿ ಹೆಚ್ಚಾಗುತ್ತದೆ.
ಬೇಸಿಗೆಯಲ್ಲಿ ಈ ಬ್ಯುಟಿ ಟಿಪ್ಸ್ ಗಳನ್ನ ಪಾಲಿಸಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ.

  • ಪವಿತ್ರ ಸಚಿನ್

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.