ಮೈಸೂರು ಆ 25 : ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷಕ್ಕೆ ಮೇಯರ್ ಪಟ್ಟ ಒಲಿದಿದೆ ನೂತನ ಮೇಯರ್ ಆಗಿ ಸುನಂದಾ ಅವರು ಆಯ್ಕೆ ಆಗಿದ್ದಾರೆ. ಇಂದು ಬೆಳಗ್ಗೆ ನಡೆದ ಮತದಾನದಲ್ಲಿ ಬಿಜೆಪಿಯ ಸುನಂದಾ ಅವರಿಗೆ 26 ಮತಗಳನ್ನು ಪಡೆದಿದ್ದು ಕಾಂಗ್ರೆಸ್‌ನ ಶಾಂತಕುಮಾರಿ ಅವರಿಗೆ 22 ಮತಗಳು ಲಭಿಸಿವೆ. ಮೇಯರ್ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು. ಮೊದಲ ಬಾರಿಗೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಗೆಲುವಿನ ನಗೆ ಬೀರಿದೆ.
ಜೆಡಿಎಸ್ ನಿಂದ ಅಶ್ವಿನಿ ಅನಂತ್, ಬಿಜೆಪಿಯಿಂದ ಸುನಂದಾ ಫಾಲನೇತ್ರ, ಕಾಂಗ್ರೆಸ್ ನಿಂದ ಶಾಂತಕುಮಾರಿ ಕಣಕ್ಕಿಳಿದಿದ್ದರು , ಒಟ್ಟು ಸದಸ್ಯರ ಸಂಖ್ಯೆ 65 ಇದ್ದು ಒಬ್ಬರ ಸದಸ್ಯತ್ವ ರದ್ದಾಗಿರುವುದರಿಂದ 64 ಸದಸ್ಯರ ಬಲವಿದ್ದ ಮೇಯರ್ ರೇಸ್‌ನಲ್ಲಿ 26 ಮತಗಳೊಂದಿಗೆ ಸುನಂದಾ ನೂತನ ಮೇಯರ್ ಆಗಿ ಆಯ್ಕರಯಾಗಿದ್ದಾರೆ.