ಲಂಚ ಪ್ರಕರಣಗಳಿಗೆ ಹೊಸ ಅರ್ಥ(Supreme Court clarification about corruption) ನೀಡಿದ ಸುಪ್ರೀಂ ಕೋರ್ಟ್
ಭ್ರಷ್ಟಾಚಾರಕ್ಕೆ ಪರೋಕ್ಷ ಸಹಕಾರವೂ ಕಾನೂನುಬಾಹಿರ
ನೇರವಾಗಿ ಹಣ ಸ್ವೀಕರಿಸದ ಅಧಿಕಾರಿಗೂ ಕಾನೂನು ಹೊಣೆಗಾರಿಕೆ ತಪ್ಪದು ಎಂದ ಸುಪ್ರೀಂ ಕೋರ್ಟ್
New delhi: ಸರ್ಕಾರಿ ನೌಕರರು ಸ್ವಂತ ಲಾಭಕ್ಕಾಗಿ ಮಾತ್ರವಲ್ಲದೆ, ಮತ್ತೊಬ್ಬರ ಪರವಾಗಿಯೂ (Supreme Court clarification about corruption) ಲಂಚಕ್ಕೆ ಬೇಡಿಕೆ ಇಟ್ಟರೆ ಅಥವಾ ಲಂಚ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅದು ಕೂಡ ಭ್ರಷ್ಟಾಚಾರ ತಡೆ ಕಾಯಿದೆಯಡಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ (Sanjay Karol) ಹಾಗೂ ಎನ್. ಕೋಟೀಶ್ವರ್ ಸಿಂಗ್ (N. Kotishwar Singh) ಅವರನ್ನೊಳಗೊಂಡ ಪೀಠವು ಮೇ 26ರಂದು ನೀಡಿದ ತೀರ್ಪಿನಲ್ಲಿ, ಸರ್ಕಾರಿ ನೌಕರರು ತಮ್ಮ

ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಯಾರಿಗಾದರೂ ಅಕ್ರಮ ಲಾಭ ತಂದುಕೊಡುವ ಪ್ರಯತ್ನ ಮಾಡಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದೆ.
ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7ರ ಅಡಿಯಲ್ಲಿ, ಲಂಚದ ಹಣವನ್ನು ನೇರವಾಗಿ ತಮ್ಮ ಕೈಗೆ ಪಡೆಯಬೇಕೆಂಬ ನಿಯಮವಿಲ್ಲ. ಲಂಚದ ಬೇಡಿಕೆ ಇಡುವುದು
ಅಥವಾ ಮತ್ತೊಬ್ಬರ ಮೂಲಕ ಹಣ ಸ್ವೀಕರಿಸುವ ವ್ಯವಸ್ಥೆ ಮಾಡಿಕೊಡುವುದೂ ಅಪರಾಧದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರರು ತಮ್ಮ ಪ್ರಭಾವ ಅಥವಾ ಅಧಿಕಾರವನ್ನು (Supreme Court clarification about corruption) ಬಳಸಿಕೊಂಡು ಇತರರ ಮೂಲಕ ಲಂಚದ ವ್ಯವಹಾರ ನಡೆಸಿದರೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಪರೋಕ್ಷವಾಗಿ ನಡೆದ ಭ್ರಷ್ಟಾಚಾರದ ಕೃತ್ಯಗಳಿಗೂ ಸಂಬಂಧಪಟ್ಟ ಅಧಿಕಾರಿಯೇ ಹೊಣೆಗಾರನಾಗುತ್ತಾನೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಬಿದ್ದಿದೆ.
ಪ್ರಕರಣವನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ (Highcourt) ಆದೇಶವನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಿಸಿದ ವೇಳೆ
ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈಕೋರ್ಟ್ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ಮರುಪರಿಶೀಲನೆಗೆ ಅವಕಾಶ ಕಲ್ಪಿಸಿದೆ.
ಇದನ್ನು ಓದಿ : https://vijayatimes.com/us-green-card-rule-change/