ಕಳೆದ ಕೆಲವು ವರ್ಷಗಳಲ್ಲಿ, ವಿಚ್ಛೇದನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಮದುವೆಯಾದಷ್ಟೇ ಶೀಘ್ರವಾಗಿ ದಂಪತಿಗಳು ವಿಚ್ಛೇದನವಾಗಿ (Supreme Court new order) ಬೇರ್ಪಡುತ್ತಾರೆ.
ಪ್ರೇಮ ವಿವಾಹವನ್ನು ಆಯ್ಕೆ ಮಾಡಿಕೊಳ್ಳುವ ದಂಪತಿಗಳು ವಿಚ್ಛೇದನಕ್ಕೆ ಗುರಿಯಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.

ತಮ್ಮ ಭವಿಷ್ಯವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ ನಂತರ, ದಂಪತಿಗಳು ಮದುವೆಯಾಗಲು ಒಪ್ಪುತ್ತಾರೆ ಮತ್ತು ದಾಂಪತ್ಯ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಆದರೆ ಇಬ್ಬರ ನಡುವೆ ಮನಸ್ತಾಪ ಬಂದು ಜಗಳವಾಗಿ ಕೊನೆಗೆ
ವಿಚ್ಛೇದನ ಆಗುವಾಗ ಮದುವೆಯ ಮೂಲಕ ಒಂದಾಗಿರುವ ಎರಡೂ ಕುಟುಂಬಗಳು ಸಹ ಕಾನೂನು ದಾಖಲಾತಿಗೆ ಸಹಿ ಹಾಕುವ ಮೂಲಕ ಸುಲಭವಾಗಿ ಸಂಬಂಧಗಳು ದೂರವಾಗುತ್ತವೆ.ದಾಂಪತ್ಯ ಮುರಿದು ಬೀಳಲು ನಾನಾ
ಕಾರಣಗಳು ಇರುತ್ತವೆ ಆದರೆ ಇತ್ತೀಚಿನ ವರ್ಷಗಳಲ್ಲಿ, ಸಣ್ಣ ಕಾರಣಗಳು ಸಹ ಅನೇಕ ದಂಪತಿಗಳಿಗೆ ವಿಚ್ಛೇದನಕ್ಕೆ ಕಾರಣವಾಗಿವೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದ ವಿಸ್ಮಯಕಾರಿ ವಿಷಯವನ್ನು ಬಹಿರಂಗಪಡಿಸಿದೆ.
ಭಾರತದಲ್ಲಿ ಹೆಚ್ಚಿನ ವಿಚ್ಛೇದನ ಪ್ರಕರಣಗಳು ಪ್ರೀತಿಯನ್ನು ಆಧರಿಸಿದ ಮದುವೆಗಳಿಂದ ಅಂದರೆ ಪ್ರೇಮವಿವಾಹಗಳಿಂದ ಬರುತ್ತವೆ ಎಂದು ಸುಪ್ರೀಂ ಕೋರ್ಟ್ (Supreme Court) ಗಮನಿಸಿದೆ.
ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ವರ್ಗಾವಣೆ ಅರ್ಜಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ಅವಲೋಕನವನ್ನು (Supreme Court new order) ಮಾಡಲಾಗಿದೆ.
ಪ್ರೇಮ ವಿವಾಹಗಳಿಂದ ಹೆಚ್ಚು ವಿಚ್ಛೇದನಗಳು ಉಂಟಾಗುತ್ತಿವೆ :
ಪತಿಯ ಒಪ್ಪಿಗೆಯಿಲ್ಲದೆ ವಿಚ್ಛೇದನವನ್ನು ನೀಡಬಹುದು ಎಂದು ಇತ್ತೀಚಿನ ಕಾನೂನು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾಲಯ ಹೇಳಿದೆ. ವೈವಾಹಿಕ ಸಮಸ್ಯೆಯಿಂದ ಉಂಟಾದ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸಿ ಹೆಚ್ಚಿನ
ಇದನ್ನು ಓದಿ: ಪ. ಬಂಗಾಳದಲ್ಲಿ ನಮಗೆ ಬೆಂಬಲ ಕೊಟ್ರೆ, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಮ್ಮ ಬೆಂಬಲ: ಮಮತಾ
ವಿಚ್ಛೇದನಗಳು ಪ್ರೇಮ ವಿವಾಹಗಳಿಂದ ಮಾತ್ರ ಉಂಟಾಗುತ್ತವೆ’ ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B.R.Gawai) ಮತ್ತು ಸಂಜಯ್ ಕರೋಲ್ (Sanjay Karol) ಅವರ ಪೀಠವು ಹೇಳಿದೆ.
ವಿವಾಹ ವಿಚ್ಛೇದನಕ್ಕೆ ಇನ್ನು ಮುಂದೆ ಆರು ತಿಂಗಳು ಕಾಯಬೇಕಾಗಿಲ್ಲ ಫಟಾಫಟ್ ಆಗಲಿದೆ :
ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಗಳು ಇನ್ನು ಮುಂದೆ 6 ರಿಂದ 18 ತಿಂಗಳ ಕಾಲ ಕಾಯುವ ಅನಿವಾರ್ಯತೆ ತಪ್ಪಲಿದೆ.ಏಕೆಂದರೆ ಸಂವಿಧಾನದ 142ನೇ ಪರಿಚ್ಛೇದದಡಿ
ಸುಪ್ರೀಂಕೋರ್ಟ್ ಕೂಡ ಸರಿಪಡಿಸಲಾರದ ಮಟ್ಟಕ್ಕೆ ಇರುವ ವಿವಾಹ ಪ್ರಕರಣಗಳ ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಇದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ (Section) 13 ಬಿ ನಿಯಮ ಪಾಲನೆಯನ್ನು ಪಕ್ಕಕ್ಕಿರಿಸಿ , ದಂಪತಿಗೆ ತಕ್ಷಣವೇ ವಿಚ್ಚೇದನದ ಆದೇಶ ನೀಡಬಹುದು ಎಂದು ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ನ್ಯಾ. ಸಂಜೀವ್ ಖಾನ್ನ (Sanjeev Khan) ,ಇ. ಜಿ.ಕೆ.ಮಹೇಶ್ (E.G.K.Mahesh) ಅವರು ಈ ಸಂವಿಧಾನದ ಪೀಠದಲ್ಲಿದ್ದರು.
ಅರ್ಜಿದಾರರಾದ ಶಿಲ್ಪಾ ಶೈಲೇಶ್ (Shilpa Shailesh) ಮತ್ತು ವರುಣ್ ಶ್ರೀನಿವಾಸನ್ (Varun Srinivas) ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ 2014ರಲ್ಲಿ ದಾವೆ ಹೂಡಿದ್ದರು.
ಅಲ್ಲಿ ಸೆ.11 ಬಿ ನಿಯಮ ದಂತೆ ಕನಿಷ್ಠ 6 ತಿಂಗಳ ಕಾಯುವಿಕೆ ಕಡ್ಡಾಯ ಎಂದಾಗ ಅರ್ಜಿದಾರ ದಂಪತಿ ಸುಪ್ರೀಂ ಕೋರ್ಟ್ ಮೊರೆ ಹೋದರು.
ನಮ್ಮ ವೈವಾಹಿಕ ಸಂಬಂಧ ಸಂಪರಿಡಿಸಲಾಗದಷ್ಟು ಹದಗೆಟ್ಟಿದೆ, ಹಾಗಾಗಿ ಮತ್ತೆ ವಿವಾಹ ಸಂಬಂಧ ಮುಂದುವರಿಯಲು ಸಾಧ್ಯವೇ ಇಲ್ಲದಾಗಿದೆ.
ಹಾಗಾಗಿ ಸಂವಿಧಾನದ ಸೆಕ್ಷನ್ (Section) 142 ರ ಅಡಿಯಲ್ಲಿ ಪ್ರಾಪ್ತವಾಗಿರುವ ವಿಶೇಷ ಅಧಿಕಾರವನ್ನು ಬಳಸಿ,
ಸೆ.13 ಬಿ ನಿಯಮ ಕೈಬಿಟ್ಟು ತಕ್ಷಣವೇ ವಿಚ್ಛೇದನ ಮಂಜೂರು ಮಾಡಬೇಕೆಂದು ಕೋರಿದ್ದರು. ಮೊದಲಿಗೆ ಅರ್ಜಿ ದ್ವಿಸದಸ ಪೀಠದದುರು ವಿಚಾರಣೆಗೆ ಬಂದಿತ್ತು .
ವಿಷಯ ಸಂವಿಧಾನಾತ್ಮಕ ಪ್ರಶ್ನೆಗಳಿಗೆ ಸಂಬಂಧಿಸಿದ ಬಳಿಕ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಯಿತು.
ರಶ್ಮಿತಾ ಅನೀಶ್