New Delhi : ವೈವಾಹಿಕ ಜೀವನದ ಬಂಧವನ್ನು ಮುಂದುವರಿಸಲು ಸಾಧ್ಯವೇ ಇಲ್ಲದಂತಹ ವಿಶೇಷ ಸನ್ನಿವೇಶಗಳಲ್ಲಿ ವಿಚ್ಚೆದನಕ್ಕಾಗಿ (divorce) 6 ತಿಂಗಳ ಗರಿಷ್ಟ ಕಾಯುವಿಕೆ ಅವಧಿ ನಿಯಮವನ್ನು ಕೈ ಬಿಟ್ಟು ಅರ್ಜಿದಾರರಿಗೆ (Supreme Court Order) ತ್ವರಿತವಾಗಿ ವಿಚ್ಚೇದನ ನೀಡುವ ಅಧಿಕಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಮೇ 01 ಹೇಳಿದೆ.
ಇಂತಹ ವಿಶೇಷ ಸಂದರ್ಭಗಳಲ್ಲಿ “ಪರಿಪೂರ್ಣ ನ್ಯಾಯವನ್ನು ದಯಪಾಲಿಸ ಬೇಕಾಗಿರುವುದರಿಂದ ಭಾರತದ ಸಂವಿಧಾನದ ವಿಧಿ 143 (article 143 of the constitution of india)
ಮತ್ತು 142ರಲ್ಲಿ ಈ ವಿಶೇಷ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬಳಸಿಕೊಳ್ಳಬಹುದು.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ (Section 13 of the Hindu Marriage Act b) ನಿಯಮ ಪಾಲನೆಯನ್ನು ಪಕ್ಕಕ್ಕಿರಿಸಿ ,
ದಂಪತಿಗೆ ತಕ್ಷಣವೇ ವಿಚ್ಚೇದನದ ಆದೇಶ ನೀಡಬಹುದು ಎಂದು ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ (Sanjay Kishan Kaul), ನ್ಯಾ. ಸಂಜೀವ್ ಖಾನ್ನ,ಇ. ಜಿ.ಕೆ.ಮಹೇಶ್ ಅವರು ಈ ಸಂವಿಧಾನದ ಪೀಠದಲ್ಲಿದ್ದರು.
ಇದನ್ನೂ ಓದಿ : http://”lot of hope from BJP” https://vijayatimes.com/lot-of-hope-from-bjp/
ದಂಪತಿಗಳಾದ ಶಿಲ್ಪಾ ಶೈಲೇಶ್ ಮತ್ತು ವರುಣ್ ಶ್ರೀನಿವಾಸನ್ ಹಾಗೂ ಇತರ ಅರ್ಜಿಗಳ ವಿಚಾರಣೆ ವೇಳೆ ಸೋಮವಾರ 5ಜನರ ಸದಸ್ಯರ ಪೀಠ ಮೇಲಿನಂತೆ (Supreme Court Order) ತನ್ನ ನಿಲುವು ಪ್ರಕಟಿಸಿದೆ.
ಹಿಂದೂ ವಿವಾಹ ಪದ್ದತಿಯಲ್ಲಿ ಸುಂಸಾರಿಕ ಜೀವನಕ್ಕೆ ಕಾಲಿಟ್ಟ ದಂಪತಿ, ಒಂದೊಮ್ಮೆ ವಿಚ್ಛೇದನ ತೆಗೆದುಕೊಳ್ಳಬೇಕೆಂದರೆ
ಕನಿಷ್ಠ 6 ತಿಂಗಳವರೆಗೆ ಕಾಯಬೇಕಾದ ನಿಯಮ (ಕಲಂ 13 ಬಿ ) ಹಿಂದೂ ವಿವಾಹ ಕಾಯ್ದೆಯಲ್ಲಿದೆ.
ಪತಿ-ಪತ್ನಿ ಇಬ್ಬರೂ ಸಮ್ಮತಿಸಿಯೇ ಆರ್ಜಿ ಸಲ್ಲಿದ್ದರೂ ತಕ್ಷಣಕ್ಕೆ ವಿಚ್ಛೇದನ ಸಿಗುವುದಿಲ್ಲ.ಕನಿಷ್ಠ 6 ತಿಂಗಳವರೆಗೂ ಕಾಯಲೇಬೇಕು ಎನ್ನುತ್ತದೆ ಈ ನಿಯಮ.
ಮೂಲ ದಾವೆಯಲ್ಲಿನ ಅರ್ಜಿದಾರರಾದ ಶಿಲ್ಪಾ ಶೈಲೇಶ್ ಮತ್ತು ವರುಣ್ ಶ್ರೀನಿವಾಸನ್ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ 2014ರಲ್ಲಿ ದಾವೆ ಹೂಡಿದ್ದರು.
ಅಲ್ಲಿ ಸೆ.11 ಬಿ ನಿಯಮದಂತೆ ಕನಿಷ್ಠ 6 ತಿಂಗಳ ಕಾಯುವಿಕೆ ಕಡ್ಡಾಯ ಎಂದಾಗ ಅರ್ಜಿದಾರ ದಂಪತಿ ಸುಪ್ರೀಂ ಕೋರ್ಟ್ ಮೊರೆ ಹೋದರು.
ನಮ್ಮ ವೈವಾಹಿಕ ಸಂಬಂಧ ಸಂಪರಿಡಿಸಲಾಗದಷ್ಟು ಹದಗೆಟ್ಟಿದೆ, ಹಾಗಾಗಿ ಮತ್ತೆ ವಿವಾಹ ಸಂಬಂಧ ಮುಂದುವರಿಯಲು ಸಾಧ್ಯವೇ ಇಲ್ಲದಾಗಿದೆ.
ಹಾಗಾಗಿ ಸಂವಿಧಾನದ ಸೆಕ್ಷನ್ 142 ರ (Section 142 of the Constitution) ಅಡಿಯಲ್ಲಿ ಪ್ರಾಪ್ತವಾಗಿರುವ ವಿಶೇಷ ಅಧಿಕಾರವನ್ನು ಬಳಸಿ,
ಸೆ.13 ಬಿ ನಿಯಮ ಕೈಬಿಟ್ಟು ತಕ್ಷಣವೇ ವಿಚ್ಛೇದನ ಮಂಜೂರು ಮಾಡಬೇಕೆಂದು ಕೋರಿದ್ದರು. ಮೊದಲಿಗೆ ಅರ್ಜಿ ದ್ವಿಸದಸ ಪೀಠದದುರು ವಿಚಾರಣೆಗೆ ಬಂದಿತ್ತು.
ವಿಷಯ ಸಂವಿಧಾನಾತ್ಮಕ ಪ್ರಶ್ನೆಗಳಿಗೆ ಸಂಬಂಧಿಸಿದ ಬಳಿಕ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಯಿತು.