- ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್
- ಥಗ್ ಲೈಫ್’ ಚಿತ್ರ ಬಿಡುಗಡೆಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ. (Supreme Court orders release of Thug Life)
- ಸಿನಿಮಾ ಬಿಡುಗಡೆ ಸದ್ಯ ಯಾವುದೇ ಪ್ಲ್ಯಾನಿಂಗ್ ಇಲ್ಲವೆಂದ ವಿತರಕರು
Bengaluru: ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ಥಗ್ ಲೈಫ್ (Thug Life) ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ (Karnataka) ವಿರೋಧ ವ್ಯಕ್ತವಾಗಿತ್ತು. ಆದರೆ, ಚಿತ್ರತಂಡ ಕೋರ್ಟ್‌ಗೆ ಹೋಗಿತ್ತು.
ಇದೀಗ ಸುಪ್ರೀಂ ಕೋರ್ಟ್ ಸಿನಿಮಾವನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ್ದು, ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ಸೂಚಿಸಿದೆ.
ಕಮಲ್ ಹಾಸನ್ (Kamal Haasan) ನೀಡಿದ ಕನ್ನಡ ವಿರೋಧಿ ಹೇಳಿಕೆಯಿಂದಾಗಿ ಅವರ ಥಗ್ ಲೈಫ್ ಸಿನಿಮಾವನ್ನು (movie) ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ.
ರಾಜ್ಯಾದ್ಯಂತ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಥಗ್ ಲೈಫ್ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಪ್ರತಿಭಟಿಸಿದ್ದರು.
ಸದ್ಯ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಮಲ್ ಹಾಸನ್‌ಗೆ ಜಯ ಸಿಕ್ಕಿದೆ. ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಸೂಚಿಸಿದೆ.
ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಯಾದ ವೇಳೆ ಗಲಾಟೆ, ಪ್ರತಿಭಟನೆ ನಡೆದರೆ ರಾಜ್ಯ ಕಾನೂನು (State law) ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಕೀಲರು (Lawyers), ನಾವು ಥಗ್ ಲೈಫ್ ಸಿನಿಮಾದ ಬಿಡುಗಡೆಗೆ ನಿಷೇಧ ಹೇರಿಲ್ಲ. ಚಿತ್ರ ಬಿಡುಗಡೆ ವೇಳೆ ಭದ್ರತೆಯನ್ನು ನೀಡಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಧೀಶರು (ನ್ಯಾಯಾಧೀಶರು), ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ (movie theater) ಬೆಂಕಿ ಇಟ್ಟು ಸುಟ್ಟು ಹಾಕುವ ಬೆದರಿಕೆ ಹಾಕಲಾಗುತ್ತಿದೆ. ಹೀಗೆ ಭಯದಲ್ಲಿ ನಿರ್ಮಾಪಕರು (Producers) ಚಿತ್ರವನ್ನು ಹೇಗೆ ಬಿಡುಗಡೆ ಮಾಡ್ತಾರೆ? ಸಿನಿಮಾ ಬಿಡುಗಡೆ ವೇಳೆ ಭದ್ರತೆ ನೀಡುವುದು ರಾಜ್ಯದ ಕರ್ತವ್ಯ ಎಂದು ಸೂಚಿಸಿದ್ದಾರೆ.
ಈಗಾಗಲೇ ಥಗ್ ಲೈಫ್ ರಿಲಿಸ್ ಆಗಿ ಎರಡು ವಾರ ಕಳೆದಿವೆ. ಎಲ್ಲೆಡೆ ಕಡೆಯೂ ಚಿತ್ರವು ಕಳಪೆ ಪ್ರದರ್ಶನ ಕಾಣುತ್ತಿದೆ,
ಗಳಿಕೆ ಕೂಡ ಕುಸಿಯುತ್ತಿದೆ ಹಾಗೂ ಮಲ್ಟಿಪ್ಲೆಕ್ಸ್‌ಗಳು (Multiplex) ಈ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಉತ್ಸಾಹ ತೋರುತ್ತಿಲ್ಲ ಎಂಬುದು ವಿತರಕರ ವಾದವಾಗಿದೆ.
ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ (Green signal) ನೀಡಿರುವುದರಿಂದ ನಿರ್ಮಾಣ ಸಂಸ್ಥೆಯೇ ನೇರವಾಗಿ ಕರ್ನಾಟದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದರೆ, ಬೇರೊಬ್ಬ ವಿತರಕರನ್ನು (distributor) ಆಶ್ರಯಿಸಬೇಕಿದೆ.
ಆದರೆ ಈಗಾಗಲೇ ಹಕ್ಕುಗಳನ್ನು ವೆಂಕಟೇಶ್ (Venkatesh) ಅವರಿಂದ ಅನುಮತಿ ಪಡೆಯಬೇಕು.
ವಿತರಕ ವೆಂಕಟೇಶ್ ಅವರ ಅನುಮತಿ ಇಲ್ಲದೇ ರಿಲೀಸ್ (Release) ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.
ಕರ್ನಾಟಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕರಾಗಲಿ ಅಥವಾ ಮಲ್ಟಿಪ್ಲೆಕ್ಸ್ ಕಡೆಯಿಂದಾಗಲಿ ಯಾವುದೇ ಮಾಹಿತಿ ಬಂದಿಲ್ಲ.
ಅಲ್ಲದೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ರಿಲೀಸ್ ಮಾಡಲು ಆಸಕ್ತಿ ಇಲ್ಲ ಎಂದು ವೆಂಕಟೇಶ್ ತಿಳಿಸಿದ್ದಾರೆ. (Supreme Court orders release of Thug Life)
ಇದನ್ನು ಓದಿ : ಬೆಂಗಳೂರಿನಲ್ಲಿ ಮರ ಬಿದ್ದು ವ್ಯಕ್ತಿ ಸಾ*: ಈ ಬೆನ್ನಲ್ಲೆ ಹೊಸ ಬದಲಾವಣೆ ಆದೇಶ ಹೊರಡಿಸಿದ ಬಿಬಿಎಂಪಿ
ಹೀಗೆ ಥಗ್ ಲೈಫ್ ಸಿನಿಮಾಕ್ಕೆ ಸುಪ್ರೀಂನಿಂದ ಗ್ರೀನ್ ಸಿಗ್ನಲ್ ಸಿಕ್ಕರೂ, ಬಿಡುಗಡೆ ವಿಚಾರದಲ್ಲಿ ಸಂಕಷ್ಟ (trouble) ತಪ್ಪಿಲ್ಲ ಎನ್ನಬಹುದು.