Punishing family for guilt of Criminal is inhuman act: Supreme Court sparks Bulldozer Action
New Delhi: ಗುಜರಾತ್ನಲ್ಲಿ (Gujarath) ನಡೆದ ಪ್ರಕರಣವೊಂದರ ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಬುಲ್ಡೋಜರ್ ನ್ಯಾಯದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಒಬ್ಬ ವ್ಯಕ್ತಿ ಪ್ರಕರಣದಲ್ಲಿ ಆರೋಪಿ ಎಂಬ ಕಾರಣಕ್ಕೆ ಬುಲ್ಡೋಜರ್ ಅನ್ನು ಆತನ ಮನೆಯ ಮೇಲೆ ಬಳಸಬಹುದಾ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್ (Hrishikesh Roy), ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ಅವರ ಪೀಠ ಕೇಳಿದೆ. ಆರೋಪಿ ತಪ್ಪಿತಸ್ಥನೋ, ನಿರಪರಾಧಿಯೋ ಅಲ್ಲವೆಂದರೆ ಆತ ಏನು ಅಪರಾಧ ಮಾಡಿದ್ದಾನೆಯೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವೇ ಹೊರತು ಸರ್ಕಾರವಲ್ಲ ಎಂದು ಪೀಠ ಹೇಳಿದೆ.
ಸುಭದ್ರ ಕಾನೂನು ಇರುವ ದೇಶದಲ್ಲಿ ಒಬ್ಬ ವ್ಯಕ್ತಿಯ ತಪ್ಪಿಗೆ ಆತನ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅಥವಾ ಅವರ ಮನೆಯನ್ನು ಕೆಡವುವ ಮೂಲಕ ಶಿಕ್ಷೆ ವಿಧಿಸುವುದು ಎಷ್ಟು ಸರಿ ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದೆ. ಇಂತಹ ಬುಲ್ಡೋಜರ್ ಕ್ರಮವನ್ನು ನ್ಯಾಯಾಲಯ ನಿರ್ಲಕ್ಷಿಸುವಂತಿಲ್ಲ.
ಅಂತಹ ಕ್ರಮಕ್ಕೆ ಅವಕಾಶ ನೀಡುವುದು ಕಾನೂನಿನ ನಿಯಮದ ಮೇಲೆ ಬುಲ್ಡೋಜರ್ ಹತ್ತಿಸಿದಂತೆ. ಅಪರಾಧದಲ್ಲಿ ಭಾಗಿಯಾಗಿರುವುದು ಯಾವುದೇ ಆಸ್ತಿಯನ್ನು ಕೆಡವಲು ಆಧಾರವಲ್ಲ ಹಾಗಾಗಿ ಅಪರಾಧಿಯ ಅಪರಾಧಕ್ಕೆ ಕುಟುಂಬಸ್ಥರಿಗೆ ಶಿಕ್ಷೆ ವಿಧಿಸುವಂತಿಲ್ಲ ಎಂದು ಹೇಳಿದೆ.
ಗುಜರಾತ್ನ ಜಾವೇದ್ ಅಲಿ ಎಂಬ ಅರ್ಜಿದಾರರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದ್ದು ಕುಟುಂಬದ ಸದಸ್ಯರ ವಿರುದ್ಧ ಎಫ್ಐಆರ್ (FIR) ನಿಂದಾಗಿ ಅವರ ಮನೆಯನ್ನು ಕೆಡವಲು ನಗರಸಭೆಯಿಂದ ನೋಟಿಸ್ ಅಥವಾ ಬೆದರಿಕೆ ಹಾಕಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ವಕೀಲರು ಸುಪ್ರೀಂ ಕೋರ್ಟ್ಗೆ ತಿಳಿಸಿದರು. ಅವರ ಕುಟುಂಬದ ಮೂರು ತಲೆಮಾರುಗಳು ಸುಮಾರು ಎರಡು ದಶಕಗಳಿಂದ ಈ ಮನೆಗಳಲ್ಲಿ ವಾಸಿಸುತ್ತಿದೆ.
ಆದರೆ ಪುರಸಭೆಯ ಅಧಿಕಾರಿಗಳು ಅರ್ಜಿದಾರರ ಕುಟುಂಬದ ಮನೆಯನ್ನು ಬುಲ್ಡೋಜರ್ನಿಂದ ಕೆಡವುವುದಾಗಿ ಬೆದರಿಕೆ ಹಾಕಿದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪಾಲಿಕೆ ಹಾಗೂ ಸ್ಥಳೀಯ ಆಡಳಿತಕ್ಕೆ ನೋಟಿಸ್ (Notice) ಜಾರಿ ಮಾಡಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
Supreme Court sparks Bulldozer Action kannada Breaking
New Delhi: During the hearing of a case in Gujarat, the Supreme Court raised questions about bulldozer justice. Justice Hrishikesh Roy, Justice Sudhanshu Dhulia and Justices whether a bulldozer can be used on a person’s house because he is an accused in a case SVN Bhatti’s bench asked. The bench said that it is the job of the court and not the government to decide whether the accused is guilty or innocent or what crime he has committed.
The Supreme Court has questioned whether it is right to punish a person for his wrongdoing by taking action against his family members or demolishing his house in a country where there is a sound law. Such a bulldozer action cannot be ignored by the court.
Allowing such action is like bulldozing the rule of law. Involvement in the crime is not a ground for demolishing any property and therefore the family members cannot be punished for the crime of the criminal.
The Supreme Court passed the order while hearing a petition filed by a petitioner, Javed Ali of Gujarat, who claimed that the municipality had issued a notice or threatened to demolish his house due to an FIR against a family member. During the hearing, the petitioner’s counsel informed the Supreme Court. Three generations of his family have lived in these houses for nearly two decades.
But the municipal authorities threatened to bulldoze the petitioner’s family home. The Supreme Court, which heard the case, issued a notice to the Corporation and the local administration and ordered them to maintain the status quo for the time being.