- ಸಿನಿಮಾ ನೋಡುಗರ ಸಂಖ್ಯೆ ಕಡಿಮೆಯಾಗ್ತಿದೆ
- ಜನರಿಗೆ ಕೈಗೆಟುಕುವ ದರ ಬೇಕು ಸುಪ್ರೀಂ ಕೋರ್ಟ್ ಅಭಿಪ್ರಾಯ
- ಮಲ್ಟಿಪ್ಲೆಕ್ಸ್‌ಗಳಲ್ಲಿ ನೀರಿಗೂ ₹100, ಕಾಫಿಗೂ ₹700 ಅಸಮಂಜಸ ದರಗಳ ವಿರುದ್ಧ ಕೋರ್ಟ್ ತೀವ್ರ ಟಿಪ್ಪಣಿ
New delhi: ಕರ್ನಾಟಕ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ (Multiplex) ಸಿನಿಮಾ ಟಿಕೆಟ್ ದರವನ್ನು ₹200 ಕ್ಕೆ ಮಿತಿಗೊಳಿಸಿದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಮೌಖಿಕವಾಗಿ ಬೆಂಬಲ ವ್ಯಕ್ತಪಡಿಸಿದೆ. (supreme court support for ticket prices)
ಈಗಾಗಲೇ ಸಿನೆಮಾ ವೀಕ್ಷಕರ ಸಂಖ್ಯೆ ಕುಸಿಯುತ್ತಿದೆ. ಇಂಥ ಸಂದರ್ಭದಲ್ಲಿ ಜನರು ಚಿತ್ರಮಂದಿರಗಳಿಗೆ ಬರುವಂತೆ ಮಾಡಲು ಸೂಕ್ತ ಕ್ರಮ ಬೇಕು; ಇಲ್ಲದಿದ್ದರೆ ಚಿತ್ರಮಂದಿರಗಳು ಖಾಲಿಯಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಎಚ್ಚರಿಸಿದೆ.

ಕರ್ನಾಟಕ ಸರ್ಕಾರ 2025ರಲ್ಲಿ ಜಾರಿಗೆ ತಂದ ಕರ್ನಾಟಕ ಸಿನಿಮಾ (ನಿಯಂತ್ರಣ) ತಿದ್ದುಪಡಿ ನಿಯಮಗಳಡಿ, ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿ ಸಿನಿಮಾ ಟಿಕೆಟ್ (Ticket) ಬೆಲೆ ₹200 ಕ್ಕೆ ಮಿತಿಗೊಳಿಸುವ ಆದೇಶ ನೀಡಿತ್ತು.
ಈ ನಿರ್ಧಾರವನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ (Association) ಹೈಕೋರ್ಟ್ ಮೊರೆ ಹೋಗಿತ್ತು. (supreme court support for ticket prices)
ಹೈಕೋರ್ಟ್‌ನ ಏಕಸದಸ್ಯ ಪೀಠ ತಾತ್ಕಾಲಿಕವಾಗಿ ಈ ಮಿತಿಗೆ ತಡೆ ನೀಡಿತ್ತು.ನಂತರ ಸರ್ಕಾರ ಹೈಕೋರ್ಟ್ (High Court) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು.
ಆ ಪೀಠ ಸರ್ಕಾರದ ಪರವಾಗಿ ತೀರ್ಪು ನೀಡುತ್ತಾ, ಟಿಕೆಟ್ ದರ ಮಿತಿಯ ಕುರಿತು ಅಂತಿಮ ತೀರ್ಪು ಬರುವವರೆಗೆ ಮಲ್ಟಿಪ್ಲೆಕ್ಸ್‌ಗಳು ಪ್ರತಿ ಮಾರಾಟವಾದ ಟಿಕೆಟ್‌ಗಳ ಸಮಗ್ರ ದಾಖಲೆಗಳನ್ನು ಸಂಗ್ರಹಿಸಬೇಕು ಎಂದು ಸೂಚಿಸಿತ್ತು.
ಈ ತೀರ್ಪಿನ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್‌ಗೆ ದೂರು ನೀಡಿತು.
ನ್ಯಾಯಮೂರ್ತಿಗಳು ವಿಕ್ರಮ್ ನಾಥ್ (Vikram Nath) ಮತ್ತು ಸಂದೀಪ್ ಮೆಹ್ತಾ (Sandeep Mehta) ಅವರನ್ನೊಳಗೊಂಡ ಪೀಠ ಈ ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸಿ, ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ದಾಖಲೆ ಸಂಗ್ರಹ ಆಜ್ಞೆಗೆ ತಾತ್ಕಾಲಿಕ ತಡೆ ನೀಡಿತು.
ಅಂದರೆ, ಮುಂದಿನ ಆದೇಶ ಬರುವವರೆಗೆ ಮಲ್ಟಿಪ್ಲೆಕ್ಸ್‌ಗಳಿಗೆ ಪ್ರತಿ ಟಿಕೆಟ್‌ನ ವಹಿವಾಟಿನ ವಿವರ ಸಂಗ್ರಹಿಸುವ ಕಡ್ಡಾಯವಿಲ್ಲ.
ಆದರೆ ಇದೇ ವೇಳೆ, ಟಿಕೆಟ್ ದರವನ್ನು ₹200 ಕ್ಕೆ ಮಿತಿಗೊಳಿಸಿದ ಸರ್ಕಾರದ ನಿರ್ಧಾರಕ್ಕೆ ಕೋರ್ಟ್ ಮೌಖಿಕ ಬೆಂಬಲ ನೀಡಿದೆ.
ಪೀಠದ ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯದಲ್ಲಿ ಚಿತ್ರಮಂದಿರದ ಅಸಮಂಜಸ ಬೆಲೆ ನಿಲುವಿನ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದರು.
ಸಿನಿಮಾಗಳು ಈಗಾಗಲೇ ಹಿನ್ನಡೆ ಅನುಭವಿಸುತ್ತಿವೆ. ಜನರು ಚಿತ್ರಮಂದಿರಕ್ಕೆ ಬರುವುದೇ ಕಡಿಮೆಯಾಗಿದೆ.
ಆದರೆ ನೀರಿನ ಬಾಟಲಿಗೆ ₹100, ಕಾಫಿಗೆ ₹700 ವಸೂಲಿ ಮಾಡುತ್ತಿದ್ದಾರೆ.
ಈ ಅಸಮಂಜಸ ವಸೂಲಿಯನ್ನು ನಿಯಂತ್ರಿಸದಿದ್ದರೆ ಜನರ ಆಸಕ್ತಿ ಕುಸಿಯುತ್ತದೆ ಎಂದು ಕೋರ್ಟ್ ಹೇಳಿದೆ.
ಚಿತ್ರಮಂದಿರಗಳ ಉಳಿತಾಯದ ಹೆಸರಿನಲ್ಲಿ ಪ್ರೇಕ್ಷಕರಿಗೆ ಭಾರ ಹಾಕುವುದು ಸರಿಯಲ್ಲ.
ಟಿಕೆಟ್ ದರವನ್ನು ₹200 ಕ್ಕೆ ಮಿತಿಗೊಳಿಸುವ ಸರ್ಕಾರದ ಕ್ರಮ ಸಮಂಜಸವಾಗಿದೆ.
ಜನರು ಸಿನಿಮಾ ವೀಕ್ಷಣೆಯ ಖುಷಿಯನ್ನು ಕಳೆದುಕೊಳ್ಳಬಾರದು. ಇಲ್ಲದಿದ್ದರೆ ಚಿತ್ರಮಂದಿರಗಳು ಖಾಲಿಯಾಗುತ್ತವೆ ಎಂದು ಎಚ್ಚರಿಸಿದ್ದಾರೆ.