Bengaluru : ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹೇಗೆ ಪಾಲು ಇದೆಯೋ ಅದೇ ರೀತಿ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಪಾಲಿದೆ ಎಂದು ಹೈಕೋರ್ಟ್ (High Court) ತುಮಕೂರಿನ ಯಲ್ಲಾಪುರದ ವೆಂಕಟೇಶ ಮತ್ತು ಅವರ ತಾಯಿ ವೆಂಕಟ ಲಕ್ಷ್ಮಮ್ಮ (Supreme Court verdict) ಮೇಲ್ಮನವಿ ಸಲ್ಲಿಸಿದ್ದರು.

ಇದನ್ನು ನ್ಯಾ. ಪಿ.ಎಸ್. ದಿನೇಶ್ ಕುಮಾರ್ (P.S. Dinesh Kumar) ವಿಚಾರಣೆ ನಡೆಸಿ ವಿಭಾಗೀಯ ಪೀಠ ಈ ಆದೇಶವನ್ನು ಮಾಡಿದೆ.
ತಂದೆ ಆಸ್ತಿ ಮೇಲೆ ಸಹೋದರಿಗೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗುವುದಿಲ್ಲ ಎಂಬ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಇಂದಿಗೂ ಕೂಡ ಗ್ರಾಮೀಣ ಭಾಗದಲ್ಲಿ ಹೆಣ್ಣು ಮಗಳಿಗೆ ಮದುವೆ ಮಾಡಿಕೊಟ್ಟರೇ ಹೆಣ್ಣು ಮಗಳ ಆಸ್ತಿ ಪಾಲು ಅಲ್ಲಿಗೇ ಸರಿ ಹೋಗುತ್ತದೆ (Supreme Court verdict) ಅಥವಾ ಗಂಡು ಮಕ್ಕಳು ತಂದೆ ಆಸ್ತಿ ಪಡೆದು
ನಂತರ ತಮ್ಮ ಸಹೋದರಿಯರಿಗೆ ಚಿನ್ನಾಭರಣ ನೀಡಿ ಸಮಾನ ಆಸ್ತಿಯಿಂದ ಅವರನ್ನು ದೂರವಿಡುತ್ತಿದ್ದಾರೆ.
ದಶಕಗಳ ಹಿಂದೆಯೇ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲಿದೆ ಎಂಬ ಕಾನೂನು ಜಾರಿಯಾಗಿದೆ.
ಇದನ್ನೂ ಓದಿ : https://vijayatimes.com/mandya-assembly-constituency/
ಆದರೂ ಈ ಕಾನೂನು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸುಪ್ರೀಂ ಕೋರ್ಟ್ (Supreme Court) ಇದೇನು ಮೊದಲ ಬಾರಿ ಈ ರೀತಿ ತೀರ್ಪು ಕೊಟ್ಟಿಲ್ಲ.
ಈ ಹಿಂದೆ ವಿನೀತಾ ಶರ್ಮಾ ಎನ್ನುವವರ ಪ್ರಕರಣದಲ್ಲಿ ಕೂಡ ತಂದೆಯ ಆಸ್ತಿಯಲ್ಲಿ ಪುತ್ರನಿಗೆ ಹೇಗೆ ಸರಿಸಮನಾದ ಪಾಲು ಕೊಡಲಾಗುತ್ತದೋ
ಅದೇ ರೀತಿ ಪುತ್ರಿ ಸಹ ಅರ್ಹರಾಗಿರುತ್ತಾರೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ವಿವರ :
ತುಮಕೂರಿನ ಯಲ್ಲಾಪುರ ಗ್ರಾಮದಲ್ಲಿ ಕಲಗಿರಿಯಪ್ಪ ಎಂಬುವರಿಗೆ ಲಕ್ಷ್ಮೇದೇವಮ್ಮ ಮತ್ತು ಕೆ.ಗೋವಿಂದಯ್ಯ ಎಂಬ ಮಕ್ಕಳು ಇದ್ದರು.
ತಂದೆ ಕಲಗಿರಿಯಪ್ಪ ಹೆಸರಿನಲ್ಲಿ 1943 ರಿಂದ 1949 ವರೆಗೆ ವಿವಾದಿತ ಜಮೀನು ನೋಂದಣಿಯಾಗಿತ್ತು.
1964ರಲ್ಲಿ ತಂದೆ ಮೃತಪಡುತ್ತಾರೆ. ಮಗಳು ಲಕ್ಷ್ಮೇ ದೇವಮ್ಮ, ತನ್ನ ತಂದೆಯ ಆಸ್ತಿಯಲ್ಲಿ ಪಾಲು ಬೇಕೆಂದು 2011ರಲ್ಲಿ ಸಿವಿಲ್ ದಾವೆ ಹೂಡಿದ್ದರು,
ಆದರೆ ತಂದೆಯ ಆಸ್ತಿಯು ಸಹೋದರ ಗೋವಿಂದಯ್ಯ ರವರ ಸ್ವಾಧೀನದಲ್ಲಿತ್ತು. ನಂತರ ಸಹೋದರ ಸಹ ಸಾವನ್ನಪ್ಪಿದ್ದರು ನಂತರ ಸಹೋದರನ ಪತ್ನಿ ಮತ್ತು ಮಕ್ಕಳು ಆಸ್ತಿ ಅನುಭವಿಸುತ್ತಿದ್ದರು.
ಹಾಗಾಗಿ ಮಗಳು ಲಕ್ಷ್ಮೇ ದೇವಮ್ಮ ತಂದೆಯ ಆಸ್ತಿಯಲ್ಲಿ ತನಗೂ ಸಮಾನ ಪಾಲು ದೊರಕಬೇಕೆಂದು ಸಹೋದರನ ಪುತ್ರ ಮತ್ತು ಪತ್ನಿಗೆ ಆದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಕೋರಿದ್ದರು.
ಇದನ್ನೂ ಓದಿ : https://vijayatimes.com/himanta-biswa-sharma-statement/
ಅದರಂತೆ ದಾವೆಯ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ, ಲಕ್ಷ್ಮೇದೇವಮ್ಮಗೆ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಇದೆ ಎಂದು 2018ರಲ್ಲಿಯೇ ಆದೇಶಿಸಿದೆ.
ಆದರೆ ಈ ಆದೇಶ ಪ್ರಶ್ನಿಸಿ ಸಹೋದರನ ಪುತ್ರ ಮತ್ತು ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ವಿಚಾರಣೆ ನಡೆಸಿ ಮಗಳು ಕೂಡ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಹೊಂದಲು ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.
- ರಶ್ಮಿತಾ ಅನೀಶ್